More

    ಸಾಹಿತ್ಯ, ಸಂಸ್ಕೃತಿಗಳ ತಪೋಭೂಮಿ ಕರ್ನಾಟಕ: ಶಾಸಕ ಬಸವರಾಜ್ ಶಿವಗಂಗಾ ಬಣ್ಣನೆ

    ಬಸವಾಪಟ್ಟಣ: ವಿಭಿನ್ನ ಕಲೆ, ಸಂಸ್ಕೃತಿಗಳ ತಪೋಭೂಮಿಯಾಗಿರುವ ಕರ್ನಾಟಕವು ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಮೆರೆಯುತ್ತಿದೆ ಎಂದು ಶಾಸಕ ಶಿವಗಂಗಾ ಬಸವರಾಜ್ ಬಣ್ಣಿಸಿದರು.

    ತಾಲೂಕಿನ ಹಿರೆಕೋಗಲೂರು ಗ್ರಾಮದ ತರಳಬಾಳು ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕರ್ನಾಟಕವು ಕರ್ಮಭೂಮಿ ಹಾಗೂ ಧರ್ಮಭೂಮಿಯಾಗಿದ್ದು, ಇಲ್ಲಿನ ಮಣ್ಣಿನ ಪ್ರತಿ ಕಣ ಕಣಗಳೂ ಕಲೆ, ಸಾಹಿತ್ಯ, ಸಂಸ್ಕೃತಿಗಳ ಪ್ರಜ್ಞೆ ಜಾಗೃತಗೊಳಿಸುತ್ತದೆ ಎಂದರು.

    ಟಿವಿ ಮತ್ತು ಮೊಬೈಲ್‌ಗಳ ಪ್ರಭಾವದಿಂದಾಗಿ ಯುವಕರಲ್ಲಿ ಕಲಾಶಕ್ತಿ ಶೂನ್ಯದೆಡೆಗೆ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ವೀರಗಾಸೆ, ಡೊಳ್ಳುಕುಣಿತ, ಹಗಲು ವೇಷ, ಗಮಕ, ಬಯಲಾಟ, ಶಾಸ್ತ್ರೀಯ ಸಂಗೀತ, ವಚನ ಗಾಯನ, ಸುಗಮ ಸಂಗೀತ, ಜಾನಪದ ಗೀತೆ ಹಾಗೂ ನೃತ್ಯ ರೂಪಕಗಳು ಪ್ರೇಕ್ಷಕರ ಮನಗೆದ್ದವು.

    ಗ್ರಾಪಂ ಅಧ್ಯಕ್ಷೆ ಜಿ.ಆರ್. ಸುಮಾ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರವಿಚಂದ್ರ, ಕಸಾಪ ಅಧ್ಯಕ್ಷ ಎಲ್.ಜಿ. ಮಧುಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಜಿ. ಸ್ವಾಮಿ, ಡಾ.ಎಂ. ಚಿದಾನಂದಮೂರ್ತಿ ಪ್ರತಿಷ್ಠಾನದ ಅಧ್ಯಕ್ಷ ಎಚ್.ಯು. ಮಲ್ಲಿಕಾರ್ಜುನ್, ಮುಖ್ಯಶಿಕ್ಷಕ ಎಂ.ಬಿ. ಪ್ರಭಾಕರ್, ಎಸ್‌ಡಿಎಂಸಿ ಅಧ್ಯಕ್ಷ ಎಚ್.ಆರ್. ಸುರೇಶ್, ಸಿಆರ್‌ಪಿ ತಿಮ್ಮೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts