More

    ಲವ್ ಜಿಹಾದ್ ತಡೆಗೆ ಸರ್ಕಾರದ ಕ್ರಮ ಸ್ವಾಗತಾರ್ಹ

    ಹುಕ್ಕೇರಿ: ಲವ್ ಜಿಹಾದ್ ತಡೆಯುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಯೋಚಿಸಿ ಕಾನೂನು ಜಾರಿಗೆ ತರಲು ಹೊರಟಿರುವುದು ಸ್ವಾಗತಾರ್ಹ ನಡೆ. ಲವ್ ಜಿಹಾದ್ ತಡೆಯಲು ಹಲವು ವರ್ಷಗಳಿಂದ ನಾವು ಕೂಡ ಹೋರಾಟ ಮಾಡುತ್ತ ಬಂದಿದ್ದೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದ್ದಾರೆ.

    ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 20 ವರ್ಷಗಳಲ್ಲಿ ಸಾವಿರಾರು ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಮೂಲಕ ಮತಾಂತರಗೊಳಿಸಲಾಗಿದೆ. ಕೇರಳದಲ್ಲಿ ಅಲ್ಲಿನ ಸರ್ಕಾರವೇ ಹೇಳಿರುವಂತೆ 2009ರ ವರೆಗೆ 4,600ಕ್ಕೂ ಹೆಚ್ಚು ಲವ್ ಜಿಹಾದ್ ಪ್ರಕರಣ ಗುರುತಿಸಲ್ಪಟ್ಟಿದ್ದು, ಅದರಲ್ಲಿ ಕ್ರಿಶ್ಚಿಯನ್ ಸಮುದಾಯದ 2,600 ಮಹಿಳೆಯರನ್ನು ಮತಾಂತರಿಸಲಾಗಿದೆ ಎಂದರು. ಶ್ರೀರಾಮ ಸೇನೆ ಲವ್ ಜಿಹಾದ್ ತಡೆಯುವ ನಿಟ್ಟಿನಲ್ಲಿ 10 ಲಕ್ಷಕ್ಕೂ ಹೆಚ್ಚು ಕರಪತ್ರಗಳನ್ನು ಮುದ್ರಿಸಿ ಹಂಚುವ ಮೂಲಕ ಜನಜಾಗೃತಿ ಮೂಡಿಸಿದೆ. ಆದಾಗ್ಯೂ ಸರ್ಕಾರಗಳ ನಿರ್ಲಕ್ಷೃದಿಂದ ಲವ್ ಜಿಹಾದ್ ಪ್ರಕರಣಗಳು ನಿಂತಿಲ್ಲ. ಹಾಗಾಗಿ ಸರ್ಕಾರಗಳು ಕಠಿಣ ಕಾನೂನು ಜಾರಿಗೆ ತಂದಾಗ ಮಾತ್ರ ಮತಾಂತರ ಹೊಂದಿದ ಇತರ ಕೋಮಿನ ಹೆಣ್ಣುಮಕ್ಕಳಿಗೆ ನ್ಯಾಯ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು.

    ಕಾಣದ ಕೈಗಳ ಒತ್ತಡ: ಪೊಲೀಸ್ ಇಲಾಖೆ ಇತ್ತೀಚೆಗೆ ಧ್ವನಿವರ್ಧಕ ಬಳಕೆ ನಿಷೇಧಿಸಿ ಆದೇಶಿಸಿತ್ತು. ಆದರೆ, ಕಾಣದ ಕೈಗಳ ಒತ್ತಡದಿಂದ ಆದೇಶ ಮರಳಿ ಪಡೆದಿರುವುದು ಶೋಚನೀಯ. ದೇವಸ್ಥಾನ, ಮಸೀದಿ ಸೇರಿ ಎಲ್ಲರಿಗೂ ಧ್ವನಿವರ್ಧಕ ಬಳಕೆ ನಿಷೇಧ ಅನ್ವಯಿಸಬೇಕು. ಧ್ವನಿವರ್ಧಕದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ, ಆಸ್ಪತ್ರೆ ಮತ್ತು ನ್ಯಾಯಾಲಯಗಳಿಗೂ ಸಮಸ್ಯೆಯಾಗುತ್ತದೆ. ಹೀಗಾಗಿ ಧ್ವನಿವರ್ಧಕ ನಿಷೇಧಿಸಲು ಸರ್ಕಾರ ಮುಂದಾಗಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.

    ಶ್ರೀರಾಮಸೇನೆ ಸಂಘಟನೆಯ ಶಿವರಾಜ ನಾಯಿಕ, ವಿವೇಕ ಪುರಾಣಿಕ, ಮಾರುತಿ ಬನ್ನಕ್ಕಗೋಳ, ಸುನೀಲ ಪೂಜಾರಿ, ವಿಠ್ಠಲ ಹೆಗಡೆ, ಬಸವರಾಜ ಕುಂದಣ್ಣವರ, ಪಪ್ಪು ಕದಂ, ಬಸವರಾಜ ಕುಂದಣ್ಣವರ, ವಿಶಾಲ ಪವಾರ ಸುದ್ದಿಗೋಷ್ಠಿಯಲ್ಲಿದ್ದರು.

    ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನಕ್ಕೆ ಜಾತಿ ಮತ್ತು ರಾಜಕೀಯ ಲೇಪನ ಮಾಡುತ್ತಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಮೇಲೆ ಅವರು ನ್ಯಾಯಾಂಗದ ಮೂಲಕ ನಿರಪರಾಧಿ ಎಂದು ಸಾಬೀತುಪಡಿಸಬೇಕಾಗುತ್ತದೆ.ಆದರೆ, ಮಠಾಧೀಶರು ಮೊದಲೇ ಈ ಕುರಿತು ಹೇಳಿಕೆ ನೀಡುವುದು ಸಮಂಜಸವಲ್ಲ. ಇದು ನ್ಯಾಯಾಂಗವನ್ನೇ ದೂಷಿಸಿದಂತಾಗುತ್ತದೆ.
    | ಪ್ರಮೋದ ಮುತಾಲಿಕ್, ಶ್ರೀರಾಮಸೇನೆ ಸಂಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts