More

    ಬಾಲ ಮಂದಿರಕ್ಕೆ ಎಂ.ರಮೇಶ್ ಭೇಟಿ

    ಚಾಮರಾಜನಗರ: ನಗರದ ಯಶೋಧರಮ್ಮ ದಾಸಪ್ಪ ಬಾಲಕಿಯರ ಬಾಲ ಮಂದಿರಕ್ಕೆ ಬಾಲ ನ್ಯಾಯ ಮಂಡಳಿಯ ಅಧ್ಯಕ್ಷ ಎಂ.ರಮೇಶ್ ಶುಕ್ರವಾರ ಭೇಟಿ ನೀಡಿ, ಪರಿಶೀಲಿಸಿದರ.

    ಈ ವೇಳೆ ಮಕ್ಕಳ ಆರೋಗ್ಯ, ಪಾಲನೆ, ಪೋಷಣೆ ಹಾಗೂ ರಕ್ಷಣೆ ಬಗ್ಗೆ ವಿಚಾರಿಸಿದ ಅವರು, ಕೋವಿಡ್-19 ಸಂಬಂಧ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಪಾಲಕರು ತಿಳಿಸಿದ್ದಾರೆಯೇ? ಆಹಾರ ಮತ್ತು ಸುರಕ್ಷತೆ ಸಮರ್ಪಕವಾಗಿದೆಯೇ ಎಂದು ಮಕ್ಕಳಿಂದ ಮಾಹಿತಿ ಪಡೆದುಕೊಂಡರು.

    ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಲ್ಲಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಬೇಕು. ಹೊರಗಡೆ ಹೋದಾಗ ಕೈ ಶುಚಿಗೊಳಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು. ಮಕ್ಕಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳನ್ನು ನೀಡಬೇಕು. ನಿತ್ಯ ಬೆಳಗ್ಗೆ ಮತ್ತು ಸಂಜೆ ಪ್ರಾಣಾಯಾಮ ಮಾಡಿಸಿ ಎಂದು ಬಾಲ ಮಂದಿರದ ಉಸ್ತುವಾರಿಗಳಿಗೆ ಸೂಚನೆ ನೀಡಿದರು.

    ಇದೇ ವೇಳೆ ಮಕ್ಕಳು ಬಿಡಿಸಿದ ಚಿತ್ರಕಲೆ, ಕ್ರ್‌ಟಾ ಮಾದರಿಗಳನ್ನು ವೀಕ್ಷಿಸಿದರು. ಲಾಕ್‌ಡೌನ್ ಸಮಯದಲ್ಲಿ ಚಿತ್ರಕಲೆ, ಕ್ರ್‌ಟಾ ಮತ್ತು ಸಂಗೀತ ತರಬೇತಿಯನ್ನು ನೀಡಲಾಗುತ್ತಿತ್ತು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿಜಯ್ ತಿಳಿಸಿದರು.

    ಜಿಲ್ಲೆಯಲ್ಲಿ 30 ಬಾಲ ಮಂದಿರ ಸಂಸ್ಥೆಗಳಿದ್ದು, 2 ಸರ್ಕಾರಿ ಸಂಸ್ಥೆಗಳಿವೆ. ಒಟ್ಟು 1200 ಮಕ್ಕಳಿದ್ದು, ಕೋವಿಡ್-19 ಮುಂಜಾಗ್ರತೆಯ ದೃಷ್ಟಿಯಿಂದ 895 ಮಕ್ಕಳನ್ನು ಪಾಲಕರು ಹಾಗೂ ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. 36 ಬಾಲಾಪರಾಧಿಗಳನ್ನು ಜಾಮೀನು ಮೇಲೆ ಮನೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

    ಸಿಡಬ್ಲುೃಸಿ ಅಧ್ಯಕ್ಷೆ ಸರಸ್ವತಿ, ಬಾಲ ನ್ಯಾಯ ಮಂಡಳಿಯ ಸದಸ್ಯ ಟಿ.ಜೆ.ಸುರೇಶ್, ಸಿಬ್ಬಂದಿ ಮಾಲಾಶ್ರೀ, ಆಶಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts