More

    ಸ್ಥಳೀಯ ಬರಹಗಾರರ ಪ್ರೋತ್ಸಾಹಕ್ಕೆ ಕವಿಗೋಷ್ಠಿ

    ಗಂಗಾವತಿ: ಸ್ಥಳೀಯ ಕವಿತೆ ರಚನೆಗಾರರನ್ನು ಪ್ರೋತ್ಸಾಹಿಸಲು ಅಸ್ತಿತ್ವಕ್ಕೆ ಬಂದ ಕಾವ್ಯಲೋಕ ಸಂಘಟನೆ 100ನೇ ಕವಿಗೋಷ್ಠಿಯನ್ನು ಸೆ.10ರಂದು ಹಮ್ಮಿಕೊಂಡಿದೆ ಎಂದು ಕಾವ್ಯಲೋಕ ಗೌರವಾಧ್ಯಕ್ಷ ಡಾ.ಶಿವಕುಮಾರ ಮಾಲಿ ಪಾಟೀಲ್ ಹೇಳಿದರು.

    ಇದನ್ನೂ ಓದಿ: ಮುಧೋಳದಲ್ಲಿಂದು ಶಿಕ್ಷಕರ ಪ್ರಥಮ ಕವಿಗೋಷ್ಠಿ

    ನಗರದ ಪತ್ರಿಕಾಭವನದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಗರದ ಶ್ರೀ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ 100ನೇ ಕವಿಗೋಷ್ಠಿ ಹಮ್ಮಿಕೊಂಡಿದ್ದು, ಚುಟುಕು ಕವಿ ಡುಂಡಿರಾಜ್ ಉದ್ಘಾಟಿಸಲಿದ್ದಾರೆ.

    ಶಿಕ್ಷಕ ಮೈಲಾರಪ್ಪ ಬೂದಿಹಾಳ್ ರಚಿಸಿದ ಬಾರೋ ಕಂದ ಶಾಲೆಗೆ ಮಕ್ಕಳ ಪದ್ಯಗಳ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಕಾವ್ಯಲೋಕದಿಂದ ಇದುವರಿಗೂ ಜಿಲ್ಲಾ, ವಿಭಾಗೀಯ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿ ಆಯೋಜಿಸಿದ್ದು, 22ಕ್ಕೂ ಹೆಚ್ಚು ಪುಸ್ತಕಗಳ ಬಿಡುಗಡೆಗೆ ಅವಕಾಶ ಕಲ್ಪಿಸಲಾಗಿತ್ತು.

    ಸಂಗೀತ ಕಾರ್ಯಕ್ರಮ, ಚುಟುಕು ಮತ್ತು ಕವಿಗೋಷ್ಠಿ, ಸಾಧಕರ ಸನ್ಮಾನ ಸೇರಿ ವಿವಿಧ ಕಾರ್ಯಕ್ರಮ ಜರುಗಲಿದೆ.
    ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಯ 80ಕ್ಕೂ ಹೆಚ್ಚು ಕವಿಗಳು ಭಾಗವಹಿಸಲಿದ್ದಾರೆ ಎಂದರು. ಉಪಾಧ್ಯಕ್ಷ ಶರಣಪ್ಪ ತಳ್ಳಿ,
    ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ ಬೂದಿಹಾಳ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts