More

    ಸಂಭ್ರಮದ ಅಡ್ಡಪಲ್ಲಕ್ಕಿ ಉತ್ಸವ

    ಅಣ್ಣಿಗೇರಿ: ಪಟ್ಟಣದ ದಾಸೋಹ ಮಠದ 60ನೇ ಜಾತ್ರಾ ಮಹೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.

    ಪಟ್ಟಣದ ಪ್ರಮುಖ ರಸ್ತೆಯುದ್ದಕ್ಕೂ ಭಕ್ತರಿಂದ ಸಿದ್ಧಾರೂಢ ಮಹಾರಾಜ ಕೀ ಜೈ, ಗುರುನಾಥಾರೂಢ ಮಹಾರಾಜ ಕೀ ಜೈ, ರುದ್ರಮುನಿ ಸ್ವಾಮೀಜಿ ಕೀ ಜೈ ಹಾಗೂ ಶಂಕರರೇಂದ್ರ ಮಹಾರಾಜ ಕೀ ಜೈ ಎಂಬ ಜಯಘೊಷಗಳು ಮಾರ್ದನಿಸಿದವು. ಪಲ್ಲಕ್ಕಿಯಲ್ಲಿ ಕುಳಿತ ಶಿವಕುಮಾರ ಸ್ವಾಮೀಜಿಗಳು ಭಕ್ತರನ್ನು ಆಶೀರ್ವದಿಸಿದರು.

    ದಾಸೋಹ ಮಠದಿಂದ ಪ್ರಾರಂಭವಾದ ಪಲ್ಲಕ್ಕಿ ಮೆರವಣಿಗೆಯೂ ಮಾರ್ಕೆಟ್, ಅಗಸಿ ಓಣಿವರೆಗೆ ತೆರಳಿ ದಾಸೋಹ ಮಠದ ತವರು ಮನೆಯಾದ ಜಾಡಗೆರೆಯಲ್ಲಿ ಅಡ್ಡ ಪಲ್ಲಕ್ಕಿ ಉತ್ಸವ ಸಂಪನ್ನಗೊಂಡಿತು. ಜಾಡಗೆರೆ ಓಣಿಯಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು. ಸಂಜೆ ವೇಳೆಗೆ ಪಾರ ಭಕ್ತ ಸಮೂಹದೊಂದಿಗೆ ಮತ್ತೆ ಶ್ರೀಮಠಕ್ಕೆ ಆಗಮಿಸಿತು.

    ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ರಾಣೆಬೆನ್ನೂರಿನ ಸಿದ್ದಪ್ಪ ಅಟವಾಳಗಿ ಮನೆತನದವರಿಂದ ಗುಗ್ಗಳ ಕಾರ್ಯಕ್ರಮ ನಡೆಯಿತು. ಅಣ್ಣಿಗೇರಿ ಪಟ್ಟಣದ ವಿವಿಧ ಯುವಕ ಮಂಡಳಗಳಿಂದ ಕೋಲಾಟ ಹಾಗೂ ಮಕ್ಕಳ ಕಾರ್ಯಕ್ರಮಗಳು ಜರುಗಿದವು. ದಾಸೋಹ ಮಠ ಟ್ರಸ್ಟ್ ಅಧ್ಯಕ್ಷ ರಾಜೇಶ್ವರರಾವ್ ದೇಸಾಯಿ, ಜಾತ್ರಾ ಮಹೋತ್ಸವ ಅಧ್ಯಕ್ಷ ಶ್ರೀಕುಮಾರ ಸಿಕ್ಕೆದೇಸಾಯಿ, ಶರಣಬಸಪ್ಪ ದೇಶಮುಖ್, ರಾಜು ಯಣ್ಣಿ, ನಿಜಲಿಂಗಪ್ಪ ಅಕ್ಕಿ, ಅರ್ಜುನ ಕಲಾಲ, ವಿ.ವಿ. ಬೆಂತೂರ, ಶಿವಾನಂದ ಬಳಿಗಾರ, ಯಲ್ಲಪ್ಪ ಬೆಳಹಾರ, ಚಂದ್ರು ಕರಡಿ, ಭಗವಂತಪ್ಪ ಪುಟ್ಟಣ್ಣವರ, ಮಹೇಶ ಅಂಗಡಿ, ರಮೇಶ ಕರೆಟ್ಟನವರ, ಈಶಣ್ಣ ಹೊಂಬಳ, ವಿಜಯಕುಮಾರ ಕಂಬಿಮಠ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts