More

    ಲೋಕಸಭೆ ಚುನಾವಣೆ-2024, ಅಂತಿಮ ದಿನ 10 ನಾಮಪತ್ರ ಸಲ್ಲಿಕೆ

    ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಲೋಕಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಅಂತಿಮ ದಿನವಾದ ಶುಕ್ರವಾರದಂದು ಅಭ್ಯರ್ಥಿಗಳ ಭರಾಟೆ ಜೋರಾಗಿತ್ತು.

    ಆರನೇಯ ದಿನವಾದ ಶುಕ್ರವಾರದಂದು 9 ಅಭ್ಯರ್ಥಿಗಳಿಂದ ಒಟ್ಟು 10 ನಾಮಪತ್ರಗಳು ಸಲ್ಲಿಕೆಯಾದವು. ಆ ಮೂಲಕ ಏ.12 ರಿಂದ 19 ರವರೆಗೆ 21 ಅಭ್ಯರ್ಥಿಗಳಿಂದ 35 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರಗಳ ಪರಿಶೀಲನೆ ಏ. 20 ರಂದು ನಡೆಯಲಿದ್ದು, ಏ. 22 ರಂದು ನಾಮಪತ್ರ ಹಿಂಪಡೆದುಕೊಳ್ಳಲು ಕೊನೆಯ ದಿನಾಂಕ. ಹೀಗಾಗಿ ಅಭ್ಯರ್ಥಿಗಳನ್ನು ಹಿಂದೆ ಸರಿಸುವ ಕಸರತ್ತು ನಡೆಯಲಿದೆ. ಆ ಬಳಿಕ ಅಂತಿಮ ಅಖಾಡ ಸಿದ್ಧಗೊಳ್ಳುವ ಮೂಲಕ ರಣಕಣ ಮತ್ತಷ್ಟು ರಂಗೇರಲಿದೆ.

    ಈಗಾಗಲೇ ಸಾಂಕೇತಿಕವಾಗಿ ಮತ್ತು ಅಧಿಕೃತವಾಗಿಯೂ ನಾಮಪತ್ರ ಸಲ್ಲಿಸಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಶುಕ್ರವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಈವರೆಗೆ ಒಟ್ಟು ನಾಲ್ಕು ಸೆಟ್ ನಾಮಪತ್ರ ಸಲ್ಲಿಸಿದರು.

    ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಅರುಣ ಶಹಾಪುರ, ರಾಜು ಮಗಿಮಠ, ಸಂಗಮೇಶ ಹೌದೆ, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಪ್ನಾ ಕಣಮುಚನಾಳ, ಮಲ್ಲಮ್ಮ ಜೋಗೂರು, ಮಧು ಪಾಟೀಲ್, ಪ್ರಭಾವತಿ ಪಾಟೀಲ್, ಪದ್ಮಾವತಿ ಗುಡಿ ಮತ್ತಿತರರೊಂದಿಗೆ ನಾಮಪತ್ರ ಸಲ್ಲಿಸಿದರು.

    ಎಸ್‌ಯುಸಿಐ ಪಕ್ಷದ ಅಭ್ಯರ್ಥಿಯಾಗಿ ನಾಗಜ್ಯೋತಿ ಬಿ.ಎನ್, ಭಾರತೀಯ ಜವಾನ್ ಕಿಸಾನ್ ಪಕ್ಷದ ಅಭ್ಯರ್ಥಿಯಾಗಿ ಕುಲಪ್ಪಾ ಚವ್ಹಾಣ, ಭಾರತೀಯ ಜನ ಸಾಮ್ರಾಟ್ ಪಕ್ಷದ ಅಭ್ಯರ್ಥಿಯಾಗಿ ತಾರಾಬಾಯಿ ಭೋವಿ, ಪಕ್ಷೇತರ ಅಭ್ಯರ್ಥಿಯಾಗಿ ಸೋಮಶೇಖರ ಭಾವಿಕಟ್ಟಿ, ನ್ಯಾಷನಲ್ ಲೋಕತಂತ್ರ ಪಕ್ಷದ ಅಭ್ಯರ್ಥಿಯಾಗಿ ರಾಜು ಪವಾರ, ನಕ್ಕಿ ಭಾರತೀಯ ಏಕತಾ ಪಕ್ಷದ ಅಭ್ಯರ್ಥಿಯಾಗಿ ರಾಮಾಜಿ ಯಮನಪ್ಪ ಹರಿಜನ ಉರ್ಫ್ ಬುದ್ಧಪ್ರಿಯ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಕಲ್ಲಪ್ಪ ತೊರವಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಚಂದು ಲಮಾಣಿ ತಲಾ ಒಂದೊಂದು ನಾಮಪತ್ರ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts