More

    ಲೈಂಗಿಕ ಸುಖದ ನಷ್ಟ ಅನುಭವಿಸಿದ್ದೇನೆ! 10 ಸಾವಿರ ಕೋಟಿ ರೂ. ಪರಿಹಾರ ಕೋರಿ ಕೋರ್ಟ್​ ಮೆಟ್ಟಿಲೇರಿದ ವ್ಯಕ್ತಿ

    ಭೋಪಾಲ್​: ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ ಗ್ಯಾಂಗ್​ರೇಪ್​​ ಪ್ರಕರಣದಿಂದ ಖುಲಾಸೆಗೊಂಡಿರುವ ಮಧ್ಯ ಪ್ರದೇಶದ ರಾಟ್ಲಮ್​ ಮೂಲದ ಬುಡಕಟ್ಟು ಜನಾಂಗದ ವ್ಯಕ್ತಿ, ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದು, 10,000 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟು ಸರ್ಕಾರದ ವಿರುದ್ಧ ದಾವೆ ಹೂಡಿದ್ದಾನೆ.

    ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ 666 ದಿನ ಜೈಲಿನಲ್ಲಿ ಶಿಕ್ಷೆ ಅನುಭವಿಸುವಂತೆ ಮಾಡಲಾಯಿತು. ಶಿಕ್ಷೆಯ ಅವಧಿಯಲ್ಲಿ ನನ್ನ ಪತ್ನಿಯಿಂದ ದೂರವಾಗಿ ದೇವರು ಮಾನವನಿಗೆ ಉಡುಗೊರೆಯಾಗಿ ನೀಡಿರುವಂತಹ ಲೈಂಗಿಕ ಸುಖದ ನಷ್ಟವನ್ನು ಅನುಭವಿಸಿದ್ದೇನೆ. ಅಲ್ಲದೆ, ಸಾಕಷ್ಟು ಭಾವನಾತ್ಮಕ ನೋವನ್ನು ಅನುಭವಿಸಿದ್ದೇನೆ ಎಂದು ಅರ್ಜಿದಾರ ಪರಿಹಾರ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಕಾರಣವನ್ನು ಉಲ್ಲೇಖಿಸಿದ್ದಾನೆ.

    2020ರ ಡಿಸೆಂಬರ್​ 23ರಂದು ಕಾಂತು ಅಲಿಯಾಸ್​ ಕಾಂತಿಲಾಲ್​ ಭೀಲ್​ (35) ಎಂಬಾತನನ್ನು ಗ್ಯಾಂಗ್​ರೇಪ್​ ಪ್ರಕರಣದ ಅಡಿಯಲ್ಲಿ ಬಂಧಿಸಲಾಗಿತ್ತು. ಕಾಂತಿಲಾಲ್​ ಸುಮಾರು 2 ವರ್ಷ ತನ್ನದಲ್ಲದ ತಪ್ಪಿಗೆ ಅನ್ಯಾಯವಾಗಿ ಜೈಲಿನಲ್ಲಿ ಕಾಲ ಕಳೆಯಬೇಕಾಯಿತು. 2022ರ ಅಕ್ಟೋಬರ್​ ತಿಂಗಳಲ್ಲಿ ಪ್ರಕರಣದಿಂದ ಖುಲಾಸೆಗೊಂಡು ಜೈಲಿನಿಂದ ಬಿಡುಗಡೆಯಾಗಿದ್ದಾನೆ.

    ಕಾಂತೀಲಾಲ್​ ಒಟ್ಟು 10,006.2 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾನೆ. 10 ಸಾವಿರ ಕೋಟಿ ರೂ. ಪರಿಹಾರಕ್ಕೆ ಭಾವನಾತ್ಮಕ ಕಾರಣ ನೀಡಿದ್ದರೆ, ಉಳಿದ 6 ಕೋಟಿ ರೂ. ಇತರೆ ಖರ್ಚುಗಳು ಎಂದು ಅರ್ಜಿಯಲ್ಲಿ ನಮೂದಿಸಿದ್ದಾನೆ.

    ಜೈಲು ಶಿಕ್ಷೆಯ ಅಗ್ನಿಪರೀಕ್ಷೆಯು ನನ್ನ ಜೀವನವನ್ನೇ ತಲೆಕೆಳಗಾಗಿ ಮಾಡಿತು. ನನ್ನ ಹೆಂಡತಿ, ಮಕ್ಕಳು ಮತ್ತು ವಯಸ್ಸಾದ ತಾಯಿ ಬಹಳ ನೋವನ್ನು ಅನುಭವಿಸಿದ್ದಾರೆ. ಆ ಎರಡು ವರ್ಷಗಳ ಸೆರೆವಾಸದ ಸಮಯದಲ್ಲಿ ನಾನು ಅನುಭವಿಸಿದ ನೋವನ್ನು ವಿವರಿಸಲು ಸಾಧ್ಯವಿಲ್ಲ. ನನ್ನ ಕುಟುಂಬಕ್ಕೆ ಒಳ ಉಡುಪುಗಳನ್ನು ಸಹ ಪಡೆಯಲು ಸಾಧ್ಯವಿರಲಿಲ್ಲ. ನಾನು ಕೂಡ ಜೈಲಿನಲ್ಲಿ ಬಟ್ಟೆಯಿಲ್ಲದೆ ಶಾಖ ಮತ್ತು ಶೀತದಂತಹ ವಿಪರೀತ ಹವಾಮಾನವನ್ನು ಎದುರಿಸಿದ್ದೇನೆ ಎಂದು ಕಾಂತೀಲಾಲ್​ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಬೆಳಗಾವಿಯಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಪಿಕ್​ ಅಪ್​ ವಾಹನ: 6 ಮಂದಿ ದುರಂತ ಸಾವು

    ಪದವಿ ವಿದ್ಯಾರ್ಥಿಗಳಿಗೆ ಇನ್ನೂ ಸಿಗದ ಟ್ಯಾಬ್…

    ಹತ್ತರ ವಯಸ್ಸಲ್ಲೇ ಅತ್ಯಾಚಾರ ಸಂತ್ರಸ್ತೆ, ಒಂದು ಕಾಲದ ಭಿಕ್ಷುಕಿ; ಈಗ ಅಂತಾರಾಷ್ಟ್ರೀಯ ಬ್ಯೂಟಿಕ್ವೀನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts