More

    ವಿಜಯೋತ್ಸವ ಬಂಪರ್ ಬಹುಮಾನ ಲಕ್ಕಿ ಡ್ರಾ

    ಮಂಗಳೂರು: ದಸರಾ ಹಾಗೂ ದೀಪಾವಳಿ ಹಬ್ಬಗಳ ಅಂಗವಾಗಿ ವಿಜಯವಾಣಿ ಆಯೋಜಿಸಿದ ಏಳನೇ ವರ್ಷದ ‘ವಿಜಯೋತ್ಸವ- 2020’ ಶಾಪಿಂಗ್ ಉತ್ಸವದ ಲಕ್ಕಿ ಡ್ರಾ ನಗರದ ಕೂಳೂರಿನಲ್ಲಿರುವ ‘ವಿಜಯವಾಣಿ’ ಮಂಗಳೂರು ಬ್ಯೂರೋ ಮುಖ್ಯ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿತು.

    ಮುಖ್ಯ ಅತಿಥಿ ಭಾರತೀಯ ಲೆಕ್ಕ ಪರಿಶೋಧಕರ ಸಂಘ (ಐಸಿಎಐ) ಮಂಗಳೂರು ಘಟಕದ ಅಧ್ಯಕ್ಷ ಎಸ್.ಎಸ್.ನಾಯಕ್ ಮಾತನಾಡಿ, ವಿಜಯ ಸಂಕೇಶ್ವರ ಅವರ ನೇತೃತ್ವದ ‘ವಿಜಯವಾಣಿ’ ಪತ್ರಿಕೆ ಹಾಗೂ ‘ದಿಗ್ವಿಜಯ’ ದೃಶ್ಯ ಮಾಧ್ಯಮ ಸಮಗ್ರ ಹಾಗೂ ಸಮೃದ್ಧ ಮಾಹಿತಿ, ಮನರಂಜನೆಯನ್ನು ಜನರಿಗೆ ಒದಗಿಸುತ್ತಿದೆ ಎಂದರು.

    ಸಂಸ್ಥೆಯ ‘ವಿಜಯೋತ್ಸವ- 2020’ದಂತಹ ಕಾರ್ಯಕ್ರಮಗಳು ಸಾರ್ವಜನಿಕರು ಮತ್ತು ಓದುಗರು- ವೀಕ್ಷಕರ ನಡುವೆ ನಿರಂತರ ಸಂಪರ್ಕ- ಸಂವಹನ ಉಳಿಸಿಕೊಳ್ಳಲು ಸಹಕಾರಿ. ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಯ ಪಯಣ ಮುಂದುವರಿಯಲಿ ಎಂದು ಹಾರೈಸಿದರು.
    ಕರೊನಾ ಸಂಕಷ್ಟದ ಸಂದರ್ಭ ದೊಡ್ಡ ಸಂಖ್ಯೆಯ ಜನರು ಉದ್ಯೋಗ ಸಂಕಷ್ಟ ಎದುರಿಸಿದ್ದು, ಸ್ವೋದ್ಯೋಗದ ಅವಕಾಶಗಳ ಕಡೆಗೆ ಗಮನವಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಿಕೆ ಉದ್ಯಮಕ್ಕೆ ಸಂಬಂಧಿಸಿ ಮಾರ್ಗದರ್ಶನ ನೀಡುವ ಅಂಕಣವನ್ನು ಆರಂಭಿಸುವಂತೆ ಓದುಗನಾಗಿ ಕೋರುವುದಾಗಿ ಹೇಳಿದರು.

    ಮುಖ್ಯ ಅತಿಥಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ದಕ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಅಲ್ಪಾವಧಿಯಲ್ಲಿ ‘ವಿಜಯವಾಣಿ’ ಪಡೆದ ಯಶಸ್ಸು ದಾಖಲಾರ್ಹ. ಇದು ವಿಆರ್‌ಎಲ್ ಸಮೂಹ ಸಂಸ್ಥೆಯ ವಿಶ್ವಾಸಾರ್ಹತೆಗೆ ಸಾಕ್ಷಿ. ಪ್ರಬುದ್ಧ್ದ ಸಮಾಜ ನಿರ್ಮಾಣಕ್ಕೆ ಸಂಸ್ಥೆಯ ತಂಡದ ಪ್ರಾಮಾಣಿಕ ಪರಿಶ್ರಮ ಅಭಿನಂದನಾರ್ಹ ಎಂದರು.
    ಮಂಗಳೂರು ಬ್ಯೂರೋ ಮುಖ್ಯಸ್ಥ ಸುರೇಂದ್ರ ಎಸ್.ವಾಗ್ಳೆ, ಮಾರುಕಟ್ಟೆ ವಿಭಾಗ ಮುಖ್ಯಸ್ಥ ನವೀನ್ ಶೆಟ್ಟಿ ಉಪಸ್ಥಿತರಿದ್ದರು. ಉಪ ಸಂಪಾದಕ ಭರತ್‌ರಾಜ್ ಸೊರಕೆ ಕಾರ್ಯಕ್ರಮ ನಿರ್ವಹಿಸಿದರು.

    ಕನ್ನಡದ ಕಣ್ಮಣಿ
    ಐಸಿಎಐ ಮಂಗಳೂರು ಘಟಕದ ಅಧ್ಯಕ್ಷ ಎಸ್.ಎಸ್.ನಾಯಕ್ ವಿಜಯವಾಣಿ ಹಾಗೂ ದಿಗ್ವಿಜಯ ಬಗ್ಗೆ ಬರೆದ ಕವನವೊಂದನ್ನು ಸಭೆಯಲ್ಲಿ ವಾಚಿಸಿದರು. ಅದು ಹೀಗಿದೆ:
    ಕನ್ನಡ ಜನತೆಯ ಮನ ಮನೆ
    ತಲುಪುತ್ತಿದೆ ವಿಜಯವಾಣಿ
    ‘ವಾಣಿ’ ಯಲ್ಲೂ ‘ವಿಜಯ’
    ‘ವಿಜಯ’ವು ದಿಗ್ವಿಜಯ
    ವಿಶಿಷ್ಟ ವಾರ್ತಾ ಶೈಲಿಯಲಿ
    ಏರುತ್ತಿದೆ ಯಶಸ್ಸಿನ ಏಣಿ
    ನಮ್ಮ ಹೆಮ್ಮೆಯ ವಿಜಯವಾಣಿ
    ವಿಜಯವಾಣಿ- ದಿಗ್ವಿಜಯಗಳು
    ಇಂದು ಕನ್ನಡದ ಕಣ್ಮಣಿ

    15ರಂದು ಫಲಿತಾಂಶ: ಪತ್ರಿಕೆ ಬಹುಮಾನ ಯೋಜನೆಯ ಫಲಿತಾಂಶ ಡಿ.15ರಂದು ‘ವಿಜಯವಾಣಿ’ಯಲ್ಲಿ ಪ್ರಕಟವಾಗಲಿದೆ. ರಾಜ್ಯ ಮಟ್ಟದಲ್ಲಿ ಎರಡು ಕಾರು ಬಂಪರ್ ಬಹುಮಾನಗಳಿದ್ದು, ಇದರ ಡ್ರಾ ಬೆಂಗಳೂರಿನಲ್ಲಿ ನಡೆಯಲಿದೆ. ಮಂಗಳೂರು ಬ್ಯೂರೋ ಸಂಬಂಧಿಸಿ ಒಂದು ಬೈಕ್, ರೆಫ್ರಿಜರೇಟರ್, ಮೂರು ಗ್ರಾಂ ಗೋಲ್ಡ್, ಟಿವಿ, ಸೇಫ್‌ಲಾಕರ್, ವೆಟ್ ಗ್ರೈಂಡರ್ ಬಂಪರ್ ಬಹುಮಾನ ಸಹಿತ ಒಟ್ಟು 165 ಬಹುಮಾನಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts