More

    ತಪ್ಪಿತಾ ಮತ್ತೊಂದು ಸ್ಫೋಟಕ ದುರಂತ!?; ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ಸಾಮಗ್ರಿ ವಶಕ್ಕೆ..

    ಬೆಳಗಾವಿ: ಕೆಲವೇ ದಿನಗಳ ಅಂತರದಲ್ಲಿ ಸಂಭವಿಸಿದ್ದ ಎರಡು ಭಯಂಕರ ಸ್ಫೋಟದ ದುರಂತಗಳ ಬೆನ್ನಿಗೇ ಪೊಲೀಸರು ಭಾರಿ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆ ಮೂಲಕ ಸಂಭಾವ್ಯ ಸ್ಫೋಟ ಪ್ರಕರಣವೊಂದನ್ನು ಪೊಲೀಸರು ತಪ್ಪಿಸಿದಂತಾಗಿದೆ ಎಂದರೂ ಅತಿಶಯೋಕ್ತಿಯೇನಲ್ಲ.

    ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಭಾರಿ ಸ್ಫೋಟ ಸಂಭವಿಸಿ ಆರು ಮಂದಿ ಸಾವಿಗೀಡಾಗಿದ್ದರು. ಅದಾದ ಕೆಲವೇ ದಿನಗಳಲ್ಲಿ ಚಿಕ್ಕಬಳ್ಳಾಪುರದಲ್ಲೂ ಸ್ಫೋಟಕ ಸಾಮಗ್ರಿಗಳು ಸಿಡಿದು ಭಾರಿ ಸಾವು-ನೋವು ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ರಾಜ್ಯಾದ್ಯಂತ ಸ್ಫೋಟಕ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದು, ಇದೀಗ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ತೋಟದಲ್ಲಿ ಸಂಗ್ರಹಿಸಿದ್ದ ಸ್ಪೋಟಕ ಹಾಗೂ ಭಾರಿ ಪ್ರಮಾಣದ ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ.

    ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೆ ಶಿವರಾಮ್ ಲೋಕಂಡೆ ಎಂಬುವವರ ಜಮೀನಿನಲ್ಲಿ ಈ ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿತ್ತು. ಪ್ರಕರಣ ಸಂಬಂಧ ಶಿವರಾಮ ಲೋಕಂಡೆ, ಈರಯ್ಯ ಹಿರೇಮಠ, ಬಾಳೇಶ ಅನಂತಪೂರ, ವಿಜಯ ಜಾಧವ್ ಎಂಬವರನ್ನು ಬಂಧಿಸಿರುವ ಪೊಲೀಸರು, ಎರಡು ಟ್ರಾಕ್ಟರ್ ಹಾಗೂ ಒಂದು ಜೆಸಿಬಿಯನ್ನೂ ವಶಕ್ಕೆ ಪಡೆದಿದ್ದಾರೆ. ಜಿಲೆಟಿನ್ ತುಂಬಿದ ಮೂರು ರಟ್ಟಿನ ಬಾಕ್ಸ್, ಜಿಲೆಟಿನ್​ ಸ್ಫೋಟಿಸುವ ಪದಾರ್ಥಗಳನ್ನು ವಶಕ್ಕೆ ಪಡೆದ ಪೊಲೀಸರು, ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ನೀವೂ ಬಿಗ್​ಬಾಸ್​ ಮನೆಯೊಳಗೆ ಹೋಗಬಹುದು! ಇಲ್ಲಿದೆ ನೋಡಿ ಅವಕಾಶ

    ಬಿಗ್​ಬಾಸ್​ ಮನೆಯಲ್ಲಿ ಚಾಮಯ್ಯ ಮೇಷ್ಟ್ರ ಮಗ ಪಾಠ ಮಾಡ್ತಾರಾ? ಆಟ ಆಡ್ತಾರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts