More

    ತೆಲಂಗಾಣ ಮಾಜಿ ರಾಜ್ಯಪಾಲ ತಮಿಳ್​ ಇಸೈ ಸೌಂದರರಾಜನ್ ಬಿಜೆಪಿ ಸೇರ್ಪಡೆ!

    ಚೆನ್ನೈ: 18ನೇ ಲೋಕಸಭಾ ಚುನಾವಣೆ ಮತದಾನ ಶುರುವಾಗಲು 1 ತಿಂಗಳು ಬಾಕಿ ಇರುವಾಗ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ತೆಲಂಗಾಣ ಮಾಜಿ ರಾಜ್ಯಪಾಲರಾದ ತಮಿಳ್​ ಇಸೈ ಸೌಂದರರಾಜನ್ ಅವರು ಬುಧವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
    ತಮಿಳುಸೈ ಸೌಂದರರಾಜನ್‌ ಅವರು ಪ್ರಸ್ತುತ ಆಡಳಿತಾರೂಢ ಡಿಎಂಕೆಯ ಕನಿಮೋಳಿ ಪ್ರತಿನಿಧಿಸುತ್ತಿರುವ ತೂತುಕುಡಿ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಐಪಿಎಲ್​ ಆರಂಭಕ್ಕೂ ಮುನ್ನವೇ ಮನೀಶ್ ಪಾಂಡೆ ವಿರುದ್ಧ ರಸೆಲ್‍ ಶಾಕಿಂಗ್​ ಕಾಮೆಂಟ್​: ಕಾರಣ ಹೀಗಿದೆ!

    ಬಿಜೆಪಿಗೆ ಮರು ಸೇರ್ಪಡೆಯಾದ ನಂತರ ಮಾತನಾಡಿದ ತಮಿಳಿಸೈ ಸೌಂದರರಾಜನ್ ಅವರು, ನಾನು ಚುನಾವಣೆಗೆ ಸ್ಪರ್ಧಿಸಲು ಬಯಸುತ್ತೇನೆ ಮತ್ತು ನಾನು ನನ್ನ ಪಕ್ಷಕ್ಕೂ ನನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದೇನೆ. ನನ್ನ ಬಳಿ ಇರುವ ಸದಸ್ಯತ್ವ ಕಾರ್ಡ್ ಅನ್ನು ಮರಳಿ ಪಡೆಯಲು ನನಗೆ ಸಂತೋಷವಾಗಿದೆ. ಇದು ಅತ್ಯಂತ ಸಂತೋಷದ ದಿನ. ಕಠಿಣ ನಿರ್ಧಾರ ಮತ್ತು ಸಂತೋಷದ ನಿರ್ಧಾರ ಕೂಡ. ರಾಜ್ಯಪಾಲನಾಗಿ ನನಗೆ ಹಲವು ಸೌಲಭ್ಯಗಳಿದ್ದವು ಆದರೆ ನಾನು ಅದನ್ನು ಬಿಟ್ಟು ಬಂದಿದ್ದೇನೆ. ತಮಿಳುನಾಡಿನಲ್ಲಿ ಕಮಲ ಅರಳುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕಾರಣಕ್ಕೆ ಅವರು ರಾಜ್ಯಪಾಲ ಹುದ್ದೆಯನ್ನು ತೊರೆದಿದ್ದರು. ತೆಲಂಗಾಣ ಮತ್ತು ಪುದುಚೇರಿ ರಾಜ್ಯಪಾಲೆಯಾಗಿ ಕಾರ್ಯನಿರ್ವಹಿಸುತ್ತಿದ್ದ ತಮಿಳಿಸೈ ಸೌಂದರರಾಜನ್ ಸೋಮವಾರ ಬೆಳಿಗ್ಗೆ ಏಕಾಏಕಿ ಎರಡೂ ರಾಜ್ಯಗಳ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದರು.

    ತೆಲಂಗಾಣ ರಾಜ್ಯಪಾಲರಾಗಿ ನೇಮಕವಾಗುವ ಮೊದಲು ತಮಿಳುಸೈ ಸೌಂದರರಾಜನ್ ಅವರು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆಯಾಗಿದ್ದರು. ಇದೀಗ ಮತ್ತೆ ಅವರು ಸಕ್ರಿಯ ರಾಜಕಾರಣಕ್ಕೆ ಮರಳಿದ್ದಾರೆ. 62 ವರ್ಷದ ತಮಿಳುಸೈ ಸೌಂದರರಾಜನ್‌ ಅವರನ್ನು 2019ರ ನವೆಂಬರ್‌ನಲ್ಲಿ ತೆಲಂಗಾಣದ ಎರಡನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. ನಂತರ ಫೆಬ್ರವರಿ 2021ರಲ್ಲಿ ಅವರಿಗೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿತ್ತು.

    ತಮಿಳುಸೈ ಸೌಂದರರಾಜನ್‌ ಅವರು ಪ್ರಸ್ತುತ ಆಡಳಿತಾರೂಢ ಡಿಎಂಕೆಯ ಕನಿಮೋಳಿ ಪ್ರತಿನಿಧಿಸುತ್ತಿರುವ ತೂತುಕುಡಿ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂದು ಹೇಳಲಾಗುತ್ತಿದೆ. ಇದಲ್ಲದೆ ತಮಿಳುನಾಡಿನ ಇನ್ನೂ ಎರಡು ಕ್ಷೇತ್ರಗಳಲ್ಲಿ ಅವರು ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇವುಗಳಲ್ಲಿ ಒಂದು ಕ್ಷೇತ್ರದಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆ ಇದೆ.

    ತಮಿಳುಸಾಯಿ ಸೌಂದರರಾಜನ್ 2019ರ ಚುನಾವಣೆಯಲ್ಲಿಯೂ ತೂತುಕುಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಡಿಎಂಕೆಯ ಕನಿಮೋಳಿ ಕರುಣಾನಿಧಿ ವಿರುದ್ಧ ಸ್ಪರ್ಧಿಸಿದ್ದ ಅವರು ಈ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದ್ದರು. ಕನಿಮೋಳಿ 5,63,143 ಮತಗಳನ್ನು ಗಳಿಸಿದರೆ, ಸೌಂದರರಾಜನ್‌ ಕೇವಲ 2,15,934 ಮತಗಳನ್ನು ಗಳಿಸಿ, 3,47,209 ಮತಗಳ ಭಾರೀ ಅಂತರದಿಂದ ಸೋಲೊಪ್ಪಿಕೊಂಡಿದ್ದರು.

    ಐಪಿಎಲ್​ ಆರಂಭಕ್ಕೂ ಮುನ್ನವೇ ಮನೀಶ್ ಪಾಂಡೆ ವಿರುದ್ಧ ರಸೆಲ್‍ ಶಾಕಿಂಗ್​ ಕಾಮೆಂಟ್​: ಕಾರಣ ಹೀಗಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts