More

    ಅಕ್ಷರಸ್ಥ ಗ್ರಾಮವನ್ನಾಗಿಸಲು ಕೈಜೋಡಿಸಿ; ಸಾಕ್ಷರತಾ ಇಲಾಖೆ ಜಿಲ್ಲಾ ಸಂಯೋಜಕ ಚಂದ್ರು

    ಕನಕಗಿರಿ: ಗ್ರಾಮೀಣ ಪ್ರದೇಶಗಳ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಲು ಸ್ಥಳೀಯರನ್ನು ಸ್ವಯಂ ಸೇವಕರನ್ನಾಗಿ ನೇಮಿಸಿಕೊಂಡು ಶಿಕ್ಷಣ ನೀಡಲಾಗುತ್ತಿದೆ ಎಂದು ಸಾಕ್ಷರತಾ ಇಲಾಖೆ ಜಿಲ್ಲಾ ಸಂಯೋಜಕ ಚಂದ್ರು ಹೇಳಿದರು.

    ಪಟ್ಟಣದ ಸರ್ಕಾರಿ ಕನ್ನಡ ಶಾಸಕರ ಪ್ರಾಥಮಿಕ ಶಾಲೆಯಲ್ಲಿ ಸಾಕ್ಷರತಾ ಸ್ವಯಂ ಸೇವಕರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಮೌಲ್ಯಮಾಪನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಸಾಕ್ಷರತಾ ಇಲಾಖೆ ಸಂಪೂರ್ಣ ಅಕ್ಷರಸ್ಥ ಗ್ರಾಮವನ್ನಾಗಿಸಲು ತಾಲೂಕಿನ ಚಿಕ್ಕಮಾದಿನಾಳ ಹಾಗೂ ನವಲಿ ಗ್ರಾಪಂ ಆಯ್ಕೆ ಮಾಡಿದೆ. ಸ್ಥಳೀಯ ಪದವೀಧರ ಸ್ವಯಂ ಸೇವಕರನ್ನಾಗಿ ನೇಮಕ ಮಾಡಿಕೊಂಡಿದ್ದು, ಅವರು ಪ್ರತಿ ನಿತ್ಯ ಸಂಜೆ ಗ್ರಾಮಗಳಲ್ಲಿ ಅನಕ್ಷರಸ್ಥರಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದರು.

    ಬಿಆರ್‌ಪಿ ಸುಮಂಗಲಾ ಮಾತನಾಡಿ, ಪಾಲಕರು ನಮ್ಮನ್ನು ಶಿಕ್ಷಣವಂತರನ್ನಾಗಿಸಿದ್ದಾರೆ. ನಾವು ಪಾಲಕರು ಹಾಗೂ ನೆರೆ ಹೊರೆಯವರನ್ನು ಅಕ್ಷರಸ್ಥರನ್ನಾಗಿ ಮಾಡುವ ಅವಕಾಶ ದೊರೆತಿದ್ದು, ಅದನ್ನು ಸ್ವಯಂ ಸೇವಕರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

    ಸಂಪನ್ಮೂಲ ವ್ಯಕ್ತಿಗಳಾದ ಛತ್ರಪ್ಪ ತಂಬೂರಿ, ಸುಂಕಪ್ಪ, ಸಿಆರ್‌ಪಿಗಳಾದ ವಿನಾಯಕ ಬಂಡಿ, ಶಿವಪ್ಪ ಹೆಳವರ, ರಾಜಕುಮಾರ, ಮಹೇಶ ಕುಮಾರ, ಹಿರಿಯ ಶಿಕ್ಷಕರಾದ ಮಲ್ಲಿಕಾರ್ಜುನ ಕುಷ್ಟಗಿ, ಮಲ್ಲಿಕಾರ್ಜುನ ಸಿರಿಗೇರಿ, ತಾಲೂಕು ಶಿಕ್ಷಕರ ಸಂಘದ ಖಜಾಂಚಿ ಮಂಜುಳಾ ಶ್ಯಾವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts