More

    ಸಾಲ ಸೌಲಭ್ಯ ಸದ್ಬಳಕೆಯಾಗಲಿ

    ಲೋಕಾಪುರ: ಸಹಕಾರಿ ಸಂಘ, ಬ್ಯಾಂಕ್‌ಗಳು ರೈತರ ಮತ್ತು ಜನಸಾಮಾನ್ಯರ ಆರ್ಥಿಕ ಉನ್ನತಿಗೆ ಪೂರಕವಾಗಿದ್ದು, ಅಗತ್ಯ ಸೇವೆ ವಿಸ್ತರಣೆಗೆ ಸಹಕಾರಿ ಬ್ಯಾಂಕ್‌ಗಳು ಮುಂದಾಗಲಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ಪಟ್ಟಣದಲ್ಲಿ ಜನಶಕ್ತಿ ಪರಿವರ್ತನಾ ಪತ್ತಿನ ಸೌಹಾರ್ದ ಸಹಕಾರಿ ನಿ. ಸಂಘವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಸಂಘ, ಬ್ಯಾಂಕ್‌ಗಳಲ್ಲಿನ ಸಾಲ ಸೌಲಭ್ಯಗಳ ಸದುಪಯೋಗವಾಗಬೇಕು ಎಂದರು.

    ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಸಹಕಾರಿ ಸಂಘಗಳು ಎಲ್ಲರಿಗೂ ಸಾಲ ಸೌಲಭ್ಯ ವಿಸ್ತರಣೆ ಮಾಡಬೇಕಾದರೆ ಠೇವಣಿದಾರರ ಸಂಖ್ಯೆ ಹೆಚ್ಚಾಗಬೇಕು. ಆಗ ಮಾತ್ರ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎಂದರು.

    ಜಿಲ್ಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಾಶಿನಾಥ ಹುಡೇದ ಮಾತನಾಡಿ, ಪಟ್ಟಣಗಳಲ್ಲಿರುವ ಸೌಹಾರ್ದ ಸಹಕಾರಿ ಬ್ಯಾಂಕ್ ಹಾಗೂ ಸಂಘಗಳು ಬಲವರ್ಧನೆಗೊಂಡರೆ ದೇಶ ಆರ್ಥಿಕ ಪ್ರಗತಿ ಹೊಂದಲು ಸಾಧ್ಯ ಎಂದರು.

    ಜ್ಞಾನೇಶ್ವರ ಮಠದ ಬ್ರಹ್ಮಾನಂದ ಸ್ವಾಮೀಜಿ, ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರ್.ಎಸ್. ತಳೇವಾಡ, ಲೋಕಣ್ಣ ಕತ್ತಿ, ಅರುಣ ಕಾರಜೋಳ, ಯಮನಪ್ಪ ಹೊರಟ್ಟಿ, ಎಂ.ಎಂ. ವಿರಕ್ತಮಠ, ಶಿವನಗೌಡ ಪಾಟೀಲ, ಭೀಮಸೆಪ್ಪ ಹಲಕಿ, ಎಂ. ಎನ್.ಮಣಿ, ಎಸ್.ಆರ್. ಬಾಡಗಿ, ಸಚಿನ್ ಚಿನಗುಂಡಿ, ಗೋವಿಂದ ಕೌಲಗಿ, ಮಾರುತಿ ರಂಗನ್ನವರ, ಸಂಸ್ಥೆ ಅಧ್ಯಕ್ಷ ಬಿ. ಎಲ್. ಬಬಲಾದಿ, ನಿರ್ದೇಶಕರಾದ ದಾಮೋದರ ಕಂಕಣವಾಡಿ, ಶ್ರೀನಿವಾಸ ಬಬಲಾದಿ, ರಫೀಕ್ ದಪ್ಪೇದಾರ, ಹನುಮಂತರಾವ್ ದಿವಾನ್, ಪ್ರಲ್ಹಾದಾಚಾರ್ಯ ಜೋಶಿ, ರಾಜೇಶ ಐತಾಳ, ಕಾರ್ಯದರ್ಶಿ ಮಹಾಂತೇಶ ಕುಳ್ಳೋಳ್ಳಿ, ಕೆ. ಪಿ. ಯಾದವಾಡ, ಕೃಷ್ಣಾ ಭಜಂತ್ರಿ ಇದ್ದರು.



    ಸಾಲ ಸೌಲಭ್ಯ ಸದ್ಬಳಕೆಯಾಗಲಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts