More

    ಇನ್ನೊಂದು ಲಾಕ್​ಡೌನ್? ಭಯದಲ್ಲಿ ಚಿತ್ರರಂಗ …

    ಡಿ. 31ಕ್ಕೆ ಬಿಡುಗಡೆಯಾಗಬೇಕಿದ್ದ ‘ಜೆರ್ಸಿ’ ಮುಂದಕ್ಕೆ ಹೋಯಿತು. ಜ.6ಕ್ಕೆ ತೆರೆಕಾಣಬೇಕಿದ್ದ ‘ಆರ್​ಆರ್​ಆರ್’ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿತು. ಜನವರಿ 21ಕ್ಕೆ ಬಿಡುಗಡೆಯಾಗಬೇಕಿದ್ದ ‘ಪೃಥ್ವಿರಾಜ್’ ಸಹ ಇದೀಗ ಮುಂದಕ್ಕೆ ಹೋಗಿರುವ ಸುದ್ದಿ ಬಂದಿದೆ. ಹಾಗಾದರೆ, ಸದ್ಯದಲ್ಲೇ ಮತ್ತೆ ಲಾಕ್​ಡೌನ್ ಆಗಲಿದೆಯಾ?

    ಇಂಥದ್ದೊಂದು ಭಯದಲ್ಲಿ ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗವೇ ಇದೆ. ಎಲ್ಲ ರಾಜ್ಯಗಳಲ್ಲೂ ಲಾಕ್​ಡೌನ್ ಆಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಚಿತ್ರರಂಗವಂತೂ ಮಾನಸಿಕವಾಗಿ ಲಾಕ್​ಡೌನ್​ಗೆ ಸಿದ್ಧವಾಗುತ್ತಿದೆ. ದೇಶದಲ್ಲಿ ಕೋವಿಡ್ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಒಂದು ಕಾರಣವಾದರೆ, ದೆಹಲಿ ಮತ್ತು ಹರ್ಯಾಣದಲ್ಲಿ ಚಿತ್ರಪ್ರದರ್ಶನ ರದ್ದು ಮಾಡಿರುವುದು ಇನ್ನೊಂದು ಕಾರಣ. ಹಾಗಾಗಿ, ಲಾಕ್​ಡೌನ್ ಯಾವಾಗ ಆಗುತ್ತದೋ, ಎಷ್ಟು ಪ್ರಮಾಣದಲ್ಲಿ ಆಗುತ್ತದೋ ಗೊತ್ತಿಲ್ಲ. ಆದರೆ, ಭಯವಂತೂ ಇದ್ದೇ ಇದೆ. ಅದೇ ಕಾರಣಕ್ಕೆ ಎಲ್ಲ ಚಿತ್ರರಂಗಗಳೂ ಲಾಕ್​ಡೌನ್​ಗೆ ಮಾನಸಿಕವಾಗಿ ಸಿದ್ಧವಾಗುತ್ತಿವೆ.

    ಕನ್ನಡದ ವಿಷಯವನ್ನು ತೆಗೆದುಕೊಂಡರೆ, ಜ. 21ಕ್ಕೆ ‘ಏಕ್ ಲವ್ ಯಾ’ ಬಿಡುಗಡೆಯಾಗುವುದು ಬಿಟ್ಟರೆ, ಮಿಕ್ಕಂತೆ ಯಾವ ದೊಡ್ಡ ಚಿತ್ರಗಳೂ ಬಿಡುಗಡೆಗಿಲ್ಲ. ‘ಅವತಾರ್ ಪುರುಷ’ ಮುಂದೂಡಲಾಗಿದ್ದು, ಹೊಸ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಹಾಗಾಗಿ, ಕನ್ನಡದಲ್ಲಿ ಯಾವುದಾದರೂ ದೊಡ್ಡ ಚಿತ್ರ ಇದೆ ಎಂದರೆ ಅದು ಫೆ. 24ಕ್ಕೆ ಬಿಡುಗಡೆಯಾಗಬೇಕಿರುವ ‘ವಿಕ್ರಾಂತ್ ರೋಣ’ ಮಾತ್ರ. ಅದಕ್ಕಿನ್ನೂ ಒಂದೂವರೆ ತಿಂಗಳು ಸಮಯವಿದ್ದು, ಮುಂದೂಡುವ ಯಾವುದೇ ಯೋಚನೆ ಇಲ್ಲ ಎಂದು ಚಿತ್ರತಂಡ ಹೇಳಿದೆ.

    ಕೆಲವು ಸಣ್ಣ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಿದ್ಧವಿದೆಯಾದರೂ ಆ ಚಿತ್ರಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಒಂದು ಪಕ್ಷ ಸಂಪೂರ್ಣ ಲಾಕ್​ಡೌನ್ ಅಲ್ಲದಿದ್ದರೂ, ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಹಾಜರಾತಿ ಮಾಡಿದರೆ, ದೊಡ್ಡ-ಸಣ್ಣ ಚಿತ್ರವೆನ್ನದೆ ಎಲ್ಲ ಚಿತ್ರಗಳಿಗೂ ಸಮಸ್ಯೆ ಸಹಜವೇ. ಹಾಗಾಗಿ, ಸದ್ಯದ ಮಟ್ಟಿಗೆ ಚಿತ್ರ ಬಿಡುಗಡೆ ಮಾಡಬೇಕೋ, ಬೇಡವೋ ಎಂಬ ಗೊಂದಲ ಕನ್ನಡ ಚಿತ್ರರಂಗದಲ್ಲಿದೆ.

    ಇನ್ನು, ಕನ್ನಡದ ಹೊರತಾಗಿ ದೊಡ್ಡ ಚಿತ್ರ ಎಂದರೆ ಅದು ಪ್ರಭಾಸ್ ಅಭಿನಯದ ‘ರಾಧೇ ಶ್ಯಾಮ್ ಮಾತ್ರ. ಆ ಚಿತ್ರ ಬಹುತೇಕ ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರತಂಡ ಈ ವಿಷಯವಾಗಿ ಇನ್ನೂ ನಿರ್ಧಾರ ಪ್ರಕಟಿಸಬೇಕಿದೆ. ಮಿಕ್ಕಂತೆ ಸದ್ಯ

    ಇನ್ನು, ಯಾವಾಗ ಬೇಕಾದರೂ ಬಂದ್ ಆಗುವ ಭಯವಿರುವುದರಿಂದ ಯಾರೂ ಸಹ ದೊಡ್ಡ ಪ್ಲಾನ್​ಗಳನ್ನು ಮಾಡುತ್ತಿಲ್ಲ. ದೂರ ಊರಿನ ಪ್ರಯಾಣ, ದೊಡ್ಡ ಚಿತ್ರಗಳ ಘೋಷಣೆ, ದೊಡ್ಡ ಪ್ರಮಾಣದಲ್ಲಿ ಚಿತ್ರೀಕರಣ … ಯಾವುದೂ ನಡೆಯುತ್ತಿಲ್ಲ. ಎಲ್ಲದಕ್ಕೂ ಈ ಲಾಕ್​ಡೌನ್ ಭಯವೇ ಕಾರಣ.

    ಹಾಗಾದರೆ, ಮತ್ತೊಮ್ಮೆ ಲಾಕ್​ಡೌನ್ ಆಗಲಿದೆಯಾ? ಅಥವಾ ನೈಟ್ ಕರ್ಫ್ಯೂ, ಶೇ. 50ರಷ್ಟು ಹಾಜರಾತಿಯಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತದಾ? ಕರ್ನಾಟಕದ ವಿಷಯದಲ್ಲಿ ಹೇಳುವುದಾದರೆ, ಎರಡ್ಮೂರು ದಿನಗಳಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts