More

    ಮೂರು ವರ್ಷ ಹಿಂದಿನ ಕೊಲೆ ಯತ್ನ ರಹಸ್ಯ ಬಿಚ್ಚಿಟ್ಟ ಇಸ್ರೋ ವಿಜ್ಞಾನಿ: ದೋಸೆ ಚಟ್ನಿಯಲ್ಲಿ ವಿಷಪ್ರಾಶನ!

    ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾದ ತಪನ್​ ಮಿಶ್ರಾ ಅವರಿಗೆ ಮೂರು ವರ್ಷಗಳ ಹಿಂದೆ ವಿಷವುಣಿಸಿದ ಭಯಾನಕ ರಹಸ್ಯವೊಂದನ್ನು ಸ್ವತಃ ಮಿಶ್ರಾ ಅವರೇ ಜನರ ಮುಂದೆ ತೆರೆದಿಟ್ಟಿದ್ದಾರೆ.

    2017, ಮಾರ್ಚ್​ 23ರಂದು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ಪ್ರಚಾರ ಸಂದರ್ಶನ ವೇಳೆ ಮಾರಣಾಂತಿಕ ಆರ್ಸೆನಿಕ್ ಟ್ರೈಆಕ್ಸೈಡ್ ವಿಷವನ್ನು ಗೊತ್ತಿಲ್ಲದೆಯೇ ನನಗೆ ನೀಡಿದ್ದರು ಎಂದು ಮಿಶ್ರಾ ಅವರು ಗಂಭೀರ ಆರೋಪ ಮಾಡಿದ್ದಾರೆ. ಬಹುಶಃ ವಿಷವನ್ನು ಸ್ನ್ಯಾಕ್ಸ್​ ಸೇವನೆಯ ಬಳಿಕ ಊಟದ ಸಮಯದಲ್ಲಿ ದೋಸೆಯ ಚಟ್ನಿಯಲ್ಲಿ ಬೆರೆಸಿದ್ದರು ಎಂದು ಮಿಶ್ರಾ ಹೇಳಿದ್ದಾರೆ.

    ಇದನ್ನೂ ಓದಿರಿ: ಮಗಳು ದೊಡ್ಡವಳಾಗಿದ್ದಾಳೆ, ಅವಳ ಆರೈಕೆ ಹೇಗೆ ಮಾಡುವುದು? ತಿಂಡಿ ಯಾವುದು ಕೊಡಬೇಕು?

    ಮಿಶ್ರಾ ಅವರು ಪ್ರಸ್ತುತ ಇಸ್ರೋದ ಹಿರಿಯ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಈ ತಿಂಗಳ ಅಂತ್ಯದಲ್ಲಿ ಅವರು ನಿವೃತ್ತಿ ಹೊಂದಲಿದ್ದಾರೆ. ಸಲಹೆಗಾರರಾಗುವ ಮುನ್ನ ಇಸ್ರೋದ ಅಹಮದಾಬಾದ್​ ಮೂಲದ ಸ್ಪೇಸ್​ ಅಪ್ಲಿಕೇಷನ್​ ಸೆಂಟರ್​ನಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

    ತಮ್ಮ ಫೇಸ್​ಬುಕ್​ನಲ್ಲಿ ಬಹು ದಿನಗಳ ರಹಸ್ಯವನ್ನು ಬರೆದುಕೊಂಡಿದ್ದಾರೆ. “ಲಾಂಗ್ ಕೆಪ್ಟ್ ಸೀಕ್ರೆಟ್” ಎಂಬ ಶೀರ್ಷಿಕೆಯೊಂದಿಗೆ ಮೂರು ವರ್ಷಗಳ ಹಿಂದಿನ ರಹಸ್ಯವನ್ನು ಮಿಶ್ರಾ ತಿಳಿಸಿದ್ದಾರೆ. ವಿಷಪ್ರಾಶನ ಬಳಿಕ ವೈದ್ಯರ ಸೂಕ್ತ ಕಾಲದ ನೆರವಿನಿಂದಾಗಿ ಚೇತರಿಸಿಕೊಂಡೆ ಎಂದು ಹೇಳಿದ್ದಾರೆ.

    ವಿಷಪ್ರಾಸನ ಬಳಿಕ ಉಸಿರಾಟದ ತೊಂದರೆ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡಿತು. ಚರ್ಮದಲ್ಲಿ ಗಂಭೀರವಾದ ಬದಲಾವಣೆ ಮತ್ತು ಶಿಲೀಂಧ್ರಗಳ ಸೋಂಕು ಉಂಟಾಯಿತು ಎಂದು ಬರೆದುಕೊಂಡಿರುವ ಮಿಶ್ರಾ ತಮ್ಮ ಮೆಡಿಕಲ್​ ವರದಿಯನ್ನು ಪೋಸ್ಟ್​ ಮಾಡಿದ್ದಾರೆ. ನವದೆಹಲಿ ಏಮ್ಸ್​ ಆಸ್ಪತ್ರೆಯಲ್ಲಿ ನೀಡಿದ ವರದಿಯಾಗಿದೆ.

    ಇದನ್ನೂ ಓದಿ: ಮರ್ಡರ್ ಆದ ವೆಲ್ಡರ್​: ರಾತ್ರಿ ಮನೆಯಲ್ಲೇ ಇದ್ದ, ಬೆಳಗ್ಗೆ ತೋಟದಲ್ಲಿ ಹೆಣವಾಗಿ ಬಿದ್ದಿದ್ದ..!

    ಸಿಂಥೆಟಿಕ್ ಅಪರ್ಚರ್ ರಾಡಾರ್ ಅನ್ನು ನಿರ್ಮಿಸುವಲ್ಲಿನ ಪರಿಣತಿ ಹಾಗೂ ಬಹುದೊಡ್ಡ ಮಿಲಿಟರಿ ಮತ್ತು ವಾಣಿಜ್ಯ ಮಹತ್ವದ ವಿಮರ್ಶಾತ್ಮಕ ಕೊಡುಗೆ ಹೊಂದಿರುವ ವಿಜ್ಞಾನಿಯನ್ನು ನಾಶ ಮಾಡುವ ಉದ್ದೇಶದಿಂದ ನಡೆದ ಬೇಹುಗಾರಿಕೆ ದಾಳಿಯಂತೆ ತೋರುತ್ತದೆ ಎಂದು ಆರೋಪಿಸಿರುವ ಮಿಶ್ರಾ, ಈ ಘಟನೆಯನ್ನು ಕೇಂದ್ರ ಸರ್ಕಾರ ತನಿಖೆಗೆ ಮಾಡಬೇಕೆಂದು ಬಯಸುತ್ತೇನೆಂದಿದ್ದಾರೆ. (ಏಜೆನ್ಸೀಸ್​)

    1.5 ಕೋಟಿ ರೂ.ಗೆ ವಿವಾಹಿತ ಬಾಯ್​ಫ್ರೆಂಡ್​ ಖರೀದಿಸಿದ ಮಹಿಳೆ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

    ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

    7 ವರ್ಷದ ಮಗನಿಗೆ ನಿದ್ರೆ ಮಾತ್ರೆ ತಿನ್ನಿಸಿ ಸಾಯಿಸಿದ್ಲು; ಗಂಡ-ಅಪ್ಪ-ಅವಳೂ ಡಾಕ್ಟರ್; ಆದ್ರೂ ಮಾಡಿದ್ದು ಜೀವ ತೆಗೆಯೋ ಕೆಲಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts