More

    ಕನ್ನಡಿಯಲ್ಲಿ ಮುಖ ನೋಡಿಕೊಳ್ಳಿ…ಮಾಜಿ ಸಿಎಂ ಬಿಎಸ್‌ವೈಗೆ ಸಚಿವ ಎಂ.ಬಿ. ಪಾಟೀಲ ಟಾಂಗ್ !

    ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಒಂದೂವರೆ ಲಕ್ಷ ಕೋಟಿ ರೂ.ಅನುದಾನ ಕೊಡುವುದಾಗಿಯೂ ಅದಕ್ಕಾಗಿ ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನುಡಿದಂತೆ ನಡೆದರಾ? ಎಂದು ಪ್ರಶ್ನಿಸಿರುವ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ, ಕಾಂಗ್ರೆಸ್ ಬಜೆಟ್ ಕುರಿತು ಟೀಕಿಸುವ ಮುನ್ನ ಕನ್ನಡಿಯಲ್ಲಿ ನಿಮ್ಮ ಮುಖ ನೀವು ನೋಡಿಕೊಳ್ಳಿ ಎಂದರು.

    ಐತಿಹಾಸಿಕ ಭೂತನಾಳ ಕೆರೆಗೆ ಶನಿವಾರ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತು ಪರಿಶೀಲನೆ ನಡೆಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನುಡಿದಂತೆ ನಡೆದಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಎಷ್ಟು ಭರವಸೆ ಈಡೇರಿಸಲಾಗಿದೆ ಹೇಳಲಿ ನೋಡೋಣ ಎಂದರು.

    ಬಿಜೆಪಿಯವರು ಈ ಹಿಂದೆ 2018ರಲ್ಲಿ 606 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ 50 ಭರವಸೆ ಮಾತ್ರ ಈಡೇರಿಸಿದರು. ಶೇ.10ರಷ್ಟು ಭರವಸೆ ಕೂಡ ಈಡೇರಿಸಲಿಲ್ಲ. ಆದರೆ, ಸಿದ್ದರಾಮಯ್ಯ ಅವರು 2013ರಲ್ಲಿ ನೀಡಿದ 165 ಭರವಸೆಗಳ ಪೈಕಿ 158 ಈಡೇರಿಸಿ ಮತ್ತೆ 30ಯೋಜನೆಗಳನ್ನು ಹೆಚ್ಚುವರಿಯಾಗಿ ತೆಗೆದುಕೊಂಡರು. ಪ್ರಸಕ್ತ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದೇವೆ. ಹೀಗಾಗಿ ಟೀಕಿಸುವ ಮುನ್ನ ನಿಮ್ಮ ಮುಖ ನೀವು ಮೊದಲು ಕನ್ನಡಿಯಲ್ಲಿ ನೋಡಿಕೊಳ್ಳಿ ಎಂದು ಯಡಿಯೂರಪ್ಪ ಅವರಿಗೆ ತಿವಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಹಣ ಕೊಡುತ್ತೇವೆ. ಸಭೆ ಕೂಡ ಕರೆದಿದ್ದೇವೆ. ಅದಕ್ಕಿಂತ ಮೊದಲು ಗೆಜೆಟ್ ನೋಟಿಫಿಕೇಶನ್ ಮಾಡಿಸಿ ಎಂದು ಬಿಜೆಪಿಯವರಿಗೆ ಹೇಳಿದರು.

    ಕಾಂಗ್ರೆಸ್ ಶ್ವೇತ ಪತ್ರ ಸಹಿತ ಬಜೆಟ್ ಮಂಡಿಸಿದೆ. ಹೀಗಾಗಿ ಬಿಜೆಪಿಯವರಿಗೆ ಸದನದಲ್ಲಿ ಮಾತನಾಡಲಾಗಲಿಲ್ಲ. ಎಲ್ಲಿ ತಮ್ಮ ಬಂಡವಾಳ ಬಯಲಾಗಲಿದೆ ಎಂದು ಕುಳಿತುಕೊಳ್ಳಲಾಗದೆ ಹೊರನಡೆದರು. ಒಳಗೆ ಕುಳಿತುಕೊಂಡೇ ‘ಏನಿಲ್ಲ.. ಏನಿಲ್ಲ?’ ಎಂದು ಹೇಳಬೇಕಿತ್ತು ನೋಡೋಣ ಎಂದು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts