More

    ಸಾಹಿತ್ಯ ಸಮ್ಮೇಳನ ಸಮಾರೋಪ; ಬೇಡ್ತಿ-ವರದಾ ನದಿ ಜೋಡಣೆ ಸೇರಿ 4 ಪ್ರಮುಖ ಹಕ್ಕೋತ್ತಾಯ ಮಂಡನೆ


    ರಾಣೆಬೆನ್ನೂರ: ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ನಗರದ ಎಪಿಎಂಸಿ ಸಭಾಭವನದಲ್ಲಿ ಆಯೋಜಿಸಿದ್ದ ಎರಡು ದಿನ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಪಾಟೀಲ ಪುಟ್ಟಪ್ಪ ಅವರ ಸ್ಮಾರಕ ಭವನ ನಿರ್ಮಿಸುವುದು ಹಾಗೂ ಬೇಡ್ತಿ-ವರದಾ ನದಿ ಜೋಡಣೆ ಸೇರಿ ನಾಲ್ಕು ಪ್ರಮುಖ ಹಕ್ಕೋತ್ತಾಯ ಮಂಡಿಸುವ ಮೂಲಕ ತೆರೆ ಎಳೆಯಲಾಯಿತು.
    ನಂತರ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಜಿಲ್ಲೆಯ ರೈತರಿಗೆ ನೀರು ಒದಗಿಸುವ ದೃಷ್ಟಿಯಿಂದ ಸರ್ಕಾರ ಬೇಡ್ತಿ-ವರದಾ ನದಿ ಜೋಡಣೆ ಮಾಡಲೇಬೇಕು. ರಾಜ್ಯ ಸರ್ಕಾರ ಇಲ್ಲಿಂದ ಬೇಡಿಕೆ ಕಳುಹಿಸಿದರೆ ಕೇಂದ್ರದಲ್ಲಿ ಜಾರಿ ಆಗಲಿದೆ. ಇದಕ್ಕೆ ಯಾರೇ ವಿರೋಧ ಮಾಡಿದರೂ ಸರ್ಕಾರ ಹಿಂದೇಟು ಹಾಕದೆ ಜಾರಿ ಮಾಡಬೇಕು. ಈ ಬಗ್ಗೆ ನಾನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೆ ಒತ್ತಾಯಿಸಿದ್ದೇನೆ. ಆದರೆ, ಇನ್ನೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಮೂಲಕವಾದರೂ ಹಕ್ಕೋತ್ತಾಯ ಹೋದ ಮೇಲೆ ಮಾಡಬೇಕು ಎಂದು ಒತ್ತಾಯಿಸಿದರು.
    ವಿವೇಕಾನಂದ ಆಶ್ರಮದ ಪ್ರಕಾಶಾಕಾನಂದ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ವೀರೇಶ ಜಂಬಗಿ ಹಕ್ಕೋತ್ತಾಯ ಮಂಡಿಸಿದರು. ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ. ಶಿವಾನಂದ ಕೆಳಗಿನಮನಿ ಸಮಾರೋಪ ನುಡಿಗಳನ್ನಾಡಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
    ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಪ್ರಮುಖರಾದ ಪುಟ್ಟಪ್ಪ ಮರಿಯಮ್ಮನವರ, ಏಕನಾಥ ಬಾನುವಳ್ಳಿ, ಎಸ್.ಎಸ್. ರಾಮಲಿಂಗಣ್ಣನವರ, ಮಂಜುನಾಥ ಓಲೇಕಾರ, ಪ್ರಕಾಶ ಜೈನ್, ಡಾ. ಬಸವರಾಜ ಕೇಲಗಾರ, ಕೆ.ಎಚ್. ಮುಕ್ಕಣ್ಣನವರ, ಡಾ. ಅನಿಲ ಬೆನ್ನೂರ, ಡಾ. ನಾಗರಾಜ, ಭಾರತಿ ಜಂಬಗಿ, ವಸಂತಾ ಹುಲ್ಲತ್ತಿ ಹಾಗೂ ಕಸಾಪ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
    ಹಕ್ಕೋತ್ತಾಯಗಳು…

    • ಹಲಗೇರಿಯಲ್ಲಿ ಪಾಟೀಲ ಪುಟ್ಟಪ್ಪ ಅವರ ಸ್ಮಾರಕ ಭವನ ನಿರ್ಮಿಸಬೇಕು.
    • ಬೆಡ್ತಿ-ವರದಾ ನದಿಗಳನ್ನು ಜೋಡಿಸಬೇಕು.
    • ಹಾವೇರಿ ಜಿಲ್ಲೆಗೆ ಕೆಸಿಸಿ ಬ್ಯಾಂಕ್ ಪ್ರತ್ಯೇಕಗೊಳಿಸಬೇಕು.
    • ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ರಾಣೆಬೆನ್ನೂರಿನಲ್ಲಿ ನಡೆಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts