More

    VIDEO| ಮದುವೆಯಾಗಲು ದೇವಸ್ಥಾನಕ್ಕೆ ಹೊರಟ ಪ್ರೇಮಿಗಳು ಮಾರ್ಗ ಮಧ್ಯೆಯೇ ಶವವಾದರು..!

    ಹೈದರಾಬಾದ್​: ಕಳೆದ ಮಂಗಳವಾರ ನಡೆದಿದ್ದ ಭೀಕರ ಅಪಘಾತದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ತೆಲಂಗಾಣದಲ್ಲಿ ಚೋಟು ಉಪ್ಪಲ್​ ಸಿಗ್ನಲ್ ​ಬಳಿ ನಿಂತಿದ್ದ ವಾಹನಗಳಿಗೆ ಹಿಂಬದಿಯಿಂದ ಬ್ರೆಕ್ ಫೇಲ್​ ಆಗಿ ಬಂದ ಕಾರೊಂದು ಗುದ್ದಿದ ಪರಿಣಾಮ ಭೀಕರ ಅಪಘಾತ ಸಂಭವಿಸಿತ್ತು.

    ಅಪಘಾತದ ವೇಳೆ ಬೈಕ್​ನಿಂದ ಪೆಟ್ರೋಲ್​ ಹೊರಬಿದ್ದ ಕಾರಣ ನಡುರಸ್ತೆಯಲ್ಲೇ ಬೈಕ್​ ಹೊತ್ತಿ ಉರಿದಿತ್ತು. ​ಸುಮಾರು ನಾಲ್ಕು ಬೈಕ್​​ಗಳಿಗೆ ಕಾರು ಡಿಕ್ಕಿ ಹೊಡೆದಿತ್ತು. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಇಬ್ಬರ ದಾರುಣ ಸಾವಿಗೀಡಾಗಿದ್ದರು.

    ಇದನ್ನೂ ಓದಿ: ರಿಪಬ್ಲಿಕ್ ಟಿವಿ ಅರ್ನಬ್​ಗೆ ಇನ್ನೊಂದು ಸಂಕಷ್ಟ- ಸುಶಾಂತ್​ ಸಿಂಗ್​ ಸ್ನೇಹಿತನಿಂದ ₹200 ಕೋಟಿ ಮಾನನಷ್ಟ ನೋಟಿಸ್​!

    ಮೃತ ಇಬ್ಬರು ಸಹ ಪ್ರೇಮಿಗಳು ಎಂಬುದೇ ಮನಕಲಕುವ ಸಂಗತಿ. ಚೋಟು ಉಪ್ಪಲ್ ಸಮೀಪದ ಟ್ಯಾಂಕ್​ ಬಂದ್​ ಗ್ರಾಮದ ದೇವಸ್ಥಾನದಲ್ಲಿ ಮದುವೆ ಮಾಡಿಕೊಳ್ಳಲು ಪ್ರೇಮಿಗಳು ತೆರಳುತ್ತಿದ್ದರು. ದುರಾದೃಷ್ಟವಶಾತ್​ ಜವರಾಯನ ಅಟ್ಟಹಾಸದಿಂದಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟರೆ, ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ. ಅವರು ತೆರಳುತ್ತಿದ್ದ ಸ್ಕೂಟಿಯೂ ಸಹ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ.

    ಅಪಘಾತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಬ್ರೆಕ್​​ ಫೇಲ್​: ಭೀಕರ ಅಪಘಾತ

    ಬ್ರೆಕ್ ಫೇಲ್​: ಎದೆ ನಡುಗಿಸುವ ಅಪಘಾತ ತೆಲಂಗಾಣದಲ್ಲಿ ಚೋಟು ಉಪ್ಪಲ್ ​ ಸಿಗ್ನಲ್ ​ಬಳಿ ನಿಂತಿದ್ದ ವಾಹನಗಳಿಗೆ ಹಿಂಬದಿಯಿಂದ ಬ್ರೆಕ್ ಫೇಲ್​ ಆಗಿ ಬಂದ ಕಾರೊಂದು ಗುದ್ದಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಘಟನೆ ವೇಳೆ ಬೈಕ್​ನಿಂದ ಪೆಟ್ರೋಲ್ ​​ ಹೊರಬಿದ್ದ ಕಾರಣ ನಡುರಸ್ತೆಯಲ್ಲೇ ಹೊತ್ತಿ ಉರಿದಿದೆ. ​ನಾಲ್ಕು ಬೈಕ್​​ಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮಗು ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    Posted by Vijayavani on Monday, October 12, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts