More

    ಲೋಕಸಭೆ ಚುನಾವಣೆ ಟಿಕೆಟ್​​ಗಾಗಿ ರಾತ್ರೋರಾತ್ರಿ ಹುಡುಗಿ ನೋಡಿ ಮದುವೆಯಾದ ಗ್ಯಾಂಗ್​​ಸ್ಟರ್

    ಬಿಹಾರ: ಲೋಕಸಭೆ ಚುನಾವಣೆಗೆ ಟಿಕೆಟ್​ ಆಕಾಂಕ್ಷಿಯಾಗಿದ್ದ ಕಿಮಿನಲ್​​ ಹಿನ್ನೆಲೆ ಇರುವ ಕುಖ್ಯಾತ ರೌಡಿಯೊಬ್ಬ ಚುನಾವಣೆಗೆ ನಿಲ್ಲುವ ಉದ್ದೇಶದಿಂದ ರಾತ್ರೋರಾತ್ರಿ ಮದುವೆ ಆಗಿದ್ದಾನೆ. ಮದುವೆಗೂ, ಚುನಾವಣೆಗೂ ಏನು ಸಂಬಂಧ ಎಂದು ನಿಮಗೆ ಪ್ರಶ್ನೆ ಮೂಡುತ್ತಿರಬಹುದು.. ಆದರೆ ಈ ಕುರಿತಾದ ಇಂಟ್ರಸ್ಟಿಂಗ್​ ಕಹಾನಿ ಇಲ್ಲಿದೆ…

    ಅಶೋಕ್ ಮಹ್ತೋ ಬಿಹಾರದ ನವಾಡ ಪ್ರದೇಶದಲ್ಲಿ ದೊಡ್ಡ ಗ್ಯಾಂಗ್​ಸ್ಟರ್​. ನಾವಡ ಜೈಲ್ ಬ್ರೇಕ್ ಘಟನೆಯಲ್ಲೂ ಭಾಗಿಯಾಗಿದ್ದ. ಕೆಲವು ಕ್ರಿಮಿನಲ್​ ಹಿನ್ನೆಲೆ ಹೊಂದಿರುವ ಈತ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸಬೇಕು ಎಂದುಕೊಂಡಿದ್ದಾನೆ. ಈ ಕುರಿತಾಗಿ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನು ಈ ಹಿಂದೆ ಭೇಟಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

    2001ರಲ್ಲಿ ನವಾಡ ಜೈಲಿನಿಂದ ತಪ್ಪಿಸಿಕೊಂಡ ಪ್ರಕರಣದಲ್ಲಿ 17 ವರ್ಷ ಸೆರೆಮನೆವಾಸಕ್ಕೆ ಗುರಿಯಾದ ಅಶೋಕ್ ಮಹ್ತೋ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಒಳಗಾದವರಿಗೆ ಜೈಲಿನಿಂದ ಬಿಡುಗಡೆಯಾಗಿ ಆರು ವರ್ಷ ಕಾಲ ಚುನಾವಣೆಗೆ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಹೀಗಾಗಿ ನೀನು ಮದುವೆ ಆಗು, ಪತ್ನಿಯನ್ನೇ ಚುನಾವಣೆಯಲ್ಲಿ ಕಣಕ್ಕಿಳಿಸುವಂತೆ ಆರ್‌ಜೆಡಿ ಹಿರಿಯ ನಾಯಕರೊಬ್ಬರು ಸಲಹೆ ನೀಡಿದ್ದಾರೆ. ಈ ಗ್ಯಾಂಗ್​ಸ್ಟರ್​​ ಮಾಸ್ಟರ್​ ಪ್ಲ್ಯಾನ್​​ ಮಾಡಿದ್ದಾನೆ.

    ಅಶೋಕ್ ಮಹ್ತೋ ಬಿಹಾರದ ಮುಂಗೇರ್ ಕ್ಷೇತ್ರದಿಂದ ಆರ್‌ಜೆಡಿ ಟಿಕೆಟ್‌ನಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ಆದರೆ, ಕ್ರಿಮಿನಲ್ ಹಿಸ್ಟರಿ ಇರುವ ಕಾರಣ ಟಿಕೆಟ್ ಸಿಗದಿದ್ದರೆ ಪತ್ನಿ ಮೂಲಕವಾಗಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾನೆ ಎನ್ನಲಾಗಿದೆ.

    ಗ್ಯಾಂಗಸ್ಟರ್​ ಅಶೋಕ್ ಮಹ್ತೋ  62 ನೇ ವಯಸ್ಸಿನಲ್ಲಿ 46 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾನೆ. ಕೆಲವೇ ಮಂದಿ ಅತಿಥಿಗಳು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮತ್ತೋ ವಿವಾಹ ಸಮಾರಂಭ ನೆರವೇರಿದೆ. ಅಶೋಕ್ ಮಹತೋ ಮದುವೆಯಾದ ಹುಡುಗಿಯ ಹೆಸರು ಕುಮಾರಿ ಅನಿತಾ. ಆಕೆಗೆ 46 ವರ್ಷ ಮತ್ತು ದೆಹಲಿಯ ಆರ್‌ಕೆ ಪುರಂ ನಿವಾಸಿ. ಪಾಟ್ನಾ ಜಿಲ್ಲೆಯ ಸೇಲಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕರೌಟದಲ್ಲಿರುವ ಮಾ ಜಗದಂಬಾ ಸ್ಥಾನ ದೇವಸ್ಥಾನದಲ್ಲಿ ಮಂಗಳವಾರ ವಿವಾಹವಾದರು.

    ವಿವಾಹದ ನಂತರ, ಅಶೋಕ್ ಮಹ್ತೋ ಪತ್ನಿ ಅನಿತಾ ಜತೆ ಮಾಜಿ ಸಿಎಂ ರಾಬಿದೇವಿಯವರ ನಿವಾಸಕ್ಕೆ ತೆರಳಿ ಆರ್ ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಅವರ ಆಶೀರ್ವಾದ ಪಡೆದರು. ಬಿಹಾರದ ಮುಂಗೇರ್ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣದಲ್ಲಿ ಪತ್ನಿಯನ್ನು ಕಣಕ್ಕಿಳಿಸುವ ಮೂಲಕ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಅವರು ವಿವಾಹವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪತ್ನಿಯನ್ನು ಚುನಾವಣಾ ಕಣಕ್ಕೆ ಇಳಿಸುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಇನ್ನೂ ಯಾವುದೂ ನಿರ್ಧಾರವಾಗಿಲ್ಲ ಎಂದ ಮತ್ತೋ, ಪತ್ನಿಗೆ ಟಿಕೆಟ್ ನೀಡುವ ಬಗ್ಗೆ ಲಾಲೂ ಯಾವುದೇ ಖಚಿತ ಭರವಸೆ ನೀಡಿಲ್ಲ.

    ಕಳೆದ ವರ್ಷ ಜೈಲಿನಿಂದ ಬಿಡುಗಡೆಯಾಗಿದ್ದ ಈತನ ವಿರುದ್ಧ ಪ್ರಸ್ತುತ ನ್ಯಾಯಾಲಯಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ನಡೆಯುತ್ತಿವೆ ಎನ್ನಲಾಗಿದೆ.

    ————–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts