More

    ಸುಮ್ಮನೆ ನಿಂತವನನ್ನು ಕೈಬೀಸಿ ಕರೆದಳಾ ಅದೃಷ್ಟ ಲಕ್ಷ್ಮೀ?

    ರಿಚ್ಮಂಡ್:  ಬೇಸರ ಕಳೆಯಲು ಲಾಟರಿ ಟಿಕೆಟ್ ಕೊಂಡುಕೊಂಡವನಿಗೆ ಕಾದಿತ್ತು 1.4 ಕೋಟಿ ರೂ. ಗಳ ಭಾರೀ ಅದೃಷ್ಟ…!
    ತನ್ನ ತಾಯಿ ಶಾಪಿಂಗ್ ಮುಗಿಸಿಕೊಂಡು ಬರುವವರೆಗೆ ಕಿರಾಣಿ ಅಂಗಡಿಯೊಳಗೆ ಕಾಯುತ್ತಿದ್ದ ಹರ್ಬರ್ಟ್ ಸ್ಕ್ರಗ್ಸ್ ಗೆ ಭಾರೀ ಅದೃಷ್ಠ ಕಾದಿತ್ತು. ಸುಮ್ಮನೆ ನಿಂತಿದ್ದ ಆತ ಲಾಟರಿ ಸ್ಕ್ರ್ಯಾಚ್ ಕಾರ್ಡ್ ಖರೀದಿಸುವ ಮೂಲಕ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ನಿರ್ಧರಿಸಿದ.

    ಇದನ್ನೂ ಓದಿ: ಮಗಳ ಗೆಳೆಯನಿಗೆ ಸಿಗರೇಟಿನಿಂದ ಸುಟ್ಟ ಆರೋಪ ಎದುರಿಸುತ್ತಿರುವ ಐಪಿಎಸ್​ ಅಧಿಕಾರಿ

    ಇದಕ್ಕೇ ನೋಡಿ ಅದೃಷ್ಟ ಎನ್ನುವುದು… ಈಗ, ಸ್ಕ್ರಗ್ಸ್ 2,00,000 ಡಾಲರ್ (1.4 ಕೋಟಿ ರೂ.) ದಿಂದ ಶ್ರೀಮಂತ. ಸುಮ್ಮನೆ ನಿಂತಿದ್ದ ಆತ ಲಾಟರಿ ಸ್ಕ್ರ್ಯಾಚ್ ಕಾರ್ಡ್ ಖರೀದಿಸಿದ. ಈ ಕಾರ್ಡ್ ಆತನಿಗೆ ಅದೃಷ್ಟ ಲಕ್ಷ್ಮೀಯಾಗಿ ಕೈ ಹಿಡಿದಿದೆ.
    ವರ್ಜೀನಿಯಾದ ರಿಚ್ಮಂಡ್‌ನಲ್ಲಿರುವ ಅಂಗಡಿಯಿಂದ ಸ್ಕ್ರಗ್ಸ್ ಸ್ಕ್ರ್ಯಾಚ್ ಕಾರ್ಡ್ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿ ಟಿಕೆಟ್ ಅನ್ನು ಗೀಚಿದ. ಅದರ ಮೇಲೆ ಬರೆದಿರುವುದನ್ನು ದಿಗ್ಭ್ರಮೆಗೊಂಡ.
    ಮೊದಮೊದಲು, ಸ್ಕ್ರಗ್ಸ್‌ಗೆ ಆತನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಆದ್ದರಿಂದ, ಆತ ಮತ್ತೊಮ್ಮೆ ಅದನ್ನು ನೋಡುವಂತೆ ತಾಯಿಗೆ ತಿಳಿಸಿದ. ಆಕೆ ಸಂಪೂರ್ಣ ಪರಿಶೀಲಿಸಿ ಆತ 2,00,000 ಡಾಲರ್ ಗೆದ್ದಿರುವುದಾಗಿ ತಿಳಿಸಿದಳು. ಸ್ಕ್ರಗ್ಸ್‌ ಸಂಭ್ರಮ ಮುಗಿಲು ಮುಟ್ಟಿತ್ತು.

    ಇದನ್ನೂ ಓದಿ:  ಪತ್ನಿ ಹತ್ಯೆ ನಂತರ ಪೊಲೀಸರಿಗೆ ಹೆದರಿ ಮನೆಯಲ್ಲೇ ನೇಣಿಗೆ ಶರಣಾದ ಪತಿ

    ವರ್ಜೀನಿಯಾದಿಂದ ಇತ್ತೀಚೆಗೆ ಅಂತಾರಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸುದ್ದಿಯಾದ ದೊಡ್ಡ ಟಿಕೆಟ್ ಗೆಲುವು ಇದೊಂದೇ ಅಲ್ಲ.
    ಈ ತಿಂಗಳ ಆರಂಭದಲ್ಲಿ, ರೇಮಂಡ್ ಹ್ಯಾರಿಂಗ್ಟನ್ 25 ಲಾಟರಿ ಟಿಕೆಟ್‌ಗಳನ್ನು ಖರೀದಿಸಿ 25 ಬಾರಿ ಗೆದ್ದಿದ್ದರು.

    ಮೃತರ ಅಂಗಾಂಗ ದಾನ ಇನ್ನು ಕಡ್ಡಾಯ: ಶೀಘ್ರ ಮಸೂದೆ ಮಂಡನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts