More

    ಸುಳ್ಳು ಹೇಳುವುದು ಕಾಂಗ್ರೆಸ್​ಗೆ ಅಭ್ಯಾಸವಾಗಿದೆ: ಸಚಿವ ಪ್ರಲ್ಹಾದ್ ಜೋಶಿ

    ಜೈಪುರ: ಸುಳ್ಳು ಹೇಳುವುದು ಕಾಂಗ್ರೆಸ್​ಗೆ ಅಭ್ಯಾಸವಾಗಿದೆ. ಅವರ ಸುಳ್ಳು ಭರವಸೆಗಳಿಂದ ಜನರು ಬಳಲುವಂತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಇಂದು ರಾಜಸ್ಥಾನದ ಜೈಪುರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ರಾಜಸ್ಥಾನದ ವಿಧಾನಸಭಾ ಚುನಾವಣಾ ಬಿಜೆಪಿ ಉಸ್ತುವಾರಿಯಾದ ನಂತರ ಇಂದು ಮೊದಲ ಬಾರಿಗೆ ರಾಜಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ಜೈಪುರದಲ್ಲಿ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿ, ಚುನಾವಣಾ ತಯಾರಿಯ ಕುರಿತು ಸಮಾಲೋಚನೆ ನಡೆಸಿದರು.

    ಇದನ್ನೂ ಓದಿ: ಕಣ್ಣು ಮಿಟುಕಿಸಲಾಗದ್ದಕ್ಕೇ ಬ್ಯಾಂಕ್ ಖಾತೆ ಸಿಗದಂತಾದ ಮಹಿಳೆ!

    ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಸ್ಥಾನದಲ್ಲಿ 19 ಸಾವಿರಕ್ಕೂ ಅಧಿಕ ರೈತರು ಕಾಂಗ್ರೆಸ್​ನ ಸುಳ್ಳು ಭರವಸೆಗಳಿಂದಾಗಿ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ಕೂಡ ಇದೇ ರೀತಿ ಆಗುತ್ತಿದೆ. ಕಾಂಗ್ರೆಸ್​ನವರಿಗೆ ಸುಳ್ಳು ಹೇಳುವುದು ಅಭ್ಯಾಸವಾಗಿಬಿಟ್ಟಿದೆ ಎಂದು ಅವರು ಹಲವಾರ ವಿಚಾರಗಳನ್ನು ಉಲ್ಲೇಖಿಸಿದರು.

    ಇದನ್ನೂ ಓದಿ: ವೃದ್ಧ ದಂಪತಿಯ ಹೊಸ ಮನೆ ಧ್ವಂಸ; ಜಾಗ ಕಬಳಿಸಲು ಜಿ.ಪಂ. ಮಾಜಿ ಸದಸ್ಯೆಯ ಪತಿಯ ಕೃತ್ಯ?

    ಬರೀ ಆರು ತಿಂಗಳಿನಿಂದ ನಿರುದ್ಯೋಗಿಗಳಾಗಿರುವವರಿಗೆ ಆರ್ಥಿಕ ಸಹಾಯ ನೀಡುವಂಥ ವಿಚಿತ್ರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ವಿದ್ಯುತ್ ದರದಲ್ಲಿ ಭಾರಿ ಏರಿಕೆ ಆಗಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದ ಪ್ರಲ್ಹಾದ್ ಜೋಶಿ, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದರು.

    ರಾಜಸ್ಥಾನ ಬಿಜೆಪಿ ಘಟಕವು ಕಾಂಗ್ರೆಸ್​ನಿಂದಾಗಿರುವ ಈ ಎಲ್ಲ ಸಮಸ್ಯೆಗಳ ವಿರುದ್ಧ ದನಿ ಎತ್ತಲಿದೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಬಿಜೆಪಿ ಕ್ರಮಕೈಗೊಳ್ಳಲಿದ್ದು, ನಾವು ಶೀಘ್ರದಲ್ಲೇ 2/3ರಷ್ಟು ಬಹುಮತದೊಂದಿಗೆ ಸರ್ಕಾರ ರಚಿಸಲಿದ್ದೇವೆ ಎಂದೂ ಜೋಶಿ ಹೇಳಿದರು.

    ಈತ ಗಂಡಸಿಯ ಸಾಹಸಿ: ಚಿರತೆಯನ್ನು ಹಿಡಿದು ಬೈಕ್​ಗೆ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಗೆ ಒಪ್ಪಿಸಿದ!

    ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts