More

    ಚುಟುಕು ಸಾಹಿತ್ಯ ಸಮ್ಮೇಳನೋತ್ತರ ಸಾಹಿತ್ಯ ಸಂಭ್ರಮ

    ಮಂಗಳೂರು: ಪ್ರತಿಯೊಬ್ಬರೂ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ನಾವು ಎಷ್ಟೇ ಭಾಷೆಗಳನ್ನು ಕಲಿತರೂ ತುಳು ಭಾಷೆಯನ್ನು ಮರೆಯಬಾರದು. ತುಳುವನ್ನೇ ಹೆಚ್ಚು ಹೆಚ್ಚು ಬಳಸಿ, ಬೆಳೆಸಬೇಕು ಎಂದು ಕರಾವಳಿ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಎಸ್.ಗಣೇಶ್ ರಾವ್ ಹೇಳಿದರು.

    ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಮಂಗಳೂರು ತಾಲೂಕು ಘಟಕ ಹಾಗೂ ಪಕ್ಷಿಕೆರೆಯ ವಿನಾಯಕ ಮಿತ್ರ ಮಂಡಳಿ ಆಶ್ರಯದಲ್ಲಿ ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ 9ನೇ ಚುಟುಕು ಸಾಹಿತ್ಯ ಸಮ್ಮೇಳನೋತ್ತರ ಸಾಹಿತ್ಯ ಸಂಭ್ರಮ ಮತ್ತು ವಿದ್ಯಾರ್ಥಿ ಸನ್ಮಾನ ಕಾರ್ಯಕ್ರಮ ಭಾನುವಾರ ಉದ್ಘಾಟಿಸಿ ಮಾತನಾಡಿದರು.

    ನಾವು ಎಷ್ಟೇ ಶ್ರೀಮಂತಿಕೆ ಗಳಿಸಿದರೂ, ಎಷ್ಟೇ ವಿದ್ಯೆ ಕಲಿತರೂ ಬದುಕಿ ಬಾಳಿದ ನೆಲದ ಪರಂಪರೆಯ ನಂಟು ಕಳೆದುಕೊಳ್ಳಬಾರದು ಎಂದರು.

    ಗಂಗಾಧರ ಕಿದಿಯೂರು ರಚಿಸಿರುವ 14 ನಾಟಕಗಳನ್ನು ಒಳಗೊಂಡ ಮೆಣ್ಕುನ ಸಿರಿಸಿಂಗಾರ ಕೃತಿಯನ್ನು ಬಿಡುಗಡೆ ಮಾಡಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲಸಾರ್, ವಿದ್ಯಾರ್ಥಿಗಳು ಗುರುಹಿರಿಯರಿಗೆ ಗೌರವ ಕೊಟ್ಟು ಬದುಕಬೇಕು. ಸಾಧಕ ಬಾಧಕ ನೋಡಿ ಬದುಕಿನಲ್ಲಿ ಹೆಜ್ಜೆ ಇಡಬೇಕು ಎಂದರು.

    ಕೃತಿಯಲ್ಲಿ ವಿಜಯಲಕ್ಷ್ಮಿ, ಬದುಕೊಂಜಿ ಸರಿಗಮ, ದೇವೆರ್ ಮಲ್ಲೆ, ತೆಲಿಕೆ ನಲಿಕೆದ ಬದ್‌ಕ್, ಪಿಂಗಾರೆದ ಬಾಲೆ ಸಿರಿ, ಮೊದಲಾದ 14 ನಾಟಕಗಳು ಇವೆ. ಕೆಲವು ನಾಟಕಗಳು 100ಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡಿವೆ. ಇನ್ನು ಕೆಲವು ನಾಟಕಗಳು ವಿವಿಧ ಪ್ರಶಸ್ತಿಗಳನ್ನು ಗಳಿಸಿವೆ ಎಂದು ತಾರಾ ಆಚಾರ್ಯ ಹೇಳಿದರು.

    ಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಂಚಾಲಕ ಎಂ.ಜಿ.ಆರ್.ಅರಸ್, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು, ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಕಾ.ವೀ. ಕೃಷ್ಣದಾಸ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಉದ್ಯಮಿ ಶ್ರೀಪತಿ ಭಟ್, ಯುಗಪುರುಷ ಪತ್ರಿಕೆಯ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ನಾಟಕಕಾರ ಗಂಗಾಧರ ಕಿದಿಯೂರು ಉಪಸ್ಥಿತರಿದ್ದರು. ಬಳಿಕ ನಡೆದ ಚುಟುಕು ಕವಿಗೋಷ್ಠಿಯಲ್ಲಿ 30ಕ್ಕೂ ಅಧಿಕ ಕವಿಗಳು ಪಾಲ್ಗೊಂಡರು.

    ಸಾಧಕರಿಗೆ ಸನ್ಮಾನ:
    ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೇಪುಣಿ, ಸಂಘಟಕ ಶಿವರಾಮ ಕಾಸರಗೋಡು, ವಕೀಲ ದಯಾನಂದ ರೈ, ಪುರೋಹಿತ ಬಾಲಕೃಷ್ಣ ಕಾರಂತ, ಶಿಕ್ಷಕ ಪ್ರಕಾಶ್ ಮೇಲಾಂಟ, ಕಲಾವಿದ ನರೇಂದ್ರ ರೈ ಕೆರೆಕಾಡು ಹಾಗೂ ದಯಾನಂದ ಜಿ. ಕತ್ತಲ್‌ಸಾರ್ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 600ಕ್ಕೂ ಅಧಿಕ ಅಂಕ ಹಾಗೂ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ 575ಕ್ಕೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts