More

    ಪರಿಸರ, ವನ್ಯ ಜೀವಿಗಳ ರಕ್ಷಣೆ ಮಾಡಿ

    ಲೋಕಾಪುರ: ಪರಿಸರ ಮತ್ತು ವನ್ಯ ಜೀವಿಗಳ ವಿನಾಶದಿಂದ ಮಾನವನ ಬದುಕು ನಾಶವಾಗಲಿದೆ. ಅವುಗಳನ್ನು ಸಂರಕ್ಷಣೆ ಮಾಡುವಂತಹ ಮನೋಭಾವ ಎಲ್ಲರಲ್ಲೂ ಮೂಡಿದಾಗ ಪರಿಸರವನ್ನು ಉಳಿಸಿ, ಬೆಳೆಸಲು ಸಾಧ್ಯ ಎಂದು ಯುವ ಮುಖಂಡ ಕುಮಾರ ಸಿರಗುಂಪಿ ಹೇಳಿದರು.

    ಪ್ರಾದೇಶಿಕ ವಲಯ ಮುಧೋಳ ಹಾಗೂ ವೀರಸಾವರ್ಕರ್ ಗ್ರಾಮೀಣಾಭಿವೃದ್ಧಿ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸೇವಾ ಸಂಸ್ಥೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 66ನೇ ವನ್ಯಜೀವಿ ಸಪ್ತಾಹ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ, ಅರಣ್ಯ ಇಲಾಖೆ ಜತೆ ಸಾರ್ವಜನಿಕರು ಹಾಗೂ ಯುವಕರು ಕೈ ಜೋಡಿಸಿದಾಗ ಹೆಚ್ಚು ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಸಾಧ್ಯ ಎಂದರು.

    ಉಪಾಧ್ಯಕ್ಷ ಶಿವಾನಂದ ಉಪ್ಪಾರ, ಸೂರಜ್ ಮಡಿವಾಳರ, ಕೃಷ್ಣಾ ನಡಗಡ್ಡಿ, ಶಿವಾನಂದ ಔರಸಂಗ, ಸದಾಶಿವ ಬಳಗಾರ, ಸಂದೀಪ ಉಪ್ಪಾರ, ರಾಜು ಕರಾಳೆ, ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ರಕ್ಷಕರಾದ ಮಲ್ಲಿಕಾರ್ಜುನ ಬಂದ್ರೋಡ, ರಮೇಶ ಸಿಂಧೂರ, ಅರಣ್ಯ ವೀಕ್ಷಕರಾದ ಮಾಂತೇಶ ಉಪ್ಪಾರ, ಮುತ್ತಪ್ಪ ನಾಯ್ಕ, ಮಂಜು ಬಳಗಾರ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts