More

    ಪ್ರೇಮಕಥೆ: ಅಡ್ಡಿ-ಆತಂಕಗಳು ನಮ್ಮ ಇಚ್ಛಾಶಕ್ತಿಗಿಂತ ದೊಡ್ಡವಲ್ಲ

    ಬದುಕಿನಲ್ಲಿ ಒಮ್ಮೆಯಾದರೂ ಎಲ್ಲರ ಎದೆಗೂಡಿನಲ್ಲಿ ಅರಳುವ ಪ್ರೇಮ ಒಂದು ಮಧುರ ಕ್ಷಣ. ಪ್ರೇಮ ನಿವೇದನೆಯ ತಲ್ಲಣಗಳು, ಅದಕ್ಕೆ ಬರುವ ಸಕಾರಾತ್ಮಕ ಪ್ರತಿಕ್ರಿಯೆ… ಅದರ ಪರಿಣಾಮವಾಗಿ ಉಂಟಾಗುವ ಉಲ್ಲಾಸ ಇನ್ನಷ್ಟು ಮಧುರ. ಆ ದಿನಗಳ ವಿರಹವೂ ಮಧುರ ಯಾತನೆಯೇ. ಅವೆಲ್ಲವನ್ನೂ ದಾಟಿ ಮದುವೆ ಎಂಬಲ್ಲಿಗೆ ಬಂದು ನಿಂತರೆ ಅದೇ ದೊಡ್ಡ ಖುಷಿ. ಮದುವೆಯ ನಂತರವೂ ಪ್ರೀತಿ ತಾಜಾ ಆಗಿಯೇ ಉಳಿದರಂತೂ ಅದು ಅಮರಪ್ರೇಮ. ಅಂಥ ಪ್ರೇಮದ ಬಗ್ಗೆ ಬರೆದು ಕಳಿಸಿ ಎಂದು ‘ವಿಜಯವಾಣಿ’ ನೀಡಿದ್ದ ಕರೆಗೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ಆಯ್ದ ಯಶಸ್ವೀ ನೈಜ ಪ್ರೇಮಕಥೆಗಳು ಇಲ್ಲಿವೆ.

     
    ನನ್ನ ಕನಸೆಲ್ಲವನ್ನೂ ಅವನೊಲವ ಬುಟ್ಟಿಗೆ ತುಂಬಿದ್ದು, ಅವನ ಗುಣ ದರ್ಶನವಾದ ಕ್ಷಣದಲ್ಲೇ ನಡೆದಿತ್ತು. ಪಡೆದಷ್ಟನ್ನೂ ಆತ ಮೂಟೆ ಕಟ್ಟಿ ರದ್ದಿಗೆ ಹಾಕಲಿಲ್ಲ. ಒಂದೊಂದನ್ನೇ ಎತ್ತಿಕೊಂಡ. ಸಾಕಾರಗೊಳಿಸುವಲ್ಲಿ ಶೂನ್ಯತೆಗೆ ಪೂರ್ಣತೆಯನ್ನು ತಂದ. ಹೌದು, ಇಂದು ಅತ್ತೆ ಮಾವನ ಮುದ್ದಿನ ಸೊಸೆಯಾಗಿ, ಇಬ್ಬರು ಮಕ್ಕಳ ಸವಿನುಡಿಯಲ್ಲಿ ಅಮ್ಮ ಎಂದು ಕರೆಸಿಕೊಳ್ಳುವ ಸೌಭಾಗ್ಯ ನೀಡಿದವನು, ಯಾರದೋ ಮದುವೆಯಲ್ಲಿ ಆದ ಅಚಾನಕ್ ಭೇಟಿಯಾಗಿದ್ದ. ಕಂಡ ಕ್ಷಣದಲ್ಲೇ ಹೃದಯದ ತಂತಿಯನ್ನು ಮೀಟಿದ್ದ. ಆ ಹೃದಯದ ಪ್ರೀತಿ ನೇರವಾಗಿ ನನ್ನನ್ನು ತಲುಪಲಿಲ್ಲ. ನಮ್ಮ ಮನೆಯವರ ಗೌರವದ ಗೋಡೆಯ ಸಮೀಪ ನಿಂತು, ಅವರ ಒಪ್ಪಿಗೆಯ ನಿಶಾನೆ ಪಡೆದೇ ನನ್ನ ಚಿತ್ತ ತಲುಪಿತು. ನಂತರ ಮೂರು ವರುಷ ಆತನಿಗಾಗಿ ನಾನೇನೂ ಮಾಡಲಿಲ್ಲ. ಆದರೆ ಆತ ನನ್ನ ಮಾರ್ಗದರ್ಶಕನಾದ. ಪ್ರೀತಿಗೆ ಸಂಚಾಲಕನಾದ. ಮಧ್ಯೆ ವಿವಾಹದ ವಿಷಯದಲ್ಲಿ ಅದೆಷ್ಟೋ ಕಲ್ಲು ಬಂಡೆಗಳು ನಮ್ಮ ಮೇಲೆರಗಿದವು. ಆತನ ಇಚ್ಛಾ ಶಕ್ತಿಗಿಂತ ಅವು ಕಠಿಣವಾಗಿರಲಿಲ್ಲ. ಈಗ ನಮ್ಮ ಪ್ರೀತಿಗೆ 8 ವರ್ಷ. ವಿವಾಹ ಬಂಧನದಲ್ಲಿ 5ನೇ ವರ್ಷ. ಆಕರ್ಷಣೆ ಪ್ರೀತಿಯಲ್ಲ. ನಿಜವಾದ ಪ್ರೀತಿಗೆ ಸಾವಿಲ್ಲ.

    | ಪರಿಮಳ ಮಹೇಶ್ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts