ಕಕ್ಕೇರಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಸಾರ್ವಜನಿಕರು ಮನೆಯಲ್ಲೇ ಉಳಿದುಕೊಂಡು ಕರೊನಾ ಸೋಂಕು ನಿಯಂತ್ರಣಕ್ಕೆ ಶ್ರಮಿಸಬೇಕು ಎಂದು ನಂದಗಡ ಠಾಣೆಯ ಪಿಎಸ್‌ಐ ಸುಮಾ ನಾಯ್ಕ ಹೇಳಿದರು.
ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ನಡೆದ ಶಾಂತಿ ಪಾಲನೆ ಸಭೆಯಲ್ಲಿ ಅವರು ಮಾತನಾಡಿದರು. ಹಿಂದು ಮುಸ್ಲಿಮರು ಶಾಂತತೆ ಕಾಪಾಡಬೇಕು ಎಂದರು. ಗ್ರಾಪಂ ಸದಸ್ಯ ಸಿ.ಬಿ. ಅಂಬೋಜಿ ಮಾತನಾಡಿ, ಗ್ರಾಮದಲ್ಲಿ ಹಿಂದು, ಮುಸ್ಲಿಂ ಹಾಗೂ ಕ್ರಿಶ್ಚನ್ ಸಮುದಾಯದವರು ಇದ್ದು, ಎಲ್ಲರೂ ಸೌಹಾರ್ದದಿಂದ ಬದುಕಬೇಕು ಎಂದರು. ಜೆಡಿಎಸ್ ಮುಖಂಡ ಆರ್.ಎ.ಪಟೇಲ ಮಾತನಾಡಿದರು. ಗ್ರಾಮಸ್ಥರಾದ ಹಾಜಿಬಾಷಾ ಮುಲ್ಲಾ, ಅಶ್ಬಾಕ್ ಪಟೇಲ್, ಭೀಮಪ್ಪ ಬೈಲೂರ, ಮಲ್ಲಪ್ಪ ಮೊರಬದ, ಫಕೀರಪ್ಪ ಗೌಡ್ರ, ಗುಡುಸಾಬ ಗೊಟೂರ, ಸುಬ್ಬು ಗೊಳಿಹಳ್ಳಿ, ಕುಮಾರ ಅಸೋದೆ ಇತರರು ಇದ್ದರು.