More

    ವಿಜಯವಾಣಿ ಸಿನಿಮಾ ವಿಮರ್ಶೆ: ಒಂದು ಕೊಲೆಯ ಸುತ್ತ…

    | ಚೇತನ್ ನಾಡಿಗೇರ್

    ವಿಜಯವಾಣಿ ಸಿನಿಮಾ ವಿಮರ್ಶೆ: ಒಂದು ಕೊಲೆಯ ಸುತ್ತ...ತಾವು ಹೆಣ ಸಾಗಿಸುತ್ತಿರುವ ವಿಷಯ ಯಾರಿಗೂ ಗೊತ್ತಿಲ್ಲ ಎಂದೇ ಅಜ್ಜು-ರಚ್ಚು ನಂಬಿರುತ್ತಾರೆ. ಯಾರಿಗೂ ಗೊತ್ತಾಗಬಾರದು ಅಂತಲೇ ಕಷ್ಟಪಡುತ್ತಿರುತ್ತಾರೆ. ಹೀಗಿರುವಾಗಲೇ, ಒಂದು ಫೋನ್ ಬರುತ್ತದೆ. 25 ಲಕ್ಷ ರೂ.ಕೊಡದಿದ್ದರೆ, ಕೊಲೆಯ ವಿಚಾರ ಬಹಿರಂಗಪಡಿಸುವುದಾಗಿ ಫೋನ್ ಮಾಡಿದವನು ಬ್ಲಾಕ್​ವೆುೕಲ್ ಮಾಡುತ್ತಾನೆ. ಅಷ್ಟರಲ್ಲಾಗಲೇ ಒಂದು ದೊಡ್ಡ ಸಮಸ್ಯೆಯಲ್ಲಿ ಸಿಲುಕಿರುವ ಅಜ್ಜು-ರಚ್ಚುಗೆ ಇನ್ನೊಂದು ಹೊಸ ಸಮಸ್ಯೆ ಶುರುವಾಗುತ್ತದೆ.

    ‘ಲವ್ ಯೂ ರಚ್ಚು’ ನೋಡುತ್ತಿದ್ದರೆ ‘ದೃಶ್ಯ’ ನೆನಪಾಗುತ್ತದೆ. ಅಲ್ಲಿ ರಾಜೇಂದ್ರ ಪೊನ್ನಪ್ಪ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುವುದಕ್ಕೆ ಹೇಗೆ ಪ್ರಯತ್ನಿಸುತ್ತಾನೋ, ಇಲ್ಲಿ ಅಜ್ಜು ತನ್ನ ಹೆಂಡತಿಯನ್ನು ರಕ್ಷಿಸುವುದಕ್ಕೆ ಹರಸಾಹಸ ಪಡುತ್ತಾನೆ. ಏಕೆಂದರೆ, ಅವನಿಗೆ ಅವಳೆಂದರೆ ಹೇಳೋಕಾಗದಷ್ಟು ಪ್ರೀತಿ. ಅದೇ ಕಾರಣಕ್ಕೆ, ಕೊನೆಯವರೆಗೂ ಕಣ್ಣಲ್ಲಿ ಕಣ್ಣಿಟ್ಟು ವಿಜಯವಾಣಿ ಸಿನಿಮಾ ವಿಮರ್ಶೆ: ಒಂದು ಕೊಲೆಯ ಸುತ್ತ...ನೋಡಿಕೊಳ್ಳುವುದಾಗಿ ಪ್ರಾಮಿಸ್ ಮಾಡಿರುತ್ತಾನೆ. ಆ ಪ್ರಾಮಿಸ್ ಉಳಿಸಿಕೊಳ್ಳುವುದಕ್ಕೆ ಯಾವ ಹಂತಕ್ಕೆ ಹೋಗುತ್ತಾನೆ ಎನ್ನುವುದೇ ಚಿತ್ರದ ಕಥೆ. ಹೊಸದಾಗಿ ಮದುವೆಯಾದ ಗಂಡ-ಹೆಂಡತಿ. ಗಂಡ ಬಿಜಿನೆಸ್ ಟ್ರಿಪ್ ಮುಗಿಸಿ ಮನೆಗೆ ಬರುವಷ್ಟರಲ್ಲಿ, ಹೆಂಡತಿ ಕೊಲೆ ಮಾಡಿ ಕೂತಿರುತ್ತಾಳೆ. ಡ್ರೖೆವರ್ ತನ್ನ ಜತೆಗೆ ಅಸಭ್ಯವಾಗಿ ನಡೆದುಕೊಂಡ ಎಂದು ಅವನ ತಲೆಗೆ ಬಾಟಲಿಯಲ್ಲಿ ಹೊಡೆದು ಸಾಯಿಸಿರುತ್ತಾಳೆ. ಹೆಂಡತಿಯನ್ನು ರಕ್ಷಿಸುವ ಹೊಣೆ ಗಂಡನದು. ಸರಿ ಹೆಣವನ್ನು ಒಂದು ಸೂಟ್​ಕೇಸ್​ನಲ್ಲಿ ಹಾಕಿ, ಪ್ರಕರಣವನ್ನು ಮುಚ್ಚಿ ಹಾಕಬೇಕು ಎನ್ನುವಷ್ಟರಲ್ಲಿ, ಸತ್ಯ ಗೊತ್ತಿರುವವನೊಬ್ಬ ಬ್ಲಾಕ್​ವೆುೕಲ್ ಮಾಡುವುದಕ್ಕೆ ಶುರು ಮಾಡುತ್ತಾನೆ. ಇಷ್ಟಕ್ಕೂ ಅವನ್ಯಾರು? ಈ ರಹಸ್ಯ ಹೇಗೆ ಬಯಲಾಗುತ್ತದೆ? ಉತ್ತರ ಗೊತ್ತಾಗಬೇಕಿದ್ದರೆ ಕೊನೆಯ 15 ನಿಮಿಷಗಳವರೆಗೂ ಕಾಯಬೇಕು.

    ವಿಜಯವಾಣಿ ಸಿನಿಮಾ ವಿಮರ್ಶೆ: ಒಂದು ಕೊಲೆಯ ಸುತ್ತ...ಹೌದು, ಕೊನೆಯ 15 ನಿಮಿಷಗಳವರೆಗೂ ರಹಸ್ಯ ಬಿಟ್ಟುಕೊಡದಂತೆ, ‘ಲವ್ ಯೂ ರಚ್ಚು’ ಸಾಗುತ್ತದೆ. ಹಾಗಂತ ಚಿತ್ರ ರೋಚಕವಾಗಿರಬಹುದು ಎಂದುಕೊಂಡರೆ ನಿರೀಕ್ಷೆ ಹುಸಿಯಾಗುತ್ತದೆ. ಅದೇನೋ ಗೊತ್ತಿಲ್ಲ, ಸಾಕಷ್ಟು ಥ್ರಿಲ್​ಗಳಿದ್ದರೂ ಚಿತ್ರ ಟೇಕಾಫ್ ಆಗುವುದಕ್ಕೆ ಸಾಕಷ್ಟು ಸಮಯ ಬೇಕು. ಟೇಕಾಫ್ ಆದ ಮೇಲೂ ಚಿತ್ರ ಕುಂಟುತ್ತಾ ಸಾಗುತ್ತದೆ. ಒಟ್ಟಾರೆ ಚಿತ್ರ ಪ್ರೇಕ್ಷಕರ ಮನಸ್ಸಿಗೆ ತಟ್ಟುವುದು ಕಡಿಮೆಯೇ. ಹೆಂಡತಿಯನ್ನು ಉಳಿಸಿಕೊಳ್ಳುವುದಕ್ಕೆ ಯಾವ ಹಂತಕ್ಕೆ ಬೇಕಾದರೂ ಹೋಗುವ ಪಾತ್ರ ಅಜೇಯ್ದು. ಪಾತ್ರವೇನೋ ಚೆನ್ನಾಗಿದೆ. ಆದರೆ, ಅಜೇಯ್ ಕಡೆಯಿಂದ ಇನ್ನಷ್ಟು ಪ್ರಯತ್ನ ಬೇಕಿತ್ತು. ರಚಿತಾ ಅಭಿನಯ ಸಹ ಅದಕ್ಕಿಂತ ವಿಭಿನ್ನವಾಗಿಲ್ಲ. ನಿರ್ದೇಶಕರಿಂದ ಅಭಿನಯ ತೆಗೆಸುವುದಕ್ಕೆ ಸಾಧ್ಯವಾಗಲಿಲ್ಲವೋ ಅಥವಾ ಬೇರೆ ಏನಾದರೂ ಕಾರಣವೋ ಗೊತ್ತಿಲ್ಲ. ಒಟ್ಟಾರೆ ಇಬ್ಬರೂ ತೆರೆಯ ಮೇಲೆ ನೀರಸವಾಗಿ ಕಾಣಿಸುತ್ತಾರೆ. ಅರು ಗೌಡ, ರಾಘು ಶಿವಮೊಗ್ಗ, ಅರವಿಂದ ರಾವ್​ಗೆ ಹೆಚ್ಚು ಕೆಲಸವಿಲ್ಲ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದಲ್ಲಿ ಎರಡು ಹಾಡುಗಳು ಸೆಳೆಯುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts