More

    ಮೃತದೇಹದ ಒಳಗೆ ಜೀವಂತ ಹಾವು! ಶವಪರೀಕ್ಷೆ ವೇಳೆ ನಡೆದ ಭಯಾನಕ ಘಟನೆ ಇದು…

    ನ್ಯೂಯಾರ್ಕ್​: ಶವಪರೀಕ್ಷೆ ತಂತ್ರಜ್ಞರಾಗಿರುವುದು ಜಗತ್ತಿನ ಕಠಿಣ ಕೆಲಸಗಳಲ್ಲಿ ಒಂದು. ತಮ್ಮ ಕೆಲಸದ ಭಾಗವಾಗಿ ಅವರು ಪ್ರತಿನಿತ್ಯ ಮೃತ ದೇಹಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಅದು ಅಷ್ಟು ಸುಲಭವಲ್ಲ. ಅದಕ್ಕೆ ಗುಂಡಿಗೆ ಗಟ್ಟಿ ಇರಬೇಕು. ಏಕೆಂದರೆ ಪ್ರತಿನಿತ್ಯ ಅವರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುತ್ತಾರೆ. ಅಮೆರಿಕದ ಮೇರಿಲ್ಯಾಂಡ್‌ನ ಶವಪರೀಕ್ಷೆ ತಂತ್ರಜ್ಞೆ ಜೆಸ್ಸಿಕಾ ಲೋಗನ್ ಅವರು ತಮ್ಮ ಕೆಲಸದ ಸಮಯದಲ್ಲಿ ಅನುಭವಿಸಿದ ಕರಾಳ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ಈಗ ವೈರಲ್ ಆಗುತ್ತಿದೆ.

    ತಮ್ಮ ಕೆಲಸದಲ್ಲಿ ಎದುರಾದ ಅನಿರೀಕ್ಷಿತ ಘಟನೆಗಳ ಬಗ್ಗೆ ಮಾತನಾಡಿದ ಜೆಸ್ಸಿಕಾ, ಮೃತದೇಹದ ಒಳಗೆ ಜೀವಂತ ಹಾವನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ. ಒಮ್ಮೆ ಮೃತದೇಹವನ್ನು ಪರೀಕ್ಷಿಸುವಾಗ ದೇಹದ ಒಳಗೆ ಜೀವಂತ ಹಾವು ನೋಡಿ ಆಘಾತಕ್ಕೆ ಒಳಗಾದೆ. ಆ ಕ್ಷಣ ನಾನು ಹುಚ್ಚಳಾಗಿದ್ದೇ ಎಂದು ಹೇಳುವುದು ಕಡಿಮೆ. ನಾನು ಅಕ್ಷರಶಃ ಕೊಠಡಿಯೆಲ್ಲ ಕಿರುಚುತ್ತಾ ಓಡಿದೆ ಮತ್ತು ಹಾವು ಹಿಡಿಯುವವರೆಗೂ ನಾನು ಕೋಣೆಗೆ ಹಿಂತಿರುಗಲೇ ಇಲ್ಲ ಎಂದು ಹೇಳಿದ್ದಾರೆ.

    ಶುಷ್ಕ ಮತ್ತು ತಂಪಾದ ವಾತಾವರಣ ಇದ್ದರೆ, ಸಾಮಾನ್ಯವಾಗಿ ಕೀಟಗಳ ಚಟುವಟಿಕೆಯು ಸಾಕಷ್ಟು ಇರುವುದಿಲ್ಲ. ಆದರೆ, ಬಿಸಿ ಮತ್ತು ತೇವಯುತವಾಗಿದ್ದರೆ, ಸಾಕಷ್ಟು ಕೀಟಗಳು ಚಟುವಟಿಕೆ ಇರುತ್ತದೆ. ಹೀಗಾಗಿ ನಾನು ಕೊಳೆತ ಮೃತದೇಹಗಳನ್ನು ಚಳಿಗಾಲದಲ್ಲಿ ಆದ್ಯತೆ ಕೊಡುತ್ತೇನೆ ಎಂದು ಜೆಸ್ಸಿಕಾ ಹೇಳಿದ್ದಾರೆ.

    ಅಂದಹಾಗೆ ಶವಪರೀಕ್ಷೆ ತಂತ್ರಜ್ಞೆಯಾಗುವುದು ಜೆಸ್ಸಿಕಾ ಆರಿಸಿಕೊಂಡ ವೃತ್ತಿಯಲ್ಲವಂತೆ. ಆದರೆ ಈಗ ಅವರು ತಮ್ಮ ಕೆಲಸವನ್ನು ಪ್ರೀತಿಸುತ್ತಿದ್ದಾರೆ. ಪ್ರತಿ ದಿನವೂ ತನಗೆ ವಿಭಿನ್ನ ಅನುಭವಗಳು ಆಗುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ನವಲಗುಂದ ಲಾಡ್ಜ್​ನಲ್ಲಿ ಯುವಜೋಡಿ ಸಾವಿಗೆ ಶರಣು: ಅಣ್ಣ-ತಂಗಿ ಅಂತಾ ಗೊತ್ತಿದ್ರೂ ಪ್ರೀತಿಸಿ ದುರಂತ ಅಂತ್ಯ

    ಮತಾಂತರಗೊಂಡರೆ ಮೀಸಲು ಇಲ್ಲ; ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರದಿಂದ ಅಫಿಡವಿಟ್ ಸಲ್ಲಿಕೆ

    ದಿನಾ 15 ನಿಮಿಷ ವ್ಯಾಯಾಮ/ವಾಕಿಂಗ್​ ಮಾಡಿ ಫಿಟ್​ ಆಗಿರಬಹುದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts