More

    ಪತ್ರಕರ್ತರಿಗೂ ಸೌಲಭ್ಯ ದೊರೆಯಲಿ

    ಶಹಾಪುರ: ಹಗಲೀರುಳು ಶ್ರಮಿಸುತ್ತಿರುವ ಪತ್ರಕರ್ತರ ಕುಟುಂಬಗಳಿಗೂ ಸರ್ಕಾರದ ಸೌಲಭ್ಯ ದೊರೆಯುವಂತಾಗಬೇಕು ಎಂದು ಸಾಹಿತಿ ಸಿದ್ರಾಮ ಹೊನ್ಕಲ್ ಹೇಳಿದರು.

    ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ನಿಂದ ಶುಕ್ರವಾರ ಹಮ್ಮಿಕೊಂಡ ಪತ್ರಿಕಾದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನದಲ್ಲಿ ಪತ್ರಿಕಾ ರಂಗ, ತನ್ನ ಸ್ವಾಧೀನತೆ ಕಳೆಗುಂದುತ್ತಿದ್ದು, ಪ್ರಾಮಾಣಿಕ ಕರ್ತವ್ಯ ನಿಷ್ಠೆಯ ವರದಿಗಳು ಮರೀಚಿಕೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

    ಕರೊನಾ ವಾರಿಯರ್ಸ್ಗಳಾಗಿ ಸತತ ಮೂರ್ನಾಲ್ಕು ತಿಂಗಳ ಕಾಲ ಶ್ರಮಿಸುತ್ತಿರುವುದರ ಜತೆಗೆ ಸಾಮಾಜಿಕ ಜಾಗೃತಿಗೆ ಮುಂದಾದ, ಪತ್ರಕರ್ತರ ಸೇವೆ ಶ್ಲಾಘನೀಯ. ಸರ್ಕಾರ ಅವರ ಶ್ರಮ ಪರಿಗಣಿಸಿ ಅವರ ಕುಟುಂಬಕ್ಕೂ ಭದ್ರತೆ ನೀಡುವುದರ ಜತೆಗೆ ಪ್ರತೇಕ ಕೋವಿಡ್ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು.

    ತಹಸೀಲ್ದಾರ್ ಜಗನ್ನಾಥ ರಡ್ಡಿ ಮಾತನಾಡಿ, ಪತ್ರಕರ್ತರ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದ್ದು, ಅವರ ಸೇವೆ ಅನ್ಯನ್ಯವಾಗಿದೆ. ಕರೊನಾ ವೈರಸ್ ಸಮಯದಲ್ಲಿ ಸಕರ್ಾರದೊಂದಿಗೆ ಸಾಮಾಜಿಕ ಚಿಂತನೆ ತೊಡಗಿಸಿಕೊಂಡು ಅಧಿಕಾರಿಗಳೊಂದಿಗೆ ಶ್ರಮಿಸಿದ ಸೇನಾನಿಗಳಾಗಿದ್ದಾರೆ ಎಂದರು. ನಗರಸಭೆ ಸದಸ್ಯ ಶಿವಕುಮಾರ ತಳವಾರ ಮಾತನಾಡಿದರು. ಈ ವೇಳೆ ವಡಗೇರಾ, ಶಹಾಪುರ ತಾಲೂಕು ಪತ್ರಕರ್ತರಿಗೆ ಗುರುತಿನ ಕಾಡರ್್ ಮತ್ತು ಮಾಸ್ಕ್ ವಿತರಣೆ ಮಾಡಲಾಯಿತು.

    ಕರೊನಾ ಸೇನಾನಿಗಳಾಗಿ ಸೇವೆ ಸಲ್ಲಿಸುತ್ತಿರುವ ತಹಸೀಲ್ದಾರ್ ಜಗನ್ನಾಥ ರಡ್ಡಿ ಮತ್ತು ಸಾಹಿತಿ ಸಿದ್ರಾಮ ಹೊನ್ಕಲ್ ಅವರನ್ನು ಗೌರವಿಸಲಾಯಿತು. ಅಧ್ಯಕ್ಷ ಈರಣ್ಣ ಹಾದಿಮನಿ, ವಡಗೇರಾ ಅಧ್ಯಕ್ಷ ಬಸವರಾಜ ಕರೆಗಾರ, ಮಂಜುನಾಥ ಬಿರಾದಾರ, ಶಾಂತಪ್ಪ ಸಾಲಿಮನಿ, ಮರಿಗೌಡ ಪಾಟೀಲ್, ಪದ್ದಣ್ಣ, ಯಲ್ಲಾಲಿಂಗ, ಭೀಮರಾಯ, ಮುಜ್ಜಾವುದ್ಧೀನ್ ಪಟೇಲ್, ಬಸವರಾಜ ಕಾಡಂಗೇರಾ, ಚನ್ನಬಸವ ದೊಡ್ಡಮನಿ ಸೇರಿ ಇತರರಿದ್ದರು. ವಿಶಾಲ ಸಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮಾಶಂಕರ ಬೆನಕನಳ್ಳಿ ನಿರೂಪಣೆ ಮಾಡಿದರು. ವೆಂಕಟೇಶ ಆಲೂರ ವಂದಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts