More

    ಅರ್ಧ ಗಂಟೆಗೂ ಹೆಚ್ಚು ಕಾಲ ಮೊಬೈಲ್ ​ಕಿವಿಗಿಟ್ಟುಕೊಂಡರೆ ಬಿಪಿ, ಹೃದಯಾಘಾತ ಸಮಸ್ಯೆ ಆಗೋದು ಪಕ್ಕಾ..!

    ಬೀಜಿಂಗ್: ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹಿಂದಿನ ಜೀವನಶೈಲಿಗೆ ಹೋಲಿಸಿದರೆ ನಮ್ಮ ಜೀವನ ಪದ್ಧತಿ ಸಾಕಷ್ಟು ಬದಲಾಗಿದೆ. ಒಂದರ್ಥದಲ್ಲಿ ಯಾಂತ್ರಿಕ ಜೀವನಕ್ಕೆ ಒಗ್ಗಿಕೊಂಡಿದ್ದೇವೆ. ಇದೇ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತಿದೆ.

    ದೈಹಿಕ ವ್ಯಾಯಾಮದ ಕೊರತೆಯಿಂದಾಗಿ, ಹೆಚ್ಚಿನ ಜನರು ಇಂದು ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ಈ ಕಾಯಿಲೆಗಳಲ್ಲಿ ಪ್ರಮುಖವಾದವು ಎಂದರೆ ಹೃದಯ ಸಂಬಂಧಿತ ಕಾಯಿಲೆಗಳಾದ ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗುತ್ತಿದೆ. ಬಹುತೇಕರು ಏಕಾಏಕಿ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ.

    ಚೀನಾದ ಗುವಾಂಗ್‌ಝಾವು ಪ್ರಾಂತ್ಯದ ಸದರ್ನ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿನ ಸಂಶೋಧಕ ಶಿಯಾನ್‌ಹುಯಿ ಕಿನ್ ಅವರು ನಡೆಸಿರುವ ಅಧ್ಯಯನದಲ್ಲಿ ಅತಿಹೆಚ್ಚು ಕಾಲ ಮೊಬೈಲ್ ಫೋನ್ ಕಿವಿಗಿಟ್ಟುಕೊಂಡಿರುವುದು ಕೂಡ ಒಂದು ಎನ್ನುತ್ತಿದೆ.

    ‘ದಿನವೊಂದಕ್ಕೆ ಎಷ್ಟು ನಿಮಿಷ ಜನರು ಮೊಬೈಲ್‌ ಫೋನ್ ಅನ್ನು ತಮ್ಮ ದೇಹಕ್ಕೆ ಹತ್ತಿರದಲ್ಲಿ ಇರಿಸಿಕೊಂಡಿರುತ್ತಾರೆ ಎಂಬ ಬಗ್ಗೆ ಸೂಕ್ಷ್ಮ ಅಧ್ಯಯನ ನಡೆಸಿದ್ದೇವೆ. ಮೊಬೈಲ್‌ನ ರೇಡಿಯೋ ಫ್ರೀಕ್ವೆನ್ಸಿ ತರಂಗಾಂತರಗಳು ದೇಹದಲ್ಲಿನ ರಕ್ತದ ಚಲನೆಯನ್ನು ಮೇಲೆ ಬೀರುವ ಪರಿಣಾಮಗಳನ್ನು ಆದ್ಯತೆ ಮೇರೆಗೆ ಗಮನಿಸಲಾಗಿದೆ. ವಾರಕ್ಕೆ 30 ನಿಮಿಷಕ್ಕೂ ಹೆಚ್ಚು ಕಾಲ ಒಂದೇ ಸಮನಾಗಿ ಮೊಬೈಲ್ ಫೋನ್ ಕಿವಿಗಿಟ್ಟುಕೊಂಡ ವ್ಯಕ್ತಿಗಳಲ್ಲಿ ಶೇ. 12ರಷ್ಟು ಜನರ ಮೇಲೆ ರೇಡಿಯೊ ಫ್ರೀಕ್ವೆನ್ಸಿ ಶಕ್ತಿಯು ದುಷ್ಟಪರಿಣಾಮ ಬೀರಿದೆ. ಇವರ ರಕ್ತದೊತ್ತಡ(ಬಿಪಿ) ಏರುಪೇರಾಗಿದೆ. ಪರಿಣಾಮ ಹೃದಯಾಘಾತ ಉಂಟಾಗುವ ಅಪಾಯ ಕಂಡುಬಂದಿದೆ,” ಎಂದು ಕ್ವಿನ್ ತಿಳಿಸಿದ್ದಾರೆ.

    ಅಧ್ಯಯನ: ಸಂಶೋಧಕರು ತಮ್ಮ ಅಧ್ಯಯನಕ್ಕೆ 37 ರಿಂದ 13 ವರ್ಷ ವಯಸ್ಸಿನ 2.12 ಲಕ್ಷ ಮಂದಿಯನ್ನು 12 ವರ್ಷಕ್ಕೂ ಹೆಚ್ಚು ಕಾಲ ಅಧ್ಯಯನಕ್ಕೆ ಬಳಸಿದ್ದಾರೆ. ಜನರು ಅನುಭವಿಸುತ್ತಿರುವ ದೈಹಿಕ, ಮಾನಸಿಕ ಬದಲಾವಣೆಗಳ ಬಗ್ಗೆ ಮೊಬೈಲ್ ಫೋನ್ ಮೂಲಕವೇ ಪ್ರಶ್ನೆಗಳು ಕೇಳಿ, ಮಾಹಿತಿ ಸಂಗ್ರಹಿಸಲಾಗಿದೆ.

    ಇದನ್ನೂ ಓದಿ: `ಕರ್ನಾಟಕ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ಸಾಧ್ಯತೆ; ಕಟೀಲ್ ಬದಲಾವಣೆಗೆ ಪಕ್ಷದಲ್ಲೇ ಒತ್ತಾಯ…

    ವಾರಕ್ಕೆ 30 ರಿಂದ 59 ನಿಮಿಷಗಳು, 1-3 ಗಂಟೆಗಳು, 4-6 ಗಂಟೆಗಳು ಮತ್ತು 6 ಗಂಟೆಗಳಿಗೂ ಹೆಚ್ಚು ಕಾಲ ಮೊಬೈಲ್‌ ಬಳಸಿದವರು ಕ್ರಮವಾಗಿ 8%, 13%, 16% ಮತ್ತು 25% ರಕ್ತದೊತ್ತಡ ಸಮಸ್ಯೆಗೆ ಗುರಿಯಾಗುವ ಅಪಾಯದಲ್ಲಿದ್ದಾರೆ ಎಂದು ವರದಿ ಎಚ್ಚರಿಸಿದೆ. ‘ಯುರೋಪಿಯನ್ ಹಾರ್ಟ್ ಜರ್ನಲ್-ಡಿಜಿಟಲ್ ಹೆಲ್ತ್‌ ನಲ್ಲಿ ವರದಿಯನ್ನು ಪ್ರಕಟಿಸಲಾಗಿದೆ.

    ಮೊಬೈಲ್​​ ಬಳಕೆಯಿಂದ ಆಗುವ ಸಮಸ್ಯೆಗಳು:

    ರೇಡಿಯೊ ತರಂಗಾಂತರ ಶಕ್ತಿಯಿಂದ ರಕ್ತದೊತ್ತಡದ ಮೇಲೆ ಪರಿಣಾಮ ಎಂದ ಅಧ್ಯಯನ ವರದಿ.12 ವರ್ಷಕ್ಕೂ ಹೆಚ್ಚು ಕಾಲ ಮೊಬೈಲ್‌ ಬಳಕೆದಾರರ ಮೇಲೆ ನಿಗಾ, 2 ಲಕ್ಷ ಜನರ ದೈಹಿಕ-ಮಾನಸಿಕ ಸ್ಥಿತಿ ಅಧ್ಯಯನಮೊಬೈಲ್ ಬಳಕೆಯಿಂದ ಆರೋಗ್ಯದಲ್ಲಿ ಏರುಪೇರು ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ. ಕರೆಗಳ ಮಾತುಕತೆ ಅವಧಿಯು ಕಡಿಮೆ ಇದ್ದಷ್ಟೂ ಆರೋಗ್ಯ ರಕ್ಷಣೆಯಾಗಲಿದೆ. ಅನಗತ್ಯ ಮಾತುಕತೆ ಹಾಗೂ ದೀರ್ಘಾವಧಿ ಬಳಕೆಯು ದೈಹಿಕ-ಮಾನಸಿಕ ಅಸಮತೋಲನಕ್ಕೆ ಕಾರಣವಾಗಲಿದೆ.

    ಸಕ್ಕರೆನಾಡಲ್ಲಿ ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts