More

    ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಯುತ್ತಿದೆ ಸ್ಥಳೀಯ ಸಂಸ್ಥೆ ಮತದಾನ: ಕರೊನಾ ಸೋಂಕಿತರಿಗೂ ವೋಟ್​ ಮಾಡಲು ಅವಕಾಶ

    ಬೆಂಂಗಳೂರು: ನಿಗದಿಯಂತೆ 8 ನಗರ ಸ್ಥಳೀಯಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯ ಮತದಾನ ಇಂದು ಆರಂಭವಾಗಿದೆ.

    ಕರೊನಾ ಎರಡನೇ ಅಲೆಯ ಭೀತಿಯ ನಡುವೆಯೂ ಸಾಕಷ್ಟು ಮುಂಜಾಗ್ರತ ಕ್ರಮಗಳೊಂದಿಗೆ ಬಳ್ಳಾರಿ ಮಹಾನಗರ ಪಾಲಿಕೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ವಿಜಯಪುರ ಪುರಸಭೆ, ರಾಮನಗರ, ಚನ್ನಪಟ್ಟಣ ನಗರ ಸಭೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯಿತಿ, ಶಿವಮೊಗ್ಗದ ಭದ್ರಾವತಿ ನಗರ ಸಭೆ, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ, ಹಾಸನ ಜಿಲ್ಲೆಯ ಬೇಲೂರು ಪುರಸಭೆ, ಮಡಿಕೇರಿ ನಗರಸಭೆ ಮತ್ತು ಬೀದರ್​ ನಗರಸಭೆಯ ಎಲ್ಲ ವಾರ್ಡ್​ಗಳಿಯೂ ಮತದಾನ ಆರಂಭವಾಗಿದೆ.

    ಇಂದು ಏಳು ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಕರೊನಾ ನಡುವೆಯು ಉತ್ಸಾಹದಿಂದ ಮತದಾನ ಮಾಡಲು ನಾಗರಿಕರು ಆಗಮಿಸುತ್ತಿದ್ದು, ಚುನಾವಣಾ ಸಿಬ್ಬಂದಿ ಎಲ್ಲರಿಗೂ ಥರ್ಮಲ್‌ ಸ್ಕ್ರೀನಿಂಗ್, ಸ್ಯಾನಿಟೈಸ್ ಮಾಡುತ್ತಿದ್ದಾರೆ. ಮತಗಟ್ಟೆಗೆ ಬಂದ ಮತದಾರರು ಗುರುತು ಮಾಡಿರುವ ಬಾಕ್ಸ್​ನೊಳಗೆ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ.

    ಇದರೊಂದಿಗೆ ಚುನಾವಣೆ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈಗಾಗಲೇ ಮತದಾನದ ಸಮಯವನ್ನು ಚುನಾವಣಾ ಆಯೋಗ ಒಂದು ಗಂಟೆ ವಿಸ್ತರಣೆ ಮಾಡಿದೆ. ಬೆ.7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.

    ಕರೊನಾ ಸೋಂಕಿತರಿಗೂ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಮತದಾನ ಮುಕ್ತಾಯಕ್ಕೆ ಒಂದು ಗಂಟೆ ಮುಂಚೆ ಮತದಾನ ಮಾಡಲು ಅವಕಾಶ ಮಾಡಲಾಗಿದ್ದು, ಪಿಪಿಇ ಕಿಟ್ ಧರಿಸಿ ಮತದಾನ ಮಾಡಬಹುದಾಗಿದೆ.

    ಮೇ 2ರಂದು ಈಗಾಗಲೇ ಮತದಾನ ನಡೆದಿರುವ ಉಪಚುನಾವಣೆಯ ಫಲಿತಾಂಶದ ಜತೆಯಲ್ಲಿಯೆ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವು ಕೂಡ ಹೊರಬೀಳಲಿದೆ.

    ಕೆಕೆಆರ್​ ತಂಡದ ಕೋಡ್​​ ವರ್ಡ್​ ರಹಸ್ಯ ಬಿಚ್ಚಿಟ್ಟು ತೀವ್ರ ಅಸಮಾಧಾನ ಹೊರಹಾಕಿದ ವೀರೂ!

    ಟ್ರ್ಯಾಕ್ಟರ್​ನಲ್ಲಿ ರೈತ ಉಳುಮೆ ಮಾಡುವ 5 ರೂ. ನೋಟಿದ್ರೆ ಲಕ್ಷಾಧಿಪತಿಗಳಾಗ್ತೀರಿ! ಎಲ್ರೂ ಓದಲೇಬೇಕಾದ ಸುದ್ದಿ ಇದು

    Web Exclusive | ಮೂರು ಪಟ್ಟು ದರದಲ್ಲಿ ರೆಮ್​ಡಿ​ಸಿವಿರ್ ಬಿಕ್ರಿ; ಕರೊನಾ ಕ್ರೌರ್ಯದಲ್ಲೂ ಅಮಾನವೀಯ ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts