More

    ಎಸ್‌ಎಫ್‌ಎ ಚಾಂಪಿಯನ್‌ಷಿಪ್‌ ಈಜು ಸ್ಪರ್ಧೆಯಲ್ಲಿ ಮಾನ್ಯಾಗೆ 4 ಚಿನ್ನದ ಪದಕ

    ಬೆಂಗಳೂರು: ದ್ರಾವಿಡ್ ಪಡುಕೋಣೆ ಕ್ರೀಡಾ ಶ್ರೇಷ್ಠತಾ ಸೆಂಟರ್‌ನಲ್ಲಿ ನಡೆಯುತ್ತಿರುವ ಎಸ್‌ಎಫ್‌ಎ ಚಾಂಪಿಯನ್‌ಷಿಪ್‌ನ ಈಜು ಸ್ಪರ್ಧೆಯಲ್ಲಿ ಮಾನ್ಯಾ ವಾಧ್ವಾ ನಾಲ್ಕು ಚಿನ್ನದ ಪದಕ ಜಯಿಸಿದ್ದಾರೆ. ಚಾಂಪಿಯನ್‌ಷಿಪ್‌ನ ಏಳನೇ ದಿನವಾದ ಭಾನುವಾರ ಕಬಡ್ಡಿ ಮತ್ತು ಥ್ರೋಬಾಲ್, ಫುಟ್‌ಬಾಲ್, ಕಬಡ್ಡಿ, ಟೇಬಲ್ ಟೆನಿಸ್, ಈಜು ಸ್ಪರ್ಧೆ ಆಯೋಜಿಸಲಾಗಿತ್ತು.

    14 ವಯೋಮಿತಿಯ 50 ಮೀ. ಫ್ರೀ ಸ್ಟೈಲ್, 100 ಮೀ. ಬ್ರೆಸ್ಟ್ ಸ್ಟ್ರೋಕ್, 100 ಮೀ. ಫ್ರೀಸ್ಟೈಲ್ ಮತ್ತು ಬಟರ್‌ಫ್ಲೈ ಸ್ಟ್ರೋಕ್ 100 ಮೀಟರ್ ವಿಭಾಗದಲ್ಲಿ ಮಾರುತಿ ಮ್ಯಾಗ್ನೋಲಿಯಾ ಪಬ್ಲಿಕ್ ಸ್ಕೂಲ್‌ನ 12 ವರ್ಷದ ಮಾನ್ಯಾ ವಾಧ್ವಾ ಪ್ರಥಮ ಸ್ಥಾನ ಪಡೆಯುವ ಮೂಲಕ 4 ಚಿನ್ನದ ಪದಕಗಳನ್ನು ಒಲಿಸಿಕೊಂಡರು.

    2023ರಲ್ಲಿ ಒರಿಸ್ಸಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಾನ್ಯಾ ವಾಧ್ವಾ 12ನೇ ಸ್ಥಾನ ಪಡೆದಿದ್ದಾರೆ. ದಕ್ಷಿಣ ವಲಯದ ರಾಷ್ಟ್ರೀಯ ಕೂಟದಲ್ಲಿ 2 ಚಿನ್ನ ಮತ್ತು 1 ಬೆಳ್ಳಿ ಹಾಗೂ ದಕ್ಷಿಣ ವಲಯದ ರಾಜ್ಯ ಕೂಟದಲ್ಲಿ 3 ಚಿನ್ನ, 1 ಬೆಳ್ಳಿ ಮತ್ತು 2 ಕಂಚು ಗೆದ್ದಿದ್ದಾರೆ.
    ಸೋಮವಾರ ಚೆಸ್, ಸ್ಪೀಡ್‌ಕ್ಯೂಬಿಂಗ್, ಶೂಟಿಂಗ್ ಮತ್ತು ಫುಟ್‌ಬಾಲ್ (10, 12 ವಯೋಮಿತಿ) ಸೇರಿ 10 ಕ್ರೀಡೆ ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts