More

    ಕಳೆದ ಹೋದ ಸಮಯ ಮತ್ತೆ ಸಿಗದು

    ಚಿತ್ರದುರ್ಗ: ಜೀವನದಲ್ಲಿ ಕಳೆದ ಹೋದ ಸಮಯ ಮತ್ತು ವಯಸ್ಸು ಮತ್ತೆ ಸಿಗದೆಂದು ಶಿವಮೊಗ್ಗ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ರಾಜಶೇಖರ್ ಹೆಬ್ಬಾರ್ ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
    ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ 2022-23ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಉ ದ್ಘಾಟಿಸಿ ಮಾತನಾಡಿ,ಸಾಮಾಜಿಕ ಜಾಲ ತಾಣಗಳಿಂದ ದೂರವಿದ್ದು,ನಿಗದಿತ ವೇಳಾಪಟ್ಟಿಯೊಂದಿಗೆ ಅಭ್ಯಾಸ ಮಾಡುವ ಮೂಲಕ ಸಮಯವನ್ನು ಸದುಪಯೋಗ ಪಡಿಸಿಕೊಂಡರೆ ಯಶಸ್ಸುಗಳಿಸಲು ಸಾಧ್ಯ.
    ಕೋವಿಡ್‌ನಿಂದಾಗಿ ಶೈಕ್ಷಣಿಕ ವ್ಯವಸ್ಥೆ ಕೂಡ ಹದಗೆಟ್ಟಿದೆ. ಆದ್ದರಿಂದ ವಿದ್ಯಾರ್ಥಿಗಳು ಇನ್ನಷ್ಟು ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡ ಬೇಕು. ಪರಿಪೂರ್ಣ ವಿದ್ಯಾರ್ಥಿಗೆ ಎನ್‌ಎಸ್‌ಎಸ್ ತುಂಬ ಸಹಕಾರಿ. ಪಾಲಕರಿಗಿಂತ ಶಿಕ್ಷಕರು ವಿದ್ಯಾರ್ಥಿಗಳ ಹೆಚ್ಚು ಪ್ರಭಾವ ಬೀರುವವ ರಾಗಿತ್ತಾರೆ. ಪ್ರತಿಯೊಬ್ಬರಿಗೂ ಅವಕಾಶಗಳು ಒದಗಿ ಬರುತ್ತವೆ. ಆದರೆ ಅವುಗಳನ್ನು ಬಳಸಿಕೊಳ್ಳುವ ಜಾಣ್ಮೆ,ಸಮಯ ಪ್ರಜ್ಞೆ ನಮ್ಮಲ್ಲಿ ಇರಬೇಕು. ಮಾನವೀಯ ಗುಣಗಳಿಗೆ ಮಹತ್ವ ನೀಡಬೇಕೆಂದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಎನ್.ಚಲುವರಾಜ್,ನಾಯಕತ್ವ ಗುಣ ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರಾಚಾರ‌್ಯ ಡಾ.ಎಲ್.ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್‌ಜೆಎಂ ದಂತ ಮಹಾವಿದ್ಯಾಲಯದ ಪ್ರಾಚಾರ‌್ಯೆ ಡಾ.ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೋಡೆಲ್ ಅಧಿಕಾರಿ ಲೋಕೇಶ್,ಜಗದೀಶ್ ಮತ್ತಿತರರು ಇದ್ದರು. ಪ್ರೊ.ಸಿ.ಬಸವರಾಜಪ್ಪ ಸ್ವಾಗತಿಸಿ,ಚೇತನಾ ನಿರೂಪಿಸಿದರು. ಪೂಜಿತಾ ವಂದಿಸಿದರು.
    (ಸಿಟಿಡಿ 29 ಎಸ್‌ಜೆಎಂ)
    ಚಿತ್ರದುರ್ಗ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿ ಒಕ್ಕೂಟಕ್ಕೆ ಶಿವಮೊಗ್ಗ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ರಾಜಶೇಖರ್ ಹೆಬ್ಬಾರ್ ಚಾಲನೆ ನೀಡಿದರು. ಎನ್.ಚಲುವರಾಜ್,ಡಾ.ಎಲ್.ಈಶ್ವ ರಪ್ಪ ಮತ್ತಿತರರು ಇದ್ದರು.
    —–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts