More

    ಪ್ರಕೃತಿಯ ಮಡಿಲಲ್ಲಿ ಜೈನ್‌ಫಾರ್ಮ್ಸ್‌ನೊಂದಿಗೆ ಜೀವಿಸಿ…

    ಬೆಂಗಳೂರು: ಸಮಾಜ ಅಂದರೆ ಮನುಷ್ಯ ಮಾತ್ರ ಬದುಕೋದಲ್ಲ, ಮನುಷ್ಯನೊಂದಿಗೆ ಪ್ರಕೃತಿಯೂ ಬದುಕಬೇಕು. ಪ್ರಕೃತಿಯಲ್ಲಿರೋ ಸಕಲ ಜೀವರಾಶಿಗಳು ಬದುಕಬೇಕು. ಅದರರ್ಥ ಪ್ರಕೃತಿಯಲ್ಲಿ ಮನುಷ್ಯ ಬದುಕಬೇಕು. ನಾವು ಪ್ರಕೃತಿಯ ಮಧ್ಯೆ ಹೋದಾಗ ನಮ್ಮೆಲ್ಲ ಕಷ್ಟಗಳನ್ನು ದುಃಖಗಳನ್ನು ಮರೆಯುತ್ತ ಹೋಗ್ತೀವಿ, ಕಾರಣ ಪ್ರಕೃತಿ. ಹಾಗಾದ್ರೆ ಪ್ರಕೃತಿ ಅಂದ್ರೆ ಏನು?

    ಮನುಷ್ಯನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಶರೀರ ಮತ್ತು ಮನಸ್ಸನ್ನು ನೆಮ್ಮದಿಯಾಗಿಡುವ ಸ್ಥಳ ಅಥವಾ ಪರಿಸರ. ಅಲ್ಲಿ ಹಿತವಾದ ಗಾಳಿ ಬೀಸುತ್ತೆ. ಪಾದಗಳು ಮಣ್ಣನ್ನು ಸ್ಪರ್ಶ ಮಾಡುತ್ವೆ, ಸುತ್ತಲೂ ಹಕ್ಕಿಗಳ ಕಲರವ ಕಿವಿಗೆ ಇಂಪಾಗಿ ಕೇಳ್ತಾ ಇರುತ್ತೆ, ಮತ್ತೆಲ್ಲೋ ನೀರಿನ ಝರಿ ಜುಳುಜುಳು ಹರಿಯತಾ ಇರುತ್ತೆ. ಪರಿಸರದೊಂದಿಗೆ ಬೆರೆತ ಮನುಷ್ಯನ ಮಾನಸಿಕತೆ ತುಂಬಾ ಗಟ್ಟಿಯಾಗಿರುತ್ತೆ ಮತ್ತು ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ ಎಂದು ವಿಜ್ಞಾನ ಕೂಡ ಹೇಳುತ್ತದೆ. ಅದರರ್ಥ ಪ್ರಕೃತಿಯಲ್ಲಿ ಮನುಷ್ಯ ಜೀವಿಸಬೇಕು. ಪ್ರಕೃತಿಯಲ್ಲಿ ಬೆರೆತ ಮನುಷ್ಯನಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವುದು ಕಡಿಮೆ. ಜೊತೆಗೆ ಬೊಜ್ಜು, ಅಸ್ತಮಾ, ಮಾನಸಿಕ ಒತ್ತಡದ ಕಾಯಿಲೆಗಳು ಕೂಡ ಕಡಿಮೆ.

    ಪ್ರಕೃತಿ ಮನಸ್ಸಿಗೆ ಆನಂದ ಕೊಡುವುದರ ಜೊತೆಗೆ ನಮ್ಮ ಚಿಂತೆನೆಗಳನ್ನು ಸರಿಯಾದ ದಾರಿಯಲ್ಲಿ ನಡೆಸಲು ಸ್ಫೂರ್ತಿ ಕೊಡುತ್ತದೆ. ಈಗ ವೇಗವಾಗಿ ಬೆಳೆಯುತ್ತಿರುವ ಸಿಟಿಗಳಲ್ಲಿ ಪ್ರಕೃತಿ ಅಂದ್ರೆ ಪಾರ್ಕ್. ಆದರೆ ಪಾರ್ಕ್ ಒಂದು ಹಿತವಾದ ಆನಂದ ಕೊಡುತ್ತಾ? ಮನಸ್ಸಿಗೆ ನೆಮ್ಮದಿ ಕೊಡುತ್ತಾ? ಖಂಡಿತ ಕೊಡಲ್ಲ. ಅದು ಸಿಟಿ ಮಧ್ಯೆ ಒಂದು ಸ್ಥಳ ಅಷ್ಟೇ.

    ಸಂತೆಯೊಳಗೆ ನಿಂತು ಧ್ಯಾನ ಮಾಡೋದೂ ಒಂದೇ, ಪಾರ್ಕ್‌ನಲ್ಲಿ ನೆಮ್ಮದಿಯನ್ನು ಹುಡುಕೋದೂ ಒಂದೇ. ಆದರೆ ನಮಗೆ ಸಮಯ ಸಿಕ್ಕರೆ ಹೊರಗಡೆ ಹೋಗೋಣ, ಅಲ್ಲಿ ಕಾಲ ಕಳೆಯೋಣ, ಎಲ್ಲರ ಜೊತೆ ಬೆರೆಯೋಣ ಅಂತ ಆಸೆ ಇರುತ್ತೆ ಅಲ್ವಾ? ನಾವು ಸಿಟಿಗಳಲ್ಲಿ ಜೀವನ ಮಾಡ್ತಿದೀವಿ, ಸಿಟಿಗೆ ಹತ್ತಿರದಲ್ಲೇ ಎಲ್ಲಾದ್ರೂ ಫಾರ್ಮ್‌ ಲ್ಯಾಂಡ್ ತಗೊಳೋಣ, ಅಲ್ಲಿ ನಾವು ಬಯಸಿದಂತೆ ಒಂದು ಫಾರ್ಮ್ ಹೌಸ್ ಕಟ್ಕೊಂಡು, ರಜಾದಿನಗಳಲ್ಲಿ ವಾರಾಂತ್ಯದಲ್ಲಿ ಕುಟುಂಬ ಸಮೇತ ಹೋಗಿಬರೋಣ ಅಂತ ಆಸೆ ಇರುತ್ತೆ ಅಲ್ವಾ?

    ಈ ರೀತಿ ಆಸೆ ಪಡೋರಲ್ಲಿ ತುಂಬಾ ಜನರಿಗೆ ಕೆಲವೊಂದು ಪ್ರಶ್ನೆಗಳು ಹುಟ್ಟುತ್ತವೆ. ಫಾರ್ಮ್‌ಲ್ಯಾಂಡ್ ತಗೊಳೋದು ಸರಿ, ತಗೊಂಡರೆ ಅಲ್ಲಿ ಮೇಂಟೆನೆನ್ಸ್, ನೋಡ್ಕೊಳೋರು ಯಾರು? ಯಾರಾದರೂ ಒತ್ತುವರಿ ಮಾಡಿದ್ರೆ ಹೆಂಗೆ, ಅಲ್ಲಿ ಯಾವಾಗಲೂ ನಾವು ಕಾದ್ಕೊಂಡು ಕೂತ್ಕೊಳಕ್ಕೆ ಆಗಲ್ಲ. ಇನ್ನು ಡಾಕ್ಯುಮೆಂಟ್ಸ್ ಸರಿ ಇರುತ್ತೋ ಇಲ್ವೋ.. ಯಾಕೆ ರಿಸ್ಕ್ ತಗೋಬೇಕು? ಫಾರ್ಮ್‌ ಲ್ಯಾಂಡಲ್ಲಿ ಯಾವ ಥರ ಗಿಡ ಬೆಳೆಸಬೇಕು, ಹೆಂಗೆ ಬೆಳೆಸಬೇಕು, ದಿನಾ ನಾವು ಹೋಗಿ ನೀರು, ಗೊಬ್ಬರ ಹಾಕಿ ಗಿಡ ಬೆಳೆಸೋಕಾಗುತ್ತಾ? ಅನ್ನೋದು ಅವರ ಸಮಸ್ಯೆ.

    ಪ್ರಕೃತಿಯ ಮಡಿಲಲ್ಲಿ ಜೈನ್‌ಫಾರ್ಮ್ಸ್‌ನೊಂದಿಗೆ ಜೀವಿಸಿ...

    ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಫಾರ್ಮ್‌ ಲ್ಯಾಂಡ್ ಅನ್ನೋದು ಬರೀ ಒಂದು ಜಾಗ ಆಗಬಾರದು. ಅದು ನಮ್ಮ ಮನೆ ಆಗ್ಬೇಕು, ಅದು ನಾವು ಬಯಸಿದಾಗ ಹೋಗಿ ಬರುವಂತಿರಬೇಕು. ಅದಕ್ಕೆ ನಾವೇ ಮಾಲೀಕರು ಆಗಿರಬೇಕು. ಅಲ್ಲಿಗೆ ಕಾಲಿಟ್ಟರೆ ನಮ್ಮ ಚಿಕ್ಕಂದಿನ ನೆನಪುಗಳೆಲ್ಲ ಮರುಕಳಿಸುವಂತಿರಬೇಕು. ಅದು ನಮ್ಮ ಜೀವನದ ಒಂದು ಭಾಗವಾಗಬೇಕು. ಹೀಗೆಂದು ಬಯಸಿದವರು ಬೆಂಗಳೂರಿನ ಜೈನ್‌ ಫಾರ್ಮ್ಸ್‌ನವರು. ಸುಮಾರು 25 ವರ್ಷಗಳ ಹಿಂದೆ ಇಂಥದ್ದೊಂದು ಕನಸನ್ನು ಕಂಡವರು ಜೈನ್‌ ಫಾರ್ಮ್ಸ್ ಕಂಪನಿಯ ರೂವಾರಿ ಮಂಗಲ್‌ಚಂದ್ ಜೈನ್. ಅವರ ಉದ್ದೇಶ ಇಷ್ಟೇ. ವಾರಾಂತ್ಯದಲ್ಲಿ ಅಥವಾ ರಜಾದಿನಗಳಲ್ಲಿ ನೀವು ಯಾವುದೇ ಜಂಜಾಟಗಳಿಲ್ಲದೇ ನಿಮ್ಮ ಕುಟುಂಬದ ಜೊತೆ ಕಾಲ ಕಳೆಯಬೇಕು ಅನ್ನೋದು. ಈ ಉದ್ದೇಶವನ್ನಿಟ್ಟುಕೊಂಡು ಸುಂದರ ಪ್ರಕತಿಯ ಮಡಿಲಲ್ಲಿ ಜೈನ್‌ ಫಾರ್ಮ್‌ ಲ್ಯಾಂಡ್​ ಒಂದನ್ನು ಅತ್ಯಾಕರ್ಷಕ ದರದಲ್ಲಿ ಸುಮಾರು 25 ವರ್ಷಗಳಿಂದ ಜನರಿಗೆ ಒದಗಿಸುತ್ತ ಬಂದಿದ್ದಾರೆ.

    ಮಂಗಲ್‌ಚಂದ್ ಜೈನ್ ಅವರು ಮೂಲತಃ ಪ್ರಕೃತಿಪ್ರಿಯರು. ಹಾಗಾಗಿ ಪ್ರಕೃತಿ ಮಧ್ಯೆ ಒಂದು ಫಾರ್ಮ್‌ಲ್ಯಾಂಡ್ ಕಟ್ಟಲು ಹೋದಾಗ ಕಾನೂನಾತ್ಮಕವಾಗಿ ತುಂಬಾ ಕಷ್ಟಗಳನ್ನು ಎದುರಿಸಬೇಕಾಯ್ತು. ಇದನ್ನು ಅರಿತ ಅವರು ಗೇಟೆಡ್ ಕಮ್ಯುನಿಟಿಯ ಫಾರ್ಮ್‌ಲ್ಯಾಂಡ್ ತೆರೆಯಲು ನಿರ್ಧರಿಸಿದರು. ಆ ಫಾರ್ಮ್‌ಲ್ಯಾಂಡ್ ಪರಿಸರಸ್ನೇಹಿ ಆಗಿರಬೇಕು. ಅಲ್ಲಿ ಉತ್ತಮವಾದ ಕ್ಲಬ್‌ಹೌಸ್ ಇರಬೇಕು. ಗ್ರಾಹಕರಿಗೆ ಒಳ್ಳೆಯ ಸರ್ವಿಸ್ ಒದಗಿಸುವ ಟೀಮ್ ಇರಬೇಕು ಎಂದು ಆ ದಿನಗಳಲ್ಲಿಯೇ ಕನಸು ಕಂಡು ಬೆಂಗಳೂರಿನ ಬಾಗಲೂರಿನಲ್ಲಿ ಸುಮಾರು 700 ಎಕರೆ ಜಾಗ ತೆಗೆದುಕೊಂಡು ಮೇಲೆ ಹೇಳಿರೋ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ.

    ಪ್ರಕೃತಿಯ ಮಡಿಲಲ್ಲಿ ಜೈನ್‌ಫಾರ್ಮ್ಸ್‌ನೊಂದಿಗೆ ಜೀವಿಸಿ...

    ನೀವು ಒಂದು ಸಲ ಜೈನ್ ಫಾರ್ಮ್ಸ್‌ಗೆ ಭೇಟಿ ಕೊಟ್ಟರೆ ಇದೆಲ್ಲದರ ಪರಿಚಯ ನಿಮಗಾಗಲಿದೆ. ಒಬ್ಬ ವ್ಯಕ್ತಿ 10,000 ಚದರ ಅಡಿಯಿಂದ ಹಿಡಿದು ಎಕರೆಗಟ್ಟಲೆ ಜಾಗ ಜೈನ್‌ಫಾರ್ಮ್ಸ್‌ನಲ್ಲಿ ಖರೀದಿಸಬಹುದು. ಪ್ರಾಪರ್ಟಿ ಕೊಳ್ಳುವಾಗ ಕೆಲವೊಂದು ಭಯವಿರುತ್ತದೆ. ಡಾಕ್ಯುಮೆಂಟ್ಸ್ ಸರಿ ಇರುತ್ತೋ ಇರಲ್ವೋ ಅಂತ. ಆದರೆ ಇಲ್ಲಿ ಡಾಕ್ಯುಮೆಂಟ್ಸ್, ರಿಜಿಸ್ಟ್ರೇಷನ್ ಎಲ್ಲಾ ಕಾನೂನಾತ್ಮಕವಾಗಿರುತ್ತದೆ. ಜೊತೆಗೆ ಸಿಟಿ ಒತ್ತಡದಿಂದ ಮುಕ್ತಿಪಡೆಯಬಹುದು. ಇದರ ಜೊತೆಗೆ ಜೈನ್‌ಫಾರ್ಮ್ಸ್ ಅವರು ಕೊಡೈಕೆನಾಲ್​ನಲ್ಲಿ ಸುಮಾರು 150 ಎಕರೆ, ಹೈದರಾಬಾದ್​ನಲ್ಲಿ 150 ಎಕರೆ, ಜೈಪುರದಲ್ಲಿ 150 ಎಕರೆ ಫಾರ್ಮ್‌ಲ್ಯಾಂಡ್ ಜಾಗಗಳನ್ನು ಹೊಂದಿದ್ದಾರೆ. ಅದರರ್ಥ ನೀವು ನಿಮ್ಮಿಷ್ಟದ ಊರಲ್ಲಿ ಫಾರ್ಮ್‌ಲ್ಯಾಂಡ್ ಹೊಂದಬಹುದು. ಜೈನ್‌ಫಾರ್ಮ್ ಅವರು ಬರೀ ಫಾರ್ಮ್‌ಲ್ಯಾಂಡ್ ಸೇಲ್ ಮಾಡ್ತಿಲ್ಲ, ಜೊತೆಗೆ ಸೆಕ್ಯೂರಿಟಿ, ತೋಟಗಾರಿಕೆ, ಫಾರ್ಮ್ ಹೌಸ್ ಮೇಂಟೆನೆನ್ಸ್ ರಿಕ್ರಿಯೇಷನ್ಸ್ ಸೌಲಭ್ಯವನ್ನು ಸತತವಾಗಿ 25 ವರ್ಷಗಳಿಂದ ಕೊಡ್ತಾ ಬಂದಿದ್ದಾರೆ.

    ಪ್ರಕೃತಿಯ ಮಡಿಲಲ್ಲಿ ಜೈನ್‌ಫಾರ್ಮ್ಸ್‌ನೊಂದಿಗೆ ಜೀವಿಸಿ...

    ಕಾಡಿನಿಂದ ನಾಡು-ನಾಡಿನಿಂದ ಜೀವನ, ಒಂದು ದೇಶದ ವಿಶಿಷ್ಠ ಸಂಪತ್ತು ಅಂದರೆ ಅದು ಕಾಡು. ಕಾಡಿದ್ದರೆ ಮಾತ್ರ ಸಕಲ ಜೀವರಾಶಿಗಳೂ ಸಂತೋಷದಿಂದಿರಲು ಸಾಧ್ಯ ಎಂಬುದನ್ನು ಅರಿತು ಸುಮಾರು 2 ಲಕ್ಷ ಗಿಡಗಳನ್ನು ಇದೇ ಫಾರ್ಮ್‌ಲ್ಯಾಂಡ್‌ಗಳಲ್ಲಿ ಬೆಳೆಸಿದ್ದಾರೆ. ಇನ್ನೂ 3 ವರ್ಷದಲ್ಲಿ 3 ಲಕ್ಷ ಗಿಡಗಳನ್ನು ಬೆಳೆಸೋ ಗುರಿ ಹೊಂದಿದ್ದಾರೆ. ಕಾಂಕ್ರೀಟ್ ಕಾಡಿನ ನಡುವೆ, ಟ್ರಾಫಿಕ್ ಕಿರಿಕಿರಿ ನಡುವೆ, ಒತ್ತಡದ ಜೀವನವನ್ನು ಅನುಭವಿಸಿ ಆರೋಗ್ಯದಲ್ಲಿ ಏರುಪೇರು ಮಾಡಿಕೊಂಡು ಆಸ್ಪತ್ರೆಗಳಿಗೆ ಅಲೆಯುವುದಕ್ಕಿಂತ ಆಗಾಗ ಪರಿಸರದೊಂದಿಗೆ ಬೆರೆತರೆ ಆರೋಗ್ಯಕರ ಜೀವನವನ್ನು ಮಾಡಬಹುದು. ಈ ಎಲ್ಲ ಸದುದ್ದೇಶಗಳಿಗಾಗಿ ಸಕಲೇಶಪುರದಲ್ಲಿ ಜೈನ್ ಫಾರ್ಮ್ಸ್ ಅವರು ಕಾಫಿ ಎಸ್ಟೇಟ್ಅನ್ನು ಪರಿಚರಿಸುತ್ತಿದ್ದಾರೆ. ಇದು ಕೂಡ ಕಾನೂನಾತ್ಮಕವಾಗಿದ್ದು, ಮೇಲೆ ಹೇಳಿದ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದೆ.
    ಒಟ್ಟಿನಲ್ಲಿ ಜೈನ್‌ಫಾರ್ಮ್ಸ್ ಒಂದು ಪರಿಸರ ಸ್ನೇಹಿ, ಆರೋಗ್ಯಕರ ಜೀವನದ ಸಂಕೇತ ಎನ್ನಬಹುದು. ಜೈನ್‌ಫಾರ್ಮ್ಸ್ ಕುಟುಂಬದಲ್ಲಿ ನೀವು ಒಬ್ಬರಾಗಬೇಕೇ? ಹಾಗಾದರೆ ಸಂಪರ್ಕಿಸಿ.

    ಮೊಬೈಲ್​ಫೋನ್​: +91-9008651824
    ಇಮೇಲ್: [email protected] ಅಥವಾ www.jainfarms.com 

    ಪ್ರಕೃತಿಯ ಮಡಿಲಲ್ಲಿ ಜೈನ್‌ಫಾರ್ಮ್ಸ್‌ನೊಂದಿಗೆ ಜೀವಿಸಿ...

    ಪ್ರಕೃತಿಯ ಮಡಿಲಲ್ಲಿ ಜೈನ್‌ಫಾರ್ಮ್ಸ್‌ನೊಂದಿಗೆ ಜೀವಿಸಿ...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts