More

    ಮೊದಲ ಬಾರಿ ಟೈಂ ಲೂಪ್ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ …

    ಬೆಂಗಳೂರು: ಟೈಂ ಟ್ರಾವಲ್​ ಅಥವಾ ಟೈಂ ಲೂಪ್​ ಕುರಿತಾದ ಚಿತ್ರಗಳು ಭಾರತೀಯ ಚಿತ್ರರಂಗದಲ್ಲೇ ಈಗೀಗ ಟ್ರೆಂಡ್​ ಆಗುತ್ತಿದೆ. ಇತ್ತೀಚೆಗೆ ಇಂಥದ್ದೇ ಒಂದು ಕಾನ್ಸೆಪ್ಟ್​ ಇರುವ ‘ಬನಾರಸ್​’ ಚಿತ್ರ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ಈಗ ಅಂಥದ್ದೇ ಶೈಲಿಯ ಇನ್ನೊಂದು ಚಿತ್ರ ಕನ್ನಡದಲ್ಲಿ ನಿರ್ಮಾಣವಾಗುವುದಕ್ಕೆ ಸಜ್ಜಾಗಿದೆ.

    ಈ ಹಿಂದೆ ‘ಮಮ್ಮಿ’, ‘ದೇವಕಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಲೋಹಿತ್​, ಈಗ ಪ್ರಜ್ವಲ್​ ದೇವರಾಜ್​ ಜತೆಗೆ ಹೊಸದೊಂದು ಚಿತ್ರ ಶುರು ಮಾಡಿದ್ದಾರೆ. ವಿಶೇಷವೆಂದರೆ, ಪ್ರಜ್ವಲ್​ ಅಭಿನಯದಲ್ಲಿ ಲೋಹಿತ್​ ಸದ್ಯ ‘ಮಾಫಿಯಾ’ ಎಂಬ ಚಿತ್ರ ಮಾಡುತ್ತಿದ್ದಾರೆ. ಅದು ಸಂಪೂರ್ಣವಾಗಿ, ಬಿಡುಗಡೆಯಾಗುವ ಮೊದಲೇ ಅವರ ಜತೆಗೆ ಇನ್ನೊಂದು ಚಿತ್ರ ಘೋಷಿಸಿದ್ದಾರೆ.

    ಇದನ್ನೂ ಓದಿ: ಕೆಲ ನಟರು ನನ್ನೊಂದಿಗೆ ನಟಿಸಲು ಭಯಪಡುತ್ತಾರೆ! ಬಹುಭಾಷಾ ನಟ ಪ್ರಕಾಶ್​ ರಾಜ್ ಕೊಟ್ಟ ಕಾರಣವಿದು​

    ಈ ಕುರಿತು ಮಾತನಾಡಿರುವ ಪ್ರಜ್ವಲ್​, ‘ಲೋಹಿತ್​ ಜತೆಗೆ ಈಗಷ್ಟೇ ‘ಮಾಫಿಯಾ’ ಚಿತ್ರವನ್ನು ಮುಗಿಸಿದ್ದೇನೆ. ಈ ಮಧ್ಯೆ, ಅವರು ಹೇಳಿದ ಒಂದು ಕಥೆ ಬಹಳ ಇಷ್ಟವಾಯ್ತು. ಅವರ ಕೆಲಸದ ಶೈಲಿಯನ್ನು ಹತ್ತಿರದಿಂದ ನೋಡಿರುವುದರಿಂದ, ಅವರ ನಿರ್ದೇಶನದಲ್ಲಿ ಇನ್ನೊಂದು ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

    ‘ಮಾಫಿಯಾ’ ಸಿನಿಮಾದ ಚಿತ್ರೀಕರಣದ ವೇಳೆಯಲ್ಲೇ ಈ ಚಿತ್ರದ ಕುರಿತು ಪ್ರಜ್ವಲ್​ ಜತೆಗೆ ಮಾತನಾಡಿದ್ದರಂತೆ ಲೋಹಿತ್​. ‘ಕಥೆ ಕೇಳಿ ಖುಷಿಯಾಗಿಮ ನಾವೇ ಈ ಪ್ರಾಜೆಕ್ಟ್ ಮಾಡೋಣ ಎಂದು ಹೇಳಿದ್ದರು. ಅವರು ನಿರ್ದೇಶಕರ ನಟ. ಬಹಳ ಸಪೋರ್ಟಿವ್​ ಆಗಿರುತ್ತಾರೆ. ಅವರ ಜತೆಗೆ ಅಂದುಕೊಂಡಂತೆಯೇ ಸಿನಿಮಾ ಔಟ್ ಪುಟ್ ತೆಗೆಯಬಹುದು’ ಎನ್ನುತ್ತಾರೆ ಲೋಹಿತ್​.

    ಇದನ್ನೂ ಓದಿ: ಡಿ.9ರಂದು ದೇಶಾದ್ಯಂತ ತೆರೆಕಾಣಲಿದೆ ‘ವಿಜಯಾನಂದ’: ನ.19ಕ್ಕೆ ಟ್ರೇಲರ್​ ಬಿಡುಗಡೆ, ಪ್ರತಿ ಹಂತದಲ್ಲೂ ಅಭಿಮಾನಿಗಳ ಮನ ಸೆಳೆಯುತ್ತಿದೆ…

    ಅಂದಹಾಗೆ, ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಸದ್ಯ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮುಗಿದಿದ್ದು, ಡಿಸೆಂಬರ್​​ನಲ್ಲಿ ಚಿತ್ರದ ಕೆಲಸಗಳು ಆರಂಭವಾಗಲಿವೆ. ಇದೊಂದು ಹಾರಾರ್-ಥ್ರಿಲ್ಲರ್ ಶೈಲಿಯ ಟೈಂ ಲೂಪ್​ ಚಿತ್ರವಾಗಿರಲಿದೆಯಂದೆ. ಸದ್ಯದಲ್ಲೇ ಸಿನಿಮಾದ ಹೆಸರೇನು ಎಂಬ ವಿಷಯ ಬಹಿರಂಗಗೊಳ್ಳಲಿದೆ. ಜತೆಗೆ ಪ್ರಜ್ವಲ್​ ಜತೆಗೆ ಯಾರೆಲ್ಲ ನಟಿಸುತ್ತಾರೆ ಎಂಬ ಸುದ್ದಿ ಸಹ ಬೆಳಕಿಗೆ ಬರಲಿದೆ.

    ಶಾನ್ವಿ ಎಂಟರ್ ಪ್ರೈಸಸ್ ಬ್ಯಾನರ್​ನಡಿ ಶಾನ್ವಿ ಮತ್ತು ಅಚಿಂತ್ಯ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನೊಬಿನ್​ ಪೌಲ್​ ಅವರ ಸಂಗೀತ ಮತ್ತು ಜೆಬಿನ್​ ಜೇಕಬ್​ ಅವರ ಛಾಯಾಗ್ರಹಣ ಇರಲಿದೆ.

    ಡಿಂಗ್ರಿ ನಾಗರಾಜ್​ ಮೇಲೆ ನಟಿಯ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts