More

    ಮದ್ದೆಲಕಟ್ಟ ಕಿರು ಸೇತುವೆಯಲ್ಲಿ ಸಂಚಾರ ಬಲುಕಷ್ಟ

    ಉಡುಪಿ: ಕೆಲ ದಶಕಗಳ ಹಿಂದೆ ಈ ಭಾಗದಲ್ಲಿ ಇದೇ ಕಿರು ಸೇತುವೆಯದ್ದೇ ದರ್ಬಾರು ಇತ್ತು. ಪಾದಚಾರಿಗಳು, ಎತ್ತಿನಗಾಡಿ, ದ್ವಿಚಕ್ರ ವಾಹನ ವಾಹನಗಳಿಗೆ ಇನ್ನೊಂದು ಗ್ರಾಮಕ್ಕೆ ತೆರಳಲು ಸಂಪರ್ಕ ಕೊಂಡಿಯಾಗಿತ್ತು.

    ಕಾಲ ಬದಲಾದಂತೆ ಇನ್ನೊಂದೆಡೆ, ರಸ್ತೆ, ಹೆದ್ದಾರಿ ನಿರ್ಮಾಣದಿಂದಾಗಿ ಮದ್ದೆಲಕಟ್ಟ ಕಿರು ಸೇತುವೆ ರ್ನಿಲಕ್ಷ್ಯಕ್ಕೊಳಗಾಗಿದೆ. ಅಲ್ಲದೆ, ಸ್ಥಳಿಯರಿಗೆ ಹೊರ ಹೋಗಲು ಸುತ್ತುಬಳಸಿ ಹೋಗಬೇಕಾಗಿದೆ. ಹೀಗಾಗಿ ಈ ಕಿರು ಸೇತುವೆಗೆ ವಿಸ್ತರಣೆಗೊಂಡು ಜನರಿಗೆ ಸಹಕರಿಸಬೇಕೆಂಬ ತುಡಿತವಿದೆ. ನನ್ನತ್ತ ಜಿಲ್ಲಾಡಳಿತ ಕಣ್ಣು ಹಾಯಿಸಲಿ ಎಂದು ಮೊರೆಯಿಡುತ್ತಿದೆ.

    ಮದ್ದೆಲಕಟ್ಟ ಕಿರು ಸೇತುವೆಯು ಉಡುಪಿ ತಾಲೂಕಿನ ಮಣಿಪುರ ಗ್ರಾಪಂ ವ್ಯಾಪ್ತಿಯಲ್ಲಿ ಇದೆ. ಆದರೆ, ಇದರ ಗುರುತು ಇರುವುದು ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ. ಈ ಹಿನ್ನೆಲೆಯಲ್ಲಿಯೇ ಕಿರು ಸೇತುವೆ ರ್ನಿಲಕ್ಷ$್ಯಕ್ಕೊಳಪಟ್ಟಿರಬಹುದು. ಮರ್ಣೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆಯ ಮೂಲಕ ಪಟ್ಲ ಪ್ರೌಢಶಾಲೆ (1.6 ಕಿಮೀ) ಸಂಪರ್ಕಿಸುವ ರಸ್ತೆಯಲ್ಲಿ ಈ ಸೇತುವೆ ಇದೆಯಾದರೂ ವಿಸ್ತರಣೆ ಭಾಗ್ಯ ಕಂಡಿಲ್ಲ.

    ಕಳೆದ ವರ್ಷ ಸೇತುವೆಯ ರಿಪೇರಿ ಮಾಡಬೇಕೆಂದು ಚರ್ಚಿಸಿ, ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿತ್ತು. ಬಳಿಕ ರಿಪೇರಿಗೆಂದು ಹಣವನ್ನೂ ಮೀಸಲಿಡಲಾಗಿತ್ತು. ಆದರೆ, ರಿಪೇರಿ ಬದಲು ಸೇತುವೆ ವಿಸ್ತರಣೆ ಮಾಡುವಂತೆ ಸಲಹೆ&ಸೂಚನೆ ಬಂದಿದ್ದರಿಂದ ಮತ್ತೆ ಮದ್ದೆಲಕಟ್ಟ ಸೇತುವೆ ಮರೆತೇ ಹೋಗಿದೆ. ಉಡುಪಿ ಜಿಲ್ಲಾಧಿಕಾರಿ ಮುತುವರ್ಜಿ ವಹಿಸಿ, ಸೇತುವೆ ವಿಸ್ತರಣೆಗೊಳಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮದ ಜನರು ಒತ್ತಾಯಿಸಿದ್ದಾರೆ.

    ಸುತ್ತುಬಳಸಿ ಹೋಗುವ ಅನಿವಾರ್ಯತೆ
    ರಿಕ್ಷಾ ಮಾತ್ರ ಸಾಗುವಷ್ಟು ಎರಡೂವರೆ ಅಡಿ ಅಗಲವಿರುವ ಮದ್ದೆಲಕಟ್ಟ ಸೇತುವೆಯ ಎತ್ತರವೂ ಕಡಿಮೆ ಇದೆ. ಅಲ್ಲದೆ, ಒಂದು ಬದಿಯಲ್ಲಿ ಕಿರು ಅಣೆಕಟ್ಟು ಇದ್ದು ಮಳೆಗಾಲದಲ್ಲಿ ಸೇತುವೆಯ ಸಮನಾಂತರವಾಗಿ ನೀರು ತುಂಬಿ ಹರಿಯುತ್ತವೆ. ಎರಡೂ ಬದಿಯ ತಡೆಗೋಡೆಯ ಎತ್ತರವೂ ಸಮರ್ಪಕವಾಗಿ ಇಲ್ಲ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಜನ ಭೀತಿಯಲ್ಲೇ ಸಾಗಬೇಕಿದೆ. ಆ ಸಂದರ್ಭದಲ್ಲಿ ಇದು ಪಾದಚಾರಿಗಳಿಗೆಂದು ನಿರ್ಮಿಸಲಾಗಿತ್ತು. ಇದೀಗ ಬೈಕ್​, ರಿಾ, ಹಾಗೂ ಸಣ್ಣ ಕಾರುಗಳು ಸಂಚರಿಸುತ್ತಿದ್ದು, ಅಪಾಯ ತಪ್ಪಿದ್ದಲ್ಲ. ಇಲ್ಲಿನ ಗ್ರಾಮಸ್ಥರಿಗೆ ಅತ್ತಿಂದಿತ್ತ ಘನವಾಹನದ ಮೂಲಕ ಸಂಚರಿಸಲು 2.4 ಕಿ.ಮೀ. ದೂರದ ಆತ್ರಾಡಿ&-ಪಟ್ಲ ರಾಜ್ಯ ಹೆದ್ದಾರಿಯಲ್ಲಿ ಸುತ್ತುಬಳಸಿ ಹೋಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts