More

    ಸಾಲ ಪಡೆದಿದ್ದ ಯುವತಿಗೆ ಅಶ್ಲೀಲ ಫೋಟೋ ಕಳಿಸಿ ಕಿರುಕುಳ, ಹಣ ಕೊಟ್ಟರೂ ಹಿಂಸಿಸಿದ!

    ಬೆಂಗಳೂರು: ಯುವತಿಯರೇ ಎಚ್ಚರ, ಕಂಡ ಕಂಡಲ್ಲಿ ಸಾಲ ಪಡೆಯೋಕು ಮುನ್ನ ಜೋಕೆ! ಹಣ ಪಡೆಯುವ ಭರದಲ್ಲಿ ನಿಮ್ಮ ಮೊಬೈಲ್​ ನಂಬರ್​ ಶೇರ್​ ಮಾಡಿಕೊಂಡರೆ ಕೆಲ ಕಿಡಿಗೇಡಿಗಳು ಸಾಲ ವಸೂಲಿ ಹೆಸರಲ್ಲಿ ನಿಮ್ಮನ್ನೇ ಬ್ಲ್ಯಾಕ್​ಮೇಲ್​ ಮಾಡಿ ಹೆಚ್ಚು ಹಣ ದೋಚುತ್ತಾರೆ. ಜತೆಗೆ ಮಾನಸಿಕ ಕಿರುಕುಳ ನೀಡುತ್ತಾರೆ.

    ಆನ್​ಲೈನ್​ ಆ್ಯಪ್​ನಲ್ಲಿ ಸಾಲ ಪಡೆದಿದ್ದ ಯುವತಿಗೆ ದುಷ್ಕರ್ಮಿಯೊಬ್ಬ ಕರೆ ಮಾಡಿ ಕಿರುಕುಳ ನೀಡಿದ್ದಾನೆ. ಹಣ ವಾಪಸ್​ ಕೊಟ್ಟರೂ ಆಕೆಯ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಪಡಿಸಿ ಹಣಕ್ಕಾಗಿ ಬ್ಲ್ಯಾಕ್​​ಮೇಲ್​ ಮಾಡುತ್ತಿದ್ದಾನೆ. ಇದನ್ನೂ ಓದಿರಿ ಅಕ್ರಮವಾಗಿ ಮರಳು ತೆಗೆಯಲು ಅಪ್ಪನ ಜತೆ ಹೋಗಿದ್ದ ಯುವತಿ ಅಲ್ಲೇ ಪ್ರಾಣಬಿಟ್ಟಳು!

    ಸಿದ್ದಾಪುರದ ನಿವಾಸಿ, 25 ವರ್ಷದ ಯುವತಿಯೊಬ್ಬಳು “ಕ್ಯಾಶ್​ ಬೀನ್​” ಎಂಬ ಆ್ಯಪ್​ನಲ್ಲಿ 10,800 ರೂ. ಸಾಲ ಪಡೆದಿದ್ದಳು. ಸಾಲದ ಹಣಕ್ಕೆ ಬಡ್ಡಿ ಸೇರಿ 12,419 ರೂ. ಆಗಿತ್ತು. ಆ.26ರಂದು ವಿವಿಧ ನಂಬರ್​ಗಳಿಂದ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಸಾಲ ಕಟ್ಟುವಂತೆ ಸೂಚಿಸಿದ್ದ. ಬಳಿಕ ಯುವತಿ 3 ಸಾವಿರ ರೂ ಪಾವತಿಸಿದ್ದಳು. ನಂತರ ಅಪರಿಚಿತ ವ್ಯಕ್ತಿ ಯುವತಿಯ ಫೋಟೋವನ್ನು ಅಶ್ಲೀಲವಾಗಿ ಮಾರ್ಪಡಿಸಿ ವ್ಯಾಟ್ಸ್​ಆ್ಯಪ್​ಗೆ ರವಾನಿಸಿದ್ದ. ಹಣ ಕೊಡಿ, ಇಲ್ಲವಾದರೆ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಅಪ್​ಲೋಡ್​ ಮಾಡಿ ಮರ್ಯಾದೆ ಕಳೆಯುವೆ ಎಂದು ಬೆದರಿಸಿದ್ದ.

    ಅಪರಿಚಿತನ ಬೆದರಿಕೆಗೆ ಭಯಗೊಂಡ ಯುವತಿ 12 ಸಾವಿರ ರೂ. ಸಂದಾಯ ಮಾಡಿದ್ದಳು. ಬಳಿಕವೂ ಫೋನ್​​ ಮಾಡಿದ್ದ ಆರೋಪಿ ಇನ್ನಷ್ಟು ಹಣ ಕೊಡುವಂತೆ ಬ್ಲ್ಯಾಕ್​ಮೇಲ್​ ಮಾಡಿದ್ದಾನೆ. ಈ ವಿಚಾರವನ್ನು ಯುವತಿ ತನ್ನ ಆಪ್ತರೊಬ್ಬರ ಬಳಿ ಹೇಳಿಕೊಂಡಿದ್ದಳು. ಅವರ ಸಲಹೆ ಮೇರೆಗೆ ದೂರು ಕೊಟ್ಟಿದ್ದಾಳೆ. ದಕ್ಷಿಣ ವಿಭಾಗ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಾಲಕನ ಪ್ರಾಣ ತೆಗೆದ ಜೋಕಾಲಿ, ಆನ್​ಲೈನ್​ ಪಾಠ ಕೇಳುತ್ತಲೇ ಪ್ರಾಣಬಿಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts