More

    ಮನರಂಜಿಸಿದ ಶ್ರೀಕೃಷ್ಣ ಪಾರಿಜಾತ

    ಲೋಕಾಪುರ: ದೆಹಲಿಯ ರವಿಂದ್ರ ಭವನದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಉತ್ಸವದಲ್ಲಿ ಲೋಕಾಪುರ ಗ್ರಾಮದ ಶ್ರೀ ಬಸವೇಶ್ವರ ಪಾರಿಜಾತ ಸಂಘದ ಕಲಾವಿದರು ಪ್ರದರ್ಶಿಸಿದ ಶ್ರೀಕೃಷ್ಣ ಪಾರಿಜಾತ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಯಿತು.

    ಪಾರವ್ವ ತೆಳಗಿನಮನಿ ಕೃಷ್ಣನಾಗಿ, ದುರ್ಗವ್ವ ಮುಧೋಳ ರುಕ್ಮೀಣಿಯಾಗಿ, ಯಲ್ಲವ್ವ ಮಾದರ ಸತ್ಯಭಾಮೆಯಾಗಿ, ಮಹಾದೇವ ಯರನಾಳ ಹಾಗೂ ಮಲ್ಲಪ್ಪ ದಡ್ಡೆನ್ನವರ ಭಾಗವತರಾಗಿ, ಅಶೋಕ ಬೆಳಂಕಿ ಪೇಟೆ ಮಾಸ್ತರಾಗಿ, ಮಹಾಂತೇಶ ಸುತಾರ ತಬಲಾ ವಾದಕರಾಗಿ ತಮ್ಮ ಕಲೆಯನ್ನು ಪ್ರದರ್ಶಿಸಿದರು. ವಿವಿಧ ರಾಜ್ಯಗಳಿಂದ ಆಗಮಿಸಿದ ವಿದ್ವಾಂಸರು, ಕಲಾವಿದರು ಹಾಗೂ ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

    ಪ್ರದರ್ಶನ ಮುಗಿದ ನಂತರ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ತಂಡದ ಎಲ್ಲ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು. ಅಕಾಡೆಮಿ ಸದಸ್ಯರಾದ ಡಾ.ಬಾಳಾಸಾಹೇಬ ಲೋಕಾಪುರ, ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಶಿವಾನಂದ ಶೆಲ್ಲಿಕೇರಿ, ಡಾ.ಸಿದ್ದಲಿಂಗಯ್ಯ, ಡಾ.ಸರಜು ಕಾಟಕರ, ಮೈಸೂರು ರಂಗಾಯಣ ನಿರ್ದೇಶಕ ಡಾ.ಕಾರೆಪ್ಪ, ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ. ತೇಜಶ್ವಿನಿ ಕಟ್ಟಿಮನಿ ಹಾಗೂ ಅಕಾಡೆಮಿ ಕಾರ್ಯದರ್ಶಿ, ವಿವಿಧ ಭಾಷೆಗಳ ಅಕಾಡೆಮಿ ಸದಸ್ಯರು, ಕಲಾವಿದರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts