More

    ಪ್ರೇಮಿಯಿಂದಲೇ ತಸೀನಾ ಕೊಲೆ: ಉಡುಪಿ ನೋಂದಣಿಯ ಓಮ್ನಿ ಕಾರಿನಲ್ಲಿ ಪತ್ತೆಯಾಗಿದ್ದ ಶವ

    ಶಿವಮೊಗ್ಗ: ವಿದ್ಯಾನಗರದ ರೈಲ್ವೆ ಸ್ಟೇಷನ್ ರ್ಪಾಂಗ್ ಜಾಗದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು ಅನೈತಿಕ ಸಂಬಂಧದಿಂದ ಆಕೆಯ ಪ್ರೇಮಿಯೇ ಕೊಲೆ ಮಾಡಿರುವುದು ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಆರೋಪಿಯನ್ನು ವಿನೋಬನಗರ ರೈಲ್ವೆ ಟ್ರ್ಯಾಕ್ ಬಳಿ ಬಂಧಿಸಿದ್ದಾರೆ.

    ಸೋಮಿನಕೊಪ್ಪದ ಸಯ್ಯದ್ ಅಬುಸಲೇಹ ಅಲಿಯಾಸ್ ಅಬ್ರಾರ್( 31) ಬಂಧಿತ ಆರೋಪಿ. ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಜ.2ರಂದು ಮಾರುತಿ ಓಮ್ನಿಯಲ್ಲಿ ಸೂಳೆಬೈಲ್​ನ ಬಿ.ಬಿ.ತಸೀನಾ ಎಂಬಾಕೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಕೊಲೆ ಎಂಬುದು ದೃಢಪಟ್ಟರೂ ಖಚಿತ ಮಾಹಿತಿ ಸಿಕ್ಕಿರಲಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ವಾರದೊಳಗೆ ಬೇಧಿಸಿದ್ದಾರೆ.

    ಘಟನೆ ವಿವರ: ಜ.2ರಂದು ವಿದ್ಯಾನಗರ ರೈಲ್ವೆ ನಿಲ್ದಾಣದಲ್ಲಿ ಬಿ.ಬಿ.ತಸೀನಾ ಮೃತದೇಹ ಮಾರುತಿ ಓಮ್ನಿಯಲ್ಲಿ ಪತ್ತೆಯಾಗಿತ್ತು. ಡಿ.22ರಿಂದ ಓಮ್ನಿ ಇದೇ ರ್ಪಾಂಗ್ ಜಾಗದಲ್ಲಿ ನಿಂತಿತ್ತು. ತಸೀನಾ ಡಿ.25ರಿಂದ ನಾಪತ್ತೆಯಾಗಿದ್ದಾಳೆ ಎಂದು ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ನಡುವೆ ತಸೀನಾ ಕೊಲೆ ಹಿಂದೆ ನಾಲ್ವರ ಕೈವಾಡವಿದೆ ಎಂದು ಕುಟುಂಬಸ್ಥರು ಎಸ್ಪಿಗೆ ದೂರು ನೀಡಿದ್ದರು. ಆರಂಭದಲ್ಲಿ ಇವರೇ ಕೊಲೆ ಮಾಡಿರಬೇಕೆಂಬ ಶಂಕೆ ಪೊಲೀಸರಿಗೂ ಬಂದಿತ್ತು. ಆದರೆ ತಸೀನಾಳ ಮೊಬೈಲ್​ಗೆ ಬಂದಿದ್ದ ಮತ್ತು ತಸೀನಾ ಮಾಡಿದ್ದ ನಂಬರ್ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಡಿವೈಎಸ್ಪಿ ಉಮೇಶ್ ನಾಯ್ಕ ಮಾರ್ಗದರ್ಶನದಲ್ಲಿ ಶಿವಮೊಗ್ಗ ಗ್ರಾಮಾಂತರ ಸಿಪಿಐ ಜೆ.ಲೋಕೇಶ್ ನೇತೃತ್ವದಲ್ಲಿ ತುಂಗಾನಗರ ಮತ್ತು ಕೋಟೆ ಠಾಣೆ ಸಿಬ್ಬಂದಿ ಒಳಗೊಂಡ ತಂಡ ರಚಿಸಿ ಕಾರ್ಯಾಚರಣೆ ನಡೆಸಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮದುವೆಗೆ ಒತ್ತಾಯಿಸಿದ್ದಕ್ಕೆ ಹತ್ಯೆ: ಮದುವೆ ಆಗುವಂತೆ ತಸೀನಾ ತನ್ನ ಪ್ರೇಮಿ ಅಬುಸಲೇಹಗೆ ಪೀಡಿಸುತ್ತಿದ್ದಳು. ಇಬ್ಬರಿಗೂ ಮದುವೆಯಾಗಿದ್ದು ಪತ್ನಿಗೆ ತಲಾಖ್ ನೀಡಿ ಮದುವೆ ಆಗುವಂತೆ ಒತ್ತಡ ಹಾಕಿದ್ದಳು. ಇಬ್ಬರ ನಡುವೆ ಕಳೆದ ನಾಲ್ಕು ವರ್ಷಗಳಿಂದ ಅನೈತಿಕ ಸಂಬಂಧವಿತ್ತು. ಈ ಹಿಂದೆಯೂ ಹಲವು ಬಾರಿ ಅಬುಸಲೇಹ ಜತೆ ತಿರುಗಾಡುತ್ತಿದ್ದಳು ಎನ್ನಲಾಗಿದೆ. ಆದರೆ ಪತ್ನಿಗೆ ತಲಾಖ್ ನೀಡಲು ಒಪ್ಪದ ಕಾರಣ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಕೊಲೆ ಮಾಡಿ ಅನುಮಾನ ಬಾರದಂತೆ ಓಮ್ನಿಯಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿಟ್ಟು ಹೋಗಿದ್ದಾಗಿ ಅಬುಸಲೇಹ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

    ಓಮ್ನಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ: ಕೊಲೆ ಶಂಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts