More

    ಲವ್ ಮೀ ಆರ್ ಹೇಟ್ ಮೀ; ಇದು ರಚಿತಾ ಹೊಸ ಚಿತ್ರದ ಹೆಸರು

    ಬೆಂಗಳೂರು: ದೀಪಕ್ ಗಂಗಾಧರ್ ನಿರ್ದೇಶನದ ಹೊಸ ಚಿತ್ರದಲ್ಲಿ ‘ಡಾರ್ಲಿಂಗ್’ ಕೃಷ್ಣ ಮತ್ತು ರಚಿತಾ ರಾಮ್ ಜತೆಯಾಗಿ ನಟಿಸುತ್ತಿದ್ದಾರೆ ಎಂದು ಓದಿದ್ದು ನೆನಪಿದೆ ತಾನೇ? ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರ ಏಪ್ರಿಲ್​ನಲ್ಲಿ ಶುರುವಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ಚಿತ್ರ ಮುಂದಕ್ಕೆ ಹೋಗಿದೆ. ಯಾವಾಗ ಶುರುವಾಗಬಹುದು ಎಂದು ನಿಖರವಾಗಿ ಹೇಳಲು ಚಿತ್ರತಂಡಕ್ಕೂ ಸಾಧ್ಯವಾಗುತ್ತಿಲ್ಲ.

    ಈ ಮಧ್ಯೆ, ಚಿತ್ರದ ಹೆಸರನ್ನು ಚಿತ್ರತಂಡ ಶುಕ್ರವಾರ ಅಧಿಕೃತವಾಗಿ ಅನಾವರಣಗೊಳಿಸಿದೆ. ಚಿತ್ರಕ್ಕೆ ‘ಲವ್ ಮೀ ಆರ್ ಹೇಟ್ ಮೀ’ ಎಂಬ ಹೆಸರನ್ನು ಇಡಲಾಗಿದೆ. ಹೆಸರು ಕೇಳಿದರೆ, ಡಾ. ರಾಜಕುಮಾರ್ ಅಭಿನಯದ ‘ಶಂಕರ್ ಗುರು’ ಚಿತ್ರದ ಆ ಜನಪ್ರಿಯ ಹಾಡು ನೆನಪಿಗೆ ಬರಬಹುದು. ಆ ಎವರ್​ಗ್ರೀನ್ ಹಾಡಿನ ಮೊದಲ ಸಾಲನ್ನು ಚಿತ್ರಕ್ಕೆ ಶೀರ್ಷಿಕೆಯಾಗಿ ಇಡಲಾಗಿದೆ. ಹೆಸರು ಕೇಳಿದರೆ, ಇದೊಂದು ಪಕ್ಕಾ ಲವ್​ಸ್ಟೋರಿ ಎಂದನಿಸಬಹುದು.

    ಆದರೆ, ಚಿತ್ರತಂಡದವರು ಏನೇನು ಸರ್​ಪ್ರೈಸ್​ಗಳಿಟ್ಟಿದ್ದಾರೋ ಯಾರಿಗೆ ಗೊತ್ತು? ಇದಕ್ಕೂ ಮುನ್ನ ಸಹಾಯಕ ನಿರ್ದೇಶಕರಾಗಿ ಮತ್ತು ವಿತರಕರಾಗಿ ಗುರುತಿಸಿಕೊಂಡಿರುವ ದೀಪಕ್, ಇದೇ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದು, ತಾವೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸಿದ್ದು, ಕೆ.ಎಂ. ಪ್ರಕಾಶ್ ಸಂಕಲನ ಮಾಡಲಿದ್ದಾರೆ.

    ಮದ್ವೆಯಾಗಿ ನಾಲ್ಕೇ ದಿನಗಳಲ್ಲಿ ಕರೊನಾಗೆ ಬಲಿಯಾದ ಯುವತಿ; ಸೋಂಕಿರುವುದು ಆಕೆಯ ಮರಣದ ಬಳಿಕ ಗೊತ್ತಾಯಿತು..!

    ಆತ್ಮಹತ್ಯೆಯಿಂದ ಪತ್ನಿ ಸತ್ತ ಬೆನ್ನಿಗೇ ನೇಣು ಹಾಕಿಕೊಂಡ ಪತಿ; 4 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಪ್ರೇಮಿಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts