More

    ಲೋಕಸಭಾ ಸಮರ 2024: ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿ BJP, ಹೊಸ ಪ್ರಯೋಗಕ್ಕೆ ಮುಂದಾಗುತ್ತಾ ಕಮಲ ಪಡೆ?

    ನವದೆಹಲಿ: ಇನ್ನೇನೂ ಲೋಕಸಮರಕ್ಕೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಎಲ್ಲ ಪಕ್ಷಗಳಲ್ಲೂ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಆದರೆ ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಮಾತ್ರ ಇನ್ನೂ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.

    ಒಂದು ಮೂಲಗಳ ಪ್ರಕಾರ 10 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಕಾರಣ ಕೆಲವರು ವಯೋಸಹಜದಿಂದ ನಾವು ಸ್ಫರ್ಧೆ ಮಾಡಲ್ಲ ಎಂದು ಹೈಕಮಾಂಡ್​ಗೆ ನೇರವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದು ಕಾರಣ ಸ್ಥಳಿಯ ಕಾರ್ಯಕರ್ತರ ಹಾಗೂ ಮತದಾರರ ವಿರೋಧದ ಅಲೆ.

    ಮೋದಿ ಅಲೆ, ರಾಮಮಂದಿರ ನಿರ್ಮಾಣದ ವಿಷಯ ಬಿಜೆಪಿಗೆ ಪ್ಲಸ್ ಪಾಯಿಂಟ್ ಆದರೆ, ಗೆಲ್ಲುವ ಸಮರ್ಥ ಅಭ್ಯರ್ಥಿಗಳು ಇಲ್ಲದಿರುವುದು ಬಿಜೆಪಿಗೆ ಮೈನಸ್ ಆಗಲಿದೆ. ಒಂದು ವೇಳೆ ಗೆಲ್ಲುವ ಅಭ್ಯರ್ಥಿಗಳು ಸಿಕ್ಕರೆ ಕರ್ನಾಟಕದಲ್ಲಿ ಸುಮಾರು 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಗೆಲ್ಲುವ ಚಾನ್ಸ್ ಇದೆ.

    ಹೊಸ ಪ್ರಯೋಗಕ್ಕೆ ಮುಂದಾಗುತ್ತಾ ಬಿಜೆಪಿ..!
    ಒಂದು ವೇಳೆ ಸಮರ್ಥ ಅಭ್ಯರ್ಥಿಗಳು ಸಿಗದೆ ಇದ್ದರೆ ಹಾಲಿ ಕೇಂದ್ರ ಸಚಿವರು ಹಾಗೂ ಕಣಕ್ಕಿಳಿಸುವ ಸಾಧ್ಯತೆ ಇದೆ. ನಿರ್ಮಾಲಾ ಸೀತಾರಾಮನ್ ಹಾಗೂ ಕೆ. ಜೈಶಂಕರ್ ಸೇರಿದಂತೆ ಹಿರಿಯ ನಾಯಕರು ಕಣಕ್ಕಿಳಿಯಲಿದ್ದಾರೆ.

    * ನಿರ್ಮಾಲಾ ಸೀತಾರಾಮನ್-ತಮಿಳುನಾಡು ತಿರುಚಿರಾಪಳ್ಳಿ
    * ಕೆ.ಜೈಶಂಕರ್- ದಕ್ಷಿಣ ಕನ್ನಡ
    * ರಾಜೀವ್ ಚಂದ್ರಶೇಖರ್- ತಿರುವನಂತಪುರಂ

    ಅಭ್ಯರ್ಥಿಗಳು ಬದಲಾಗುವ ಕ್ಷೇತ್ರಗಳು‌
    1. ಚಾಮರಾಜನಗರ -ಶ್ರೀನಿವಾಸ್ ಪ್ರಸಾದ್
    2. ಚಿತ್ರದುರ್ಗ-ಎ.ನಾರಯಣಸ್ವಾಮಿ
    3. ಬೆಂಗಳೂರು ಉತ್ತರ-ಸದಾನಂದಗೌಡ
    4. ದಕ್ಷಿಣ ಕನ್ನಡ-ನಳೀನ್ ಕುಮಾರ್ ಕಟೀಲ್
    5.ಉಡುಪಿ-ಚಿಕ್ಕಮಗಳೂರು-ಶೋಭಾ,ಸಿ.ಟಿ.ರವಿ
    6. ದಾವಣಗೆರೆ-ಜಿ.ಎಂ.ಸಿದ್ದೇಶ್ವರ
    7.ಬೆಳಗಾವಿ-ಮಂಗಳ ಸುರೇಶ್ ಅಂಗಡಿ
    8. ವಿಜಯಪುರ-ರಮೇಶ್ ಜಿಗಜಿಣಗಿ
    9. ಚಿಕ್ಕಬಳ್ಳಾಪುರ-ಕೆ.ಎನ್.ಬಚ್ಚೇಗೌಡ
    10. ಹಾವೇರಿ-ಶಿವಕುಮಾರ್ ಉದಾಸಿ
    11. ಬಾಗಲಕೋಟೆ-ಪಿ.ಸಿ.ಗದ್ದಿಗೌಡರ್
    12. ಉತ್ತರ ಕನ್ನಡ-ಅನಂತ ಕುಮಾರ್ ಹೆಗಡೆ

    ಅಭ್ಯರ್ಥಿಗಳ ಕೊರತೆ ಇರುವ ಕ್ಷೇತ್ರಗಳಲ್ಲಿ ಈಗಾಗಲೇ ಹಲವು ಸುತ್ತಿನ ಸಮೀಕ್ಷೆಗಳನ್ನು ನಡೆಸಿದ್ದು, ಯಾರು ಗೆಲ್ಲುವ ಸೂಕ್ತ ಅಭ್ಯರ್ಥಿ ಅನ್ನುವ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಇದರ ಜೊತೆಗೆ ರಾಜ್ಯ ಬಿಜೆಪಿ ಘಟಕವೂ ಕೂಡ ಅಭ್ಯರ್ಥಿಗಳ ಕೊರತೆ ಇರುವ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸುತ್ತಿದ್ದು, ಕೆಲವು ಹೆಸರುಗಳನ್ನು ಸೂಚಿಸಲಿದೆ. ಅಂತಿಮವಾಗಿ ವರಿಷ್ಠರ ತಿರ್ಮಾನವೇ ಅಂತಿಮವಾಗಲಿದೆ.

    ಕೇಂದ್ರ ಸಚಿವರಿಗೆ ಆಡಳಿತ ವಿರೋಧಿ ಅಲೆ?
    ಕೇಂದ್ರ ಸಚಿವರಾದ ಭಗವಂತ ಖೂಬಾ, ಶೋಭಾ ಕರಂದ್ಲಾಜೆ ಹಾಗೂ ಪಕ್ಷದ ಹಿಂದಿನ ಅಧ್ಯಕ್ಷ ನಳಿನ್ ಕುಮಾರ್ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದಾರೆ ಜೊತೆಗೆ ಕ್ಷೇತ್ರದ ಕಾರ್ಯಕರ್ತರೂ ಕೂಡ ಬೇಸರಗೊಂಡಿದ್ದಾರೆ. ಇದರ ಜೊತೆಗೆ ಸಂಸದ ನಾರಾಯಣಸ್ವಾಮಿಯೂ ಕೂಡ ನಾನು ಈ ಬಾರಿ ಸ್ಫರ್ಧೆ ಮಾಡಲ್ಲವೆನ್ನುವ ರೀತಿಯಲ್ಲಿ ಮಾತನಾಡಿದ್ದಾರೆ.

    ತುಮಕೂರಿನಿಂದ ಸ್ಫರ್ಧೆ ಮಾಡ್ತಾರಾ ಶೋಭಾ!?
    ಬಿಜೆಪಿಯ ಹಿರಿಯ ನಾಯಕಿ ಶೋಭಾ ಕರಂದ್ಲಾಜೆಗೂ ಕೂಡ ಸ್ವಲ್ಪ ಆಡಳಿತ ವಿರೋಧಿ ಹಾಗೂ ಕಾರ್ಯಕರ್ತರ ಅಸಮಾಧಾನ ಇದೆ. ಉಡುಪಿ-ಚಿಕ್ಕಮಂಗಳೂರು ಕ್ಷೇತ್ರಕ್ಕೆ ಸಿ.ಟಿ.ರವಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಶೋಭಾ ಕರಂದ್ಲಾಜೆಯವರನ್ನು ಕ್ಷೇತ್ರ ಬದಲಾವಣೆ ಮಾಡಿ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಸಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಾ ಇತ್ತು. ಆದರೆ, ಸ್ವತಃ ಶೋಭಾ ಕರಂದ್ಲಾಜೆ ಅವರೆ ನಾನು ಕ್ಷೇತ್ರ ಬದಲಾವಣೆ ಮಾಡಲ್ಲ ಉಡುಪಿ-ಚಿಕ್ಕಮಂಗಳೂರು ಕ್ಷೇತ್ರದಿಂದ ಸ್ಫರ್ಧೆ ಮಾಡ್ತೇನೆ ಅಂತಾ ಹೇಳಿಕೆ ನೀಡಿದ್ದಾರೆ.

    ಫೆ.19ಕ್ಕೆ ರಿಲೀಸ್ ಆಗುತ್ತಾ ಅಭ್ಯರ್ಥಿಗಳ ಪಟ್ಟಿ..!
    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆಗಳಿಗೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನ ರಿಲೀಸ್ ಮಾಡಿದ್ದು ಕೆಲ ಅಭ್ಯರ್ಥಿಗಳ ಹಿನ್ನೆಡೆಗೆ ಕಾರಣವಾಗಿತ್ತು. ಆದ್ರೆ ಈ ಬಾರಿ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದಲ್ಲಿರುವ ಬಿಜೆಪಿ ಫೆ.19ರ ನಂತರ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಲಾಗುತ್ತೇ ಅಂತಾ ಹೇಳಲಾಗ್ತಿದೆ.

    ನಳೀನ್ ಕುಮಾರ್ ಕಟೀಲ್​ಗೆ ಮತ್ತೆ ಮಣೆ ಹಾಕುತ್ತಾ ಬಿಜೆಪಿ?
    ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಪಕ್ಷ ಇಕ್ಕಟ್ಟಿಗೆ ಸಿಲುಕಿದೆ.ಕಾರ್ಯಕರ್ತರ ಅಸಮಾಧಾನದ ಅಲೆಯಲ್ಲಿ ಸಿಲಿಕಿರುವ ಬಿಜೆಪಿ ಕಾರ್ಯಕರ್ತರನ್ನ ತಣಿಸಿ ಲೋಕಸಭೆ ಚುನಾವಣೆಗೆ ತಯಾರಾಗಬೇಕಿದೆ. 1991ರವರೆಗೆ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದ್ದ ಕ್ಷೇತ್ರ ನಂತರ ಬಿಜೆಪಿಯ ಪಾಲಾಯಿತು. 2004ರಲ್ಲಿ ತೀವ್ರ ವಿರೋಧದ ನಡುವೆಯೂ ಡಿ.ವಿ.ಸದಾನಂದಗೌಡರನ್ನು ಕಣಕ್ಕಿಳಿಸಿ ಗೆಲುವಿನ ಓಟವನ್ನು ಮುಂದುವರೆಸಿತ್ತು. ನಂತರ 2009ರ ಲೋಕಸಭಾ ಚುನಾವಣೆಯಲ್ಲಿ ಕಾರ್ಯತರಲ್ಲಿ ಸದಾನಂದಗೌಡರ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ಆದ್ರೆ ಆಗ ನಳೀನ್ ಕುಮಾರ್ ಅವರನ್ನು ಕಣಕ್ಕಿಳಿಸಿತ್ತು. ಈ ಸಲವೂ ಕೂಡ ಅದೇ ತಂತ್ರವನ್ನು ಹೂಡಬಹುದು ಅನ್ನೋ ಮಾತಗಳು ಕೇಳಿ ಬರ್ತಾ ಇವೆ.

    ಲೋಕಸಭಾ ಚುನಾವಣೆ 2024: ಬೊಮ್ಮಾಯಿ ಸ್ಪರ್ಧೆ ಫಿಕ್ಸಾ? ಯಾರಿಗೆ ‘ಕೈ’ ಟಿಕೆಟ್​? ಯಾರೆಲ್ಲ ಆಕಾಂಕ್ಷಿಗಳಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts