More

    ಉದ್ದ ಬೆರಳಿನ ಬಾವಲಿ ಪತ್ತೆ

    ನರಗುಂದ: ಅತ್ಯಂತ ವಿರಳ ಜಾತಿಯ ಉದ್ದ ಬೆರಳಿನ ಬಾವಲಿ ಯೊಂದು ಪಟ್ಟಣದಲ್ಲಿ ಪತ್ತೆಯಾಗಿದೆ.

    ನಗರದ ಹೊರವಲಯದಲ್ಲಿನ ಜ್ಞಾನಮುದ್ರಾ ಪಬ್ಲಿಕ್ ಶಾಲೆಯ ಗೋಡೆ ಮೇಲೆ ಬಾವಲಿ ಕಂಡು ಬಂದಿದೆ.

    ಬೆಂಗಳೂರಿನ ಬಾವಲಿ ಸಂಶೋಧಕ ರಾಜೇಶ ಪುಟ್ಟಸ್ವಾಮಿ ಅವರ ಪ್ರಕಾರ, ಬಳ್ಳಾರಿಯ ಸಂಡೂರಿನಲ್ಲಿ ಈ ಪ್ರಭೇದದ ಬಾವಲಿಗಳ ಧ್ವನಿಯನ್ನು ತಜ್ಞರು ದಾಖಲಿಸಿದ್ದಾರೆ.

    ಈ ಜಾತಿಯ ಬಾವಲಿಗಳು ಕರ್ನಾಟಕದ ಪಶ್ವಿಮಘಟ್ಟ ಪ್ರದೇಶಗಳಲ್ಲಿವೆ.

    ಬಯಲು ಸೀಮೆಯ ಗದಗ ಜಿಲ್ಲೆಯಲ್ಲಿ ದಾಖಲಾಗಿರುವ ಈ ಬಾವಲಿಯ ಡಿಎನ್‌ಎ ಅಧ್ಯಯನದಿಂದ ಮೂಲ ಜಾತಿಯನ್ನು ತಿಳಿಯಬಹುದು.

    ಇದು ಮಿನಿಯೊಪ್ಟೆರಸ್ ಸ್ಕ್ರೈಬರ್ಸಿಯ ಉಪಜಾತಿಯ ಬಾವಲಿ ಯಾಗಿರುವ ಸಾಧ್ಯತೆಯೂ ಇದೆ ಎಂದು ತಿಳಿಸಿದ್ದಾರೆ.

    ಈ ಬಾವಲಿಯ ಮಧ್ಯದ ಬೆರಳಿನ ಮೂಳೆಯು ಉದ್ದವಾಗಿ ತುದಿಯಲ್ಲಿ ಬಾಗಿರುವುದರಿಂದ ಉದ್ದ ಬೆರಳಿನ ಬಾವಲಿ ಅಥವಾ ರೆಕ್ಕೆಗಳು (ಪೆಟಾಜಿಯಂ) ಬಾಗಿರುವುದರಿಂದ ಬೆಂಟ್‌ವಿಂಗ್ಡ ಬ್ಯಾಟ್ ಎಂದು ಸಾಮಾನ್ಯ ಭಾಷೆಯಲ್ಲಿ ಕರೆಯುತ್ತಾರೆ.

    ಈ ಜಾತಿಯ ಬಾವಲಿಗಳ ತುಪ್ಪಳಗಳು ಕಂದು-ಕಪ್ಪು ಬಣ್ಣದಿಂದ ಕೂಡಿರುತ್ತವೆ. ಕಿವಿಗಳು ದುಂಡಾಗಿ ಚಿಕ್ಕದಾಗಿರುತ್ತವೆ.

    ಇವು ಸಂಪೂರ್ಣ ನಿಶಾಚರಿಗಳಾಗಿವೆ. ಈ ಬಾವಲಿಗಳು 40-50 ಸೆ.ಮಿ ಉದ್ದ ಮತ್ತು 10-16ಗ್ರಾಂ ತೂಕ ಹೊಂದಿರುತ್ತವೆ.

    ‘ರೈತರ ಬೆಳೆಗೆ ಮಾರಕವಾದ ಕೀಟಗಳನ್ನು ಭಕ್ಷಿಸುವುದರ ಮೂಲಕ ಕೀಟಗಳ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

    ಇವುಗಳ ಸಂರಕ್ಷಣೆ ಅವಶ್ಯಕವಾಗಿದೆ’ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts