More

  ಮಡಬೂರು ಶ್ರೀ ದುರ್ಗಾಂಬಾ ರಥೋತ್ಸವ

  ಎನ್.ಆರ್.ಪುರ: ಮಡಬೂರು ದಾನಿವಾಸ ಶ್ರೀ ದುರ್ಗಾಂಬಾ ದೇವಿಯ ರಥೋತ್ಸವ ಶುಕ್ರವಾರ ವೈಭವದಿಂದ ನಡೆಯಿತು.

  ಬೆಳಗ್ಗೆಯಿಂದಲೇ ಅಮ್ಮನವರಿಗೆ ವಿಶೇಷ ಪೂಜೆ, ಬಲಿ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ 12.30ಕ್ಕೆ ರಥದ ಪೂಜೆ ನಂತರ ಭಕ್ತರು ತೇರನ್ನು ಎಳೆದರು. ಶಾಸಕ ಟಿ.ಡಿ.ರಾಜೇಗೌಡ ದಂಪತಿ ರಥೋತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು. ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ರಾತ್ರಿ ರಾಜಬೀದಿಯಲ್ಲಿ ಅಮ್ಮನವರನ್ನು ದೇವಸ್ಥಾನದಿಂದ ವೆಂಕಟರಮಣ ದೇವಸ್ಥಾನದವರೆಗೆ ಪೂರ್ಣ ರಥೋತ್ಸವ, ನಂತರ 11 ಸುತ್ತು ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ಶನಿವಾರ ಬೆಳಗ್ಗೆ ಸತ್ಯನಾರಾಯಣ ಸ್ವಾಮಿ ವ್ರತ, ರಾಜಬೀದಿಯಲ್ಲಿ ಅಮ್ಮನವರ ಪಲ್ಲಕ್ಕಿ ಮೆರವಣಿಗೆ ಹಾಗೂ ರಾತ್ರಿ ಕೆಂಡಾರ್ಚನೆ ನಡೆಯಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts