More

    ಹಳಿಗೆ ಮರಳಿದ ಗೋಲ್ಡನ್ ಚಾರಿಯೆಟ್: ದೇಶದ ಐಷಾರಾಮಿ ರೈಲು ಸೇವೆ ಆರಂಭ

    ಬೆಂಗಳೂರು: ದೇಶದ ಐಷಾರಾಮಿ ರೈಲು ಗೋಲ್ಡನ್ ಚಾರಿಯೆಟ್ ತನ್ನ ಸೇವೆ ಮತ್ತೆ ಆರಂಭಿಸಿದೆ. ಆ ಮೂಲಕ ಪ್ರಯಾಣಿಕರು ರಾಜ-ರಾಣಿಯರಂತೆ ರೈಲಿನಲ್ಲಿ ಪ್ರಯಾಣಿಸಿ, ದಕ್ಷಿಣ ಭಾರತದ ರಾಜ್ಯಗಳ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

    ಕಡಿಮೆ ಬೆಲೆಯ ಸಾರಿಗೆಯಾದ ರೈಲು ಸೇವೆಯನ್ನು ದುಬಾರಿ ಸಾರಿಗೆಯನ್ನಾಗಿ ಪರಿವರ್ತಿಸಿದ ಗೋಲ್ಡನ್ ಚಾರಿಯೆಟ್ ರೈಲು ಸೇವೆ ಇಂದಿನಿಂದ ಪುನರಾರಂಭವಾಗಿದೆ. ಕರೊನಾ ಕಾರಣದಿಂದ ಸ್ಥಗಿತಗೊಂಡು ಸೇವೆಯೂ ಭಾನುವಾರದಿಂದ ಮತ್ತೆ ಶುರುವಾಗಿದೆ. ಯಶವಂತಪುರ ರೈಲು ನಿಲ್ದಾಣದಿಂದ ಹೊರಟಿರುವ ಗೋಲ್ಡನ್ ಚಾರಿಯೆಟ್ ರೈಲು ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಗೋವಾ ರಾಜ್ಯಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದೆ.

    2008ರಲ್ಲಿ ಆರಂಭವಾಗಿರುವ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಆರಂಭಿಸಲಾದ ಗೋಲ್ಡನ್ ಚಾರಿಯೆಟ್ ರೈಲು ಸೇವೆಯನ್ನು ಕಳೆದೆರಡು ವರ್ಷಗಳ ಹಿಂದೆ ರೈಲ್ವೆ ಇಲಾಖೆಗೆ ವಹಿಸಲಾಗಿದೆ. ರೈಲ್ವೆ ಇಲಾಖೆಯ ಐಆರ್‌ಸಿಟಿಸಿ ಮೂಲಕ ಸೇವೆ ಆರಂಭಿಸುವುದಕ್ಕೂ ಮುನ್ನವೇ ಕರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಗೋಲ್ಡನ್ ಚಾರಿಯೆಟ್ ರೈಲು ಸಂಚರಿಸಲು ಸಾಧ್ಯವಾಗಿಲ್ಲ. ಇದೀಗ ಸೋಂಕಿನ ಪ್ರಭಾವ ಕಡಿಮೆಯಾಗಿದ್ದು, ಗೋಲ್ಡನ್ ಚಾರಿಯೆಟ್ ಮತ್ತೆ ಹಳಿಗೆ ಬಂದಿದೆ.

    ಹಳಿಗೆ ಮರಳಿದ ಗೋಲ್ಡನ್ ಚಾರಿಯೆಟ್: ದೇಶದ ಐಷಾರಾಮಿ ರೈಲು ಸೇವೆ ಆರಂಭಐಷಾರಾಮಿ ಸೇವೆಗಳು: ಗೋಲ್ಡನ್ ಚಾರಿಯೆಟ್ ಸೇವೆಯು ದುಬಾರಿಯಾಗಿದ್ದು, ಹಲವು ಐಷಾರಾಮಿ ಸೇವೆಗಳು ದೊರೆಯಲಿವೆ. ರೈಲಿನಲ್ಲಿ ಪ್ರಯಾಣಿಸುವವರಿಗೆ ಹವಾನಿಯಂತ್ರಿತ ಕೊಠಡಿ, ಬಾರ್, ಮಸಾಜ್ ಸೌಲಭ್ಯ, ಹಲವು ಬಗೆಯ ತಿನಿಸುಗಳು, ರೈಲು ನಿಲ್ದಾಣಗಳ ಮೂಲಕ ಪ್ರವಾಸಿ ತಾಣಗಳಿಗೆ ತೆರಳುವ ಹಾಗೂ ಆ ತಾಣದ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ.

    ಆಹಾ ಎಷ್ಟು ರುಚಿಯಾಗಿದೆ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುವವರು ಇಲ್ಲಿ ನೋಡಿ.. ಇದು ಎಂಜಲು ರೊಟ್ಟಿ..!

    VIDEO| ಭೂತದ ಪಕ್ಷಿ ನೋಡಿ ಹೆದರಿದ ಮಹಿಳೆ: ಹತ್ತಿರ ಹೋದವಳಿಗೆ ಕಾದಿತ್ತು ಬಿಗ್​ ಶಾಕ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts