More

    ರಸ್ತೆಯಲ್ಲಿ ನಡೆದು ಹೋಗುವಾಗ ಮೊಬೈಲ್​ ನೋಡಿದ್ರೆ ಜೈಲಿಗೆ ಹೊತ್ತೊಯ್ಯಲಿದ್ದಾರೆ ಹುಷಾರ್​!

    ಟೋಕಿಯೊ: ಆಧುನಿಕ ಜಗತ್ತಿನಲ್ಲಿ ಮೊಬೈಲ್​ಗೆ ಒಗ್ಗಿಕೊಂಡಿರುವ ಮಾನವರು ಮೊಬೈಲ್​ ಬಿಟ್ಟು ಒಂದು ಕ್ಷಣವೂ ಇರಲಾರರು. ಏಳುವಾಗ, ಮಲಗುವಾಗ, ಊಟ ಮಾಡುವಾಗ ಹಾಗೂ ಶೌಚಗೃಹಕ್ಕೆ ಹೋದಾಗ ಯಾವಾಗೆಂದರೆ ಆವಾಗ ಕೈಯಲ್ಲಿ ಮೊಬೈಲ್​ ಇರಲೇಬೇಕು. ಆದರೆ, ಇನ್ನುಂದೆ ಇದಕ್ಕೂ ಕಡಿವಾಣ ಬಿದ್ದರೆ ಆಶ್ಚರ್ಯ ಪಡಬೇಕಾಗಿಲ್ಲ. ಏಕೆಂದರೆ ಈಗಾಗಲೇ ಜಪಾನ್​ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಟ್ಟಿದೆ.

    ಇದನ್ನೂ ಓದಿ: VIDEOS| ಬಡತನದಲ್ಲೂ ಅರಳಿದ ಪ್ರತಿಭೆ: ಅಣ್ಣ-ತಂಗಿ ಡ್ಯಾನ್ಸ್​ಗೆ​ ಲಕ್ಷಾಂತರ ಮಂದಿ ಫಿದಾ!

    ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ರಸ್ತೆ ಎಂಬುದನ್ನು ನೋಡದೇ ಕೇವಲ ಮೊಬೈಲ್​ ನೋಡುತ್ತಾ ಸಾಗಿದರೆ, ಅಂತವರನ್ನು ಸೀದಾ ಜೈಲಿಗೆ ಕರೆದೊಯ್ಯುವ ಹೊಸ ಕಾನೂನು ಜಾರಿಗೆ ತರಲು ಜಪಾನ್​ ದೇಶ ಮುಂದಾಗಿದೆ. ಕೇಂದ್ರ ಜಪಾನ್​ನ ಕನಗಾವಾ ಪ್ರಾಂತ್ಯದ ಯಮ್ಯಾಟೋ ನಗರದಲ್ಲಿ ಈ ಕಾನೂನು ಜಾರಿಗೆ ಬರಲಿದ್ದು, ರಸ್ತೆಯಲ್ಲಿ ಮೊಬೈಲ್​ ನೋಡಿದರೆ, ಅದು ಕಾನೂನಿಗೆ ವಿರುದ್ಧ ಎಂಬ ನಿರ್ಧಾರಕ್ಕೆ ಬರಲಾಗಿದೆ.

    ನಡೆಯುವಾಗ ಬಹುತೇಕರು ತಮ್ಮ ಮೊಬೈಲ್​ ಅನ್ನು ನೋಡುತ್ತಿರುತ್ತಾರೆ ಎಂಬ ವರದಿಯನ್ನು ಸಂಶೋಧಕರು ನೀಡಿದ್ದು, ಈ ಚಟುವಟಿಕೆಯನ್ನು ಬ್ಯಾನ್​ ಮಾಡುವ ಪ್ರಸ್ತಾವನೆ ಮೇಲೆ ಮತದಾನ ನಡೆಸಲು ನಗರ ಕೌನ್ಸಿಲರ್​ ಮುಂದಾಗಿದ್ದಾರೆ.

    ಇದನ್ನೂ ಓದಿ: ವ್ಯಕ್ತಿಯ ಕಾಮದಾಟಕ್ಕೆ ಅಪ್ರಾಪ್ತೆ ಜೀವನ ಬಲಿ: ಹೆಣ್ಣು ಮಗುವಿಗೆ ಜನ್ಮ ನೀಡಿದ 13ರ ಬಾಲಕಿ

    ಸ್ಥಳೀಯ ಮಾಧ್ಯಮದ ಪ್ರಕಾರ ಸಂಶೋಧಕರು ಯಮ್ಯಾಟೋ ಎರಡು ರೈಲ್ವೇ ನಿಲ್ದಾಣದ ಬಳಿ ಸುಮಾರು 6 ಸಾವಿರ ಮಂದಿಯನ್ನು ವೀಕ್ಷಿಸಿದ್ದು, ಅವರಲ್ಲಿ ಶೇ. 12 ರಷ್ಟು ಮಂದಿ ನಡೆದು ಹೋಗುವಾಗ ಮೊಬೈಲ್​ ಬಳಸುವುದು ಕಂಡುಬಂದಿದೆ. ಇದರಿಂದ ಸಾಕಷ್ಟು ಅವಘಡಗಳಿಗೆ ದಾರಿಯಾಗುತ್ತದೆ ಎಂಬ ಕಾರಣಕ್ಕೆ ಮೊಬೈಲ್​ ಚಟುವಟಿಕೆಯನ್ನು ಬ್ಯಾನ್​ ಮಾಡುವಂತೆ ಸಾಕಷ್ಟು ಒತ್ತಾಯಗಳು ಕೇಳಿಬಂದಿದೆ.

    ಒಂದು ವೇಳೆ ಜೂನ್​ನಲ್ಲಿ ಮತದಾನದ ಮೂಲಕ ಹೊಸ ನಿಯಮ ಅಂಗೀಕಾರವಾದರೆ, ಈ ನಿರ್ಧಾರ ತೆಗೆದುಕೊಂಡ ಜಪಾನ್​ ಮೊದಲ ನಗರ ಎಂಬ ಖ್ಯಾತಿಗೆ ಯಮ್ಯಾಟೋ ಭಾಜನವಾಗಲಿದೆ. ಕಾನೂನು ಅಂಗೀಕಾರವಾದರೆ ಜುಲೈ ಒಂದರಿಂದ ಜಾರಿಗೆ ಬರಲಿದೆ. ಶೇ.80 ರಷ್ಟು ಪಾದಾಚಾರಿಗಳು ಗಾಯಗೊಳ್ಳುವುದಕ್ಕೆ ಮೊಬೈಲ್​ ಕಾರಣ ಎಂದು ವಿಜ್ಞಾನಿಗಳು ಸಹ ಎಚ್ಚರಿಸಿದ್ದಾರೆ. ಇದೇ ನಿಯಮ ಮುಂದೆ ಎಲ್ಲ ರಾಷ್ಟ್ರಗಳಲ್ಲೂ ಬಂದರೆ ಅಚ್ಚರಿಯಾಗದು. (ಏಜೆನ್ಸೀಸ್​)

    ಶಾಲೆಗಳ ಪುನರಾರಂಭ ಕುರಿತು ಪೋಷಕರಿಂದಲೇ ಅಭಿಪ್ರಾಯ ಸಂಗ್ರಹ: ಸಚಿವ ಸುರೇಶ್​ ಕುಮಾರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts