More

    ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಯಂತ್ರೋಪಕರಣ ಸಹಕಾರಿ

    ಚನ್ನರಾಯಪಟ್ಟಣ: ಕೈಗಾರಿಕಾ ಇಲಾಖೆ ವತಿಯಿಂದ ನೀಡುವ ತರಬೇತಿಯನ್ನು ಸದ್ವಿನಿಯೋಗ ಮಾಡಿಕೊಳ್ಳುವುದರ ಜತೆಗೆ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಂಡು ಮಹಿಳೆಯರು ಹಾಗೂ ನಿರುದ್ಯೋಗಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

    ಜಿಲ್ಲಾ ಪಂಚಾಯಿತಿ ಕೈಗಾರಿಕಾ ವಿಭಾಗದಿಂದ 2022-23 ನೇ ಸಾಲಿನ ಜಿಲ್ಲಾ ಔಧ್ಯಮಿಕ ಕೇಂದ್ರ ಯೋಜನೆಯಡಿ ಆಯ್ಕೆಯಾದ 40 ಮಹಿಳೆಯರಿಗೆ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಹೊಲಿಗೆ ಯಂತ್ರ, 12 ಬಡಿಗೆ ಕೆಲಸಗಾರರಿಗೆ ಯಂತ್ರ ಹಾಗೂ 10 ಗಾರೆ ಕೆಲಸಗಾರರಿಗೆ ಗಾರೆ ಕೆಲಸದ ಪರಿಕರಗಳನ್ನು ವಿತರಿಸಿ ಮಾತನಾಡಿದರು.

    ನಿರುದ್ಯೋಗಿಗಳಿಗೆ ಉದ್ಯೊಗ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಪ್ರಸ್ತುತ ಹಲವರು ತರಬೇತಿ ಪಡೆದು ಕೌಶಲ ಹೊಂದಿದ್ದು, ಅಂತಹವರು ಸ್ವಉದ್ಯೋಗದ ಮೂಲಕ ಜೀವನ ರೂಪಿಸಿಕೊಂಡಿದ್ದಾರೆ. ಸರ್ಕಾರ ನೀಡುವ ಇಂತಹ ಉಪಕರಣಗಳು ಉಪಯುಕ್ತವಾಗಿದ್ದು, ಫಲಾನುಭವಿಗಳು ಉಚಿತವಾಗಿ ವಿತರಿಸಲಾಗುವ ಇಂತಹ ಉಪಕರಣಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಜಿ.ಆರ್.ಹರೀಶ್, ಕೈಗಾರಿಕಾ ವಿಸ್ತರಣಾಧಿಕಾರಿ ಆನಂದ್, ಎಪಿಎಂಸಿ ಮಾಜಿ ಅಧ್ಯಕ್ಷ ವಳಗೇರಹಳ್ಳಿ ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts