More

    ರೈತ ಸಂಪರ್ಕ ಕೇಂದ್ರ ಅನ್ನದಾತರ ಜೀವನಾಡಿ

    ಲೋಕಾಪುರ: ಸಾರ್ವಜನಿಕರ ದೂರಿನ ಹಿನ್ನೆಲೆ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ ದೀಢಿರ್ ಭೇಟಿ ನೀಡಿ ಪರಿಶೀಲಿಸಿದರು.

    ನಂತರ ಮಾತನಾಡಿದ ಅವರು, ಸರ್ಕಾರ ಕೃಷಿಕರಿಗೆ ಹೆಚ್ಚಿನ ಆದ್ಯತೆ ನೀಡಲು ಯೋಜನೆಗಳನ್ನು ರೂಪಿಸುತ್ತಿದೆ. ಆ ಯೋಜನೆಗಳನ್ನು ಯಶಸ್ವಿಗೊಳಿಸುವ ಹೊಣೆ ಅಧಿಕಾರಿ ವರ್ಗದ ಮೇಲಿದೆ. ಅವುಗಳು ಯಶಸ್ವಿಯಾದಾಗ ಮಾತ್ರ ಕೃಷಿಕರಿಗೆ ಸರ್ಕಾರದ ಮೇಲೆ ವಿಶ್ವಾಸ ಮೂಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಜಾಲಿಕಟ್ಟಿ ಗ್ರಾಮದ ರೈತ ಶಂಕರಗೌಡ ಪಾಟೀಲ ಜಿಪಂ ಅಧ್ಯಕ್ಷರಿಗೆ ಮಾಹಿತಿ ನೀಡಿ, ಇಲಾಖೆ ನೀಡುವ ಬೀಜದ ಪ್ರಮಾಣ ರೈತರಿಗೆ ಸಾಲದು. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಬೀಜ ನೀಡುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

    ಒಳ್ಳೆಯ ಕಂಪನಿಗಳ ರಸಗೊಬ್ಬರವನ್ನು ರೈತ ಸಂಪರ್ಕ ಕೇಂದ್ರದಲ್ಲಿ ಮಾರಾಟಕ್ಕೆ ಇಟ್ಟಿಲ್ಲ. ಸುಧಾರಿತ ಬೀಜಗಳನ್ನು ನೀಡುತ್ತಿಲ್ಲ. ಹೀಗಾದರೆ ರೈತ ಸಂಪರ್ಕದ ಪ್ರಯೋಜನ ಏನು ಎಂದು ಅಧ್ಯಕ್ಷೆ ಎದುರು ರೈತರು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ರೈತ ಸಂಪರ್ಕ ಕೇಂದ್ರಗಳು ರೈತರ ಜೀವನಾಡಿಯಾಗಿ ಹಾಗೂ ಸಂಪರ್ಕ ಸೇತುವೆಯಾಗಿ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿ ಹೇಳಿದರು.

    ಕೃಷಿ ಅಧಿಕಾರಿ ಲಕ್ಷ್ಮೀ ತೇಲಿ ತಮ್ಮ ಇಲಾಖೆ ಸಂಪೂರ್ಣ ಮಾಹಿತಿಯನ್ನು ಜಿಪಂ ಅಧ್ಯಕ್ಷರ ಮುಂದೆ ವಿವರಿಸಿದರು. ರೈತರಾದ ಮಹೇಶ ಪೂಜಾರಿ, ಶಂಕರಗೌಡ ಪಾಟೀಲ, ಈಶ್ವರ ಗಡ್ಡದವರ, ಹರೀಶ ಪೂಜಾರಿ, ಆನಂದ ಕರಜಗಾರ, ಮಾಯಪ್ಪ ಹುಚ್ಚಿ, ಮಲ್ಲಿಕಾರ್ಜುನ ಪಾಟೀಲ, ಮಲ್ಲನಗೌಡ ಪಾಟೀಲ, ಪಿಡಿಒ ಸುಭಾಷ್ ಗೋಲಶೆಟ್ಟಿ, ಕೃಷಿ ಕೇಂದ್ರದ ಸಿಬ್ಬಂದಿ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts