More

    ಲಾಕ್‌ಡೌನ್ ಮಾಡಿದರೆ ಪರಿಹಾರಕ್ಕಿಂತ ಸಮಸ್ಯೆ ಹೆಚ್ಚು

    ಬೆಳಗಾವಿ: ಲಾಕ್‌ಡೌನ್‌ನಿಂದ ಸಮಸ್ಯೆ ಹೆಚ್ಚಾಗುತ್ತಿವೆ ವಿನಃ ಪರಿಹಾರ ಸಿಗುತ್ತಿಲ್ಲ. ಹಾಗಾಗಿ ಲಾಕ್‌ಡೌನ್‌ಗೆ ತೋರಿಸುವ ಆಸಕ್ತಿಯನ್ನು ಲಸಿಕೆ ಕಂಡುಹಿಡಿಯಲು ತೋರಿಸಿದರೆ ಒಳ್ಳೆಯದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.

    ಇಲ್ಲಿನ ಸದಾಶಿವರ ನಗರದ ಸ್ಮಶಾನ ಭೂಮಿಯಲ್ಲಿ ಸೋಮವಾರ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಿದ್ದ ನೂತನ ವಾಹನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೋವಿಡ್-19 ತಡೆಗೆ ಲಾಕ್‌ಡೌನ್‌ನಿಂದ ಯಾವುದೇ ಪ್ರಯೋಜನ ಇಲ್ಲ ಎಂದರು.

    ಜಿಲ್ಲೆಯ ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಬೆರಳೆಣಿಕೆ ಪ್ರಕರಣಗಳು ಬೆಳಕಿಗೆ ಬಂದಿರುವುದನ್ನು ಮುಂದಿಟ್ಟು ಏಕಾಏಕಿ ಲಾಕ್‌ಡೌನ್ ಘೋಷಣೆ ಮಾಡಿರುವುದು ಸರಿ ಅಲ್ಲ. ಅದನ್ನೇ ನೆಪ ಮಾಡಿಕೊಂಡು ಎಲ್ಲ ತಾಲೂಕಿನವರೂ ಲಾಕ್‌ಡೌನ್‌ಗೆ ಆಗ್ರಹಿಸುತ್ತಿದ್ದಾರೆ. ಇದರಿಂದ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಲಾಕ್‌ಡೌನ್ ಮುನ್ನ ಸಾಧಕ-ಬಾಧಕ ಅರಿಯಬೇಕು ಎಂದರು.

    2023ರಲ್ಲಿ ಪಕ್ಷ ಅಧಿಕಾರಕ್ಕೆ ತರಲು ತಳಮಟ್ಟದಿಂದ ಸಂಘಟನೆ ಆರಂಭಿಸಲಾಗಿದೆ. ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಲು ರಾಜ್ಯಾದ್ಯಂತ ಪ್ರವಾಸ ನಡೆಸಲಾಗುತ್ತಿದೆ. ಅದಕ್ಕಾಗಿಯೇ ನೂತನ ವಾಹನ ಖರೀದಿಸಿ ಅದಕ್ಕೆ ಕೆಎ-49 ಎನ್-2023 ಸಂಖ್ಯೆ ಪಡೆಯಲಾಗಿದೆ. ವಾಹನ ಸಂಖ್ಯೆ ನೋಡಿದ ತಕ್ಷಣ 2023ರ ಚುನಾವಣೆ ನೆನಪಿಗೆ ಬರಬೇಕು ಎಂಬುದು ಉದ್ದೇಶ ಎಂದರು. ಬೈಲೂರು ನಿಷ್ಕಲಮಠದ ನಿಜಗುಣಾನಂದ ಶ್ರೀ, ಜ್ಞಾನಪ್ರಕಾಶ ಶ್ರೀ, ಮೋಟಗಿಮಠದ ಪ್ರಭುಚನ್ನಬಸವ ಶ್ರೀ, ಮಲ್ಲಿಕಾರ್ಜುನ ಶ್ರೀ, ಅಮರೇಶ್ವರ ಶ್ರೀ, ಅದೃಶ್ಯ ಶಿವಾಚಾರ್ಯ ಶ್ರೀ, ಉಪ್ಪಿನ ಕಾಡಸಿದ್ದೇಶ್ವರ ಶ್ರೀ ಇತರರು ಪಾಲ್ಗೊಂಡಿದ್ದರು.

    ಹೋರಾಟ ನಿರಂತರ

    ಜನರ ಮನಸ್ಸಿನಲ್ಲಿರುವ ಮೌಢ್ಯ ಕಿತ್ತೂಗೆದು ವೈಚಾರಿಕೆ ಪ್ರಜ್ಞೆ ಬೆಳೆಸುವ ಉದ್ದೇಶದಿಂದ ಸ್ಮಶಾನದಲ್ಲಿ ನೂತನ ವಾಹನಕ್ಕೆ ಚಾಲನೆ ನೀಡಲಾಗುತ್ತಿದೆ. ಮೌಢ್ಯಗಳ ವಿರುದ್ಧ ಹೋರಾಟ ನಿರಂತರವಾಗಿರಲಿದೆ. ಈ ಕುರಿತು ವ್ಯಕ್ತವಾಗುವ ಟೀಕೆ-ಟಿಪ್ಪಣೆಗಳಿಗೆ ಆದ್ಯತೆ ನೀಡುವ ಅವಶ್ಯಕತೆ ಇಲ್ಲ. ಮಾನವ ಬಂಧುತ್ವ ವೇದಿಕೆಯ ನಿರಂತರ ಜಾಗೃತಿ ಕಾರ್ಯಕ್ರಮಗಳಿಂದ ಪ್ರೇರಿತರಾದ ಜನರು ಮನೆಗಳಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಫೋಟೋ ಇಟ್ಟು ಪೂಜಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts