More

    ಪ್ರವಾಹದಲ್ಲಿ ಸಿಲುಕಿದ ಬಾಲಕಿಯನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಸ್ಥಳೀಯರು

    ಮುಂಬೈ:ಇಲ್ಲಿಯ ಸಾಂತಾ ಕ್ರೂಸ್ ಬಳಿ ಮೀಥಿ ನದಿಯ ಪ್ರವಾಹದಲ್ಲಿ ಸಿಲುಕಿದ್ದ ಬಾಲಕಿಯನ್ನು ಸ್ಥಳೀಯರು ಮಂಗಳವಾರ ಸಿನಿಮೀಯ ರೀತಿಯಲ್ಲಿ ರಕ್ಷಿಸಿದ್ದಾರೆ.
    ಬಾಲಕಿ ನದಿಯಲ್ಲಿ ಸಿಲುಕಿಕೊಂಡಿದ್ದರೆ, ಮನೆಯ ಇತರ ಮೂವರು ಮಹಿಳೆಯರು ನಾಪತ್ತೆಯಾಗಿದ್ದಾರೆ. ಸಾಂತಾಕ್ರೂಸ್ ಪ್ರದೇಶದಲ್ಲಿ ಮನೆ ಕುಸಿದ ನಂತರ ಈ ಘಟನೆ ನಡೆದಿದೆ.
    ಘಟನೆಯ ವೀಡಿಯೊದಲ್ಲಿ, ಹುಡುಗಿಯೊಬ್ಬಳನ್ನು ರಕ್ಷಿಸಲು ಒಬ್ಬಾತ ನದಿಯಲ್ಲಿ ಈಜುತ್ತಿದ್ದಾನೆ. ಆತ ನದಿಯ ಮಧ್ಯದಿಂದ ಬಾಲಕಿಯನ್ನು ಹಿಡಿದು ಒಂದು ಬದಿಗೆ ಈಜುತ್ತ ಬಂದಿದ್ದಾನೆ.

    ಇದನ್ನೂ ಓದಿ: ಅಳಿಯನ ಅಂತ್ಯಸಂಸ್ಕಾರಕ್ಕೆ ಬರುತ್ತಿದ್ದ ಒಂದೇ ಕುಟುಂಬದ ಇಬ್ಬರ ಅಪಘಾತಕ್ಕೆ ಬಲಿ

    ಆತ ಬಾಲಕಿಯನ್ನು ಪ್ರವಾಹದಿಂದ ರಕ್ಷಿಸಿ ಅವಳು ತೇಲಲು ಸಹಾಯವಾಗುವಂತೆ ಹಲಗೆ ಹಿಡಿದಿದ್ದಾನೆ. ಅಷ್ಟರಲ್ಲಿ ಇನ್ನೊಬ್ಬ ವ್ಯಕ್ತಿ ನದಿಗೆ ಪ್ರವೇಶಿಸಿ ಬಾಲಕಿಯನ್ನು ರಕ್ಷಿಸಲು ಸಹಾಯ ಮಾಡುತ್ತಿದ್ದಾನೆ.
    ಮುಂಬೈ ಭಾರಿ ಮಳೆಗೆ ತುತ್ತಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದಾಗಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಕಂಡುಬಂದಿದೆ ಎಂದು ಮಂಗಳವಾರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ (ಬಿಎಂಸಿ) ಮುಖ್ಯಸ್ಥ ಇಕ್ಬಾಲ್ ಸಿಂಗ್ ಚಾಹಲ್ ತಿಳಿಸಿದ್ದಾರೆ.

    ಇದನ್ನೂ ಓದಿ: ಸಂದರ್ಶನದಲ್ಲಿ ಗರ್ಲ್‌ಫ್ರೆಂಡೇ ಇಲ್ಲ ಎಂದಿದ್ದ: ಲೈವ್‌ ಷೋನಲ್ಲಿ ಅರೆಬೆತ್ತಲೆ ಹುಡುಗಿಯಿಂದ ಸಿಕ್ಕಿಬಿದ್ದ!

    ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನಗರದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ಜನರು ಮನೆಯೊಳಗೆ ಇರಬೇಕೆಂದು ಬಿಎಂಸಿ ಒತ್ತಾಯಿಸಿದೆ.
    ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂಬೈ ಉಪನಗರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯ ಸರ್ಕಾರಿ ಕಚೇರಿಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ರಾಜ್ಯ ಪರಿಹಾರ ಮತ್ತು ಪುನರ್ವಸತಿ ಇಲಾಖೆ ತಿಳಿಸಿದೆ.
    ಮುಂಬಯಿಯಲ್ಲಿ 10 ಗಂಟೆಗಳಲ್ಲಿ 230 ಮಿ.ಮೀ ಮಳೆಯಾಗಿದೆ ಎಂದು ಚಾಹಲ್ ಹೇಳಿದ್ದಾರೆ. “ಭಾರಿ ಮಳೆಯಿಂದಾಗಿ ಬೆಳಿಗ್ಗೆ ಮಿಥಿ ನದಿಯಲ್ಲಿ ಪ್ರವಾಹ ಕಂಡುಬಂದಿದ್ದು, ಅಪಾಯದ ಗುರುತು ದಾಟಿತ್ತು. ಆದರೆ ಈಗಿನ ವರದಿ ಪ್ರಕಾರ, ಇದು ಅಪಾಯದ ಮಟ್ಟಕ್ಕಿಂತ ಕೆಳಗೆ ಹರಿಯುತ್ತಿದೆ. ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಈಗ ನಿಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಕೋವಿಡ್ ಚಿಕಿತ್ಸೆಗೆ ಸನ್ ಫಾರ್ಮಾ ತಂದಿದೆ ಅಗ್ಗದರದ ಫ್ಲುಗಾರ್ಡ್ ಮಾತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts