More

    ‘ಲಾಂಗ್​ಡ್ರೈವ್​’ನಲ್ಲೊಂದು ಜಾಲಿ ರೈಡ್; ಇದು ಪ್ರೀತಿ ಪ್ರೇಮದ ಆಹ್ಲಾದಕರ ಪ್ರಯಾಣ…

    ಬೆಂಗಳೂರು: ಗುಡ್​ವ್ಹೀಲ್​ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ ‘ಲಾಂಗ್​ ಡ್ರೈವ್’ ಚಿತ್ರವೀಗ ಶೂಟಿಂಗ್​ ಕೆಲಸಗಳನ್ನು ಮುಗಿಸಿಕೊಂಡು, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳತ್ತ ಚಿತ್ತ ಹರಿಸಿದೆ. ಶೀರ್ಷಿಕೆ ಹೇಳುವಂತೆ ಇದೊಂದು ಪ್ರಯಾಣದ ಹಾದಿಯಲ್ಲಿ ಸಾಗುವ ಕಥೆ. ವಿಶೇಷ ಏನೆಂದರೆ ಸತ್ಯ ಘಟನೆಯನ್ನೇ ಆಧರಿಸಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶ್ರೀರಾಜ್. ಇತ್ತೀಚೆಗಷ್ಟೇ ಹಾಡಿನ ಶೂಟಿಂಗ್ ಮುಗಿಸಿಕೊಳ್ಳುವ ಮೂಲಕ ಕುಂಬಳಕಾಯಿ ಒಡೆದಿದೆ.  


    ‘ಲಾಂಗ್‌ಡ್ರೈವ್’ ಸಿನಿಮಾದಲ್ಲಿ ಅರ್ಜುನ್ ಯೋಗಿ ನಾಯಕನಾಗಿ ನಟಿಸಿದ್ದು, ಅವರಿಗೆ ಇಬ್ಬರು ನಾಯಕಿಯರಿದ್ದಾರೆ. ತೇಜಸ್ವಿನಿ ಶೇಖರ್ ಮತ್ತು ಸುಪ್ರಿತಾ ಸತ್ಯನಾರಾಯಣನ್ ಜೋಡಿಯಾಗಿದ್ದಾರೆ. ಕಿರುತೆರೆಯಲ್ಲಿಯೇ ಹೆಚ್ಚು ಮನೆಮಾತಾಗಿರುವ ಈ ನಟಿಯರು ಲಾಂಗ್​ ಡ್ರೈವ್ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದಾರೆ.

    ‘ಲಾಂಗ್​ಡ್ರೈವ್​’ನಲ್ಲೊಂದು ಜಾಲಿ ರೈಡ್; ಇದು ಪ್ರೀತಿ ಪ್ರೇಮದ ಆಹ್ಲಾದಕರ ಪ್ರಯಾಣ...

    ಇದನ್ನೂ ಓದಿ: ರಾಧಿಕಾ ಆಪ್ಟೆಯನ್ನು ಬಹಿಷ್ಕರಿಸಿ: ಹಣಕ್ಕಾಗಿ ಬೆತ್ತಲಾಗುವವರ ಸಿನಿಮಾ ನೋಡ್ಬೇಡಿ ಅಂದ್ರು ನೆಟ್ಟಿಗರು!

    ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ದೇಶಕರು, ‘ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಘಟನೆಯನ್ನೇ ಆಧರಿಸಿ ಸಿನಿಮಾ ಮಾಡಿದ್ದೇವೆ. ಮುದ್ದಾದ ಪ್ರೇಮಕಥೆ ಈ ಸಿನಿಮಾದಲ್ಲಿದೆ. ಕಳೆದ ಆರು ತಿಂಗಳಿಂದ ಶೂಟಿಂಗ್ ಆರಂಭಿಸಿದ್ದೆವು. ಲಾಕ್​ಡೌನ್​ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಇತ್ತೀಚೆಗಷ್ಟೇ ಹಾಡಿನ ಶೂಟಿಂಗ್ ಮುಗಿಸಿಕೊಂಡು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳತ್ತ ಗಮನಹರಿಸಿದ್ದೇವೆ. ಈ ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಹಾಕಿದ್ದೇವೆ ಎಂಬುದು ನಿರ್ದೇಶಕ ಶ್ರೀರಾಜ್ ಮಾತು.

    ‘ಲಾಂಗ್​ಡ್ರೈವ್​’ನಲ್ಲೊಂದು ಜಾಲಿ ರೈಡ್; ಇದು ಪ್ರೀತಿ ಪ್ರೇಮದ ಆಹ್ಲಾದಕರ ಪ್ರಯಾಣ...


    ಗುಡ್‌ವ್ಹೀಲ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮಂಜುನಾಥ್ ಎಂಬುವವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜಿಮ್ ಕೀರ್ತಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಅಷ್ಟೇ ಅಲ್ಲ ಚಿತ್ರದಲ್ಲಿ ನಟಿಸಿದ್ದಾರೆ. ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಮಾಡಿದ್ದಾರೆ. ಇನ್ನು ಬಹದ್ದೂರ್ ಗಂಡು, ಜೀವ್ನಾನೇ ನಾಟ್ಕ್ ಸಾಮಿ ಸೇರಿ ಹಲವು ಸಿನಿಮಾ ಡಿಒಪಿ ಆಗಿ ಕೆಲಸ ಮಾಡಿ, ಇನ್ನೂ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ವಿಕಾಸ್ ವಸಿಷ್ಟ ಸಂಗೀತ, ಪವನ್ ರಾಮಿಶೆಟ್ಟಿ ಸಂಕಲನ, ಮದನ್ ಹರಿಣಿ ಚಿತ್ರದ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts