More

    ಒಂದೂವರೆ ತಿಂಗಳಲ್ಲಿ ರಾಜ್ಯಾದ್ಯಂತ 71 ಕೋಟಿ ರೂ.ಮೌಲ್ಯದ ಮದ್ಯ ಜಪ್ತಿ; ಪ್ರತಿ ಹಳ್ಳಿಗಳಲ್ಲೂ ಅಕ್ರಮ ಮದ್ಯ ಮಾರಾಟ

    ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯದ ಕಿಕ್ ಜೋರಾಗಿದೆ. ಮಾ.4ರಿಂದ ಏ.16ರವರೆಗೆ 71 ಕೋಟಿ ರೂ.ಮೌಲ್ಯದ 10,62,946 ಲೀ.ಮದ್ಯ ಜಪ್ತಿಯಾಗಿದೆ. 16,965 ಕೇಸ್‌ಗಳು ದಾಖಲಾದರೆ, 2,552 ಘೋರ ಪ್ರಕರಣಗಳು ವರದಿಯಾಗಿವೆ. ಅಕ್ರಮವಾಗಿ ಮದ್ಯ ಮಾರಾಟ, ದಾಸ್ತಾನು ಹಾಗೂ ಸಾಗಾಣೆ ಮಾಡುತ್ತಿದ್ದ ವೇಳೆ 18,127 ಮಂದಿಯನ್ನು ಬಂಧಿಸಿರುವ ಅಬಕಾರಿ ಇಲಾಖೆ, 1,601 ವಾಹನಗಳನ್ನು ವಶಪಡಿಸಿಕೊಂಡಿದೆ.

    ಇದನ್ನೂ ಓದಿ: PHOTOS | ಸ್ಕೇಟಿಂಗ್ ಬೋರ್ಡ್ ಮೇಲೆ ಅಜ್ಜಿಯಂದಿರ ಸಾಹಸ! ಫೋಟೋ ನೋಡಿ ಗೊಂದಲಕ್ಕೊಳಗಾದ ನೆಟ್ಟಿಗರು…

    ಶಾಂತಿನಗರ ಕ್ಷೇತ್ರದಲ್ಲಿ 5 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿ

    ದಿನದಿಂದ ದಿನಕ್ಕೆ ಚುನಾವಣೆ ಕಾವು ಏರುತ್ತಿರುವ ನಡುವೆಯೂ ರಾಜ್ಯದ 224 ಕ್ಷೇತ್ರಗಳಲ್ಲಿ ಹೆಂಡದ ಹೊಳೆಯೇ ಹರಿಯುತ್ತಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಗಿಂತ ಶಾಂತಿನಗರ ಕ್ಷೇತ್ರದಲ್ಲಿ ಅತಿ ಹೆಚ್ಚು 5 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿವಾಗುವ ಮೂಲಕ ಮೊದಲ ಸ್ಥಾನದಲ್ಲಿದೆ. ಮಹದೇವಪುರ, ಯಲಹಂಕ ಮತ್ತು ಅನೇಕಲ್ ಕ್ಷೇತ್ರಗಳು ಕ್ರಮವಾಗಿ 2,3 ಮತ್ತು 4 ಸ್ಥಾನಗಳಿವೆ. ಹುಣಸೂರು, ಚಾಮುಂಡೇಶ್ವರಿ, ವರುಣ, ಯಶವಂತಪುರ, ಅನೇಕಲ್ ಹಾಗೂ ಮಲ್ಲೇಶ್ವರ ಕ್ಷೇತ್ರಗಳಲ್ಲೂ ಸರಾಸರಿ 50 ಸಾವಿರ ಲೀ.ಮದ್ಯ ವಶಪಡಿಸಿಕೊಳ್ಳಲಾಗಿದೆ.

    ನಿಗದಿತ ದರಗಿಂತ 40-50 ರೂ.ಹೆಚ್ಚಿಗೆ ಮಾರಾಟ

    ಅಲ್ಲದೆ, ಪ್ರತಿ ಹಳ್ಳಿಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಕಿರಣಿ ಅಂಗಡಿ, ಮಾಂಸಹಾರ ಹೋಟೆಲ್, ಡಾಬಾ ಮತ್ತು ಮನೆಗಳಲ್ಲಿ ಮದ್ಯದ ಗಮಟು ಮೂಗಿಗೆ ಬಡಿಯುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಪ್ರತಿ ಬಾಟಲ್‌ಗೆ ನಿಗದಿತ ದರಗಿಂತ 40-50 ರೂ.ಹೆಚ್ಚಿಗೆ ಮಾರಾಟ ಮಾಡಿ ಹಣ ಮಾಡುವ ದಂಧೆಯಲ್ಲಿ ಕೆಲವರು ತೊಡಗಿದ್ದಾರೆ.

    ಇದನ್ನೂ ಓದಿ: ರಾಹುಲ್ ಗಾಂಧಿ ಪ್ರಧಾನಿ ಆಗುವವರೆಗೆ ಸಾಲ ನೀಡುವುದಿಲ್ಲ! ವೈರಲ್ ಆಯ್ತು ಪಾನ್ ಅಂಗಡಿ ಮುಂದಿರುವ ಬೋರ್ಡ್

    ಬಿಯರ್ ಮಾರಾಟ ಹೆಚ್ಚಳ

    ಬೇಸಿಗೆ ಹಿನ್ನೆಲೆಯಲ್ಲಿ ಇಂಡಿಯನ್ ಮೇಡ್ ಲಿಕ್ಕರ್‌ಗಿಂತ(ಐಎಂಎಲ್) ಬಿಯರ್ ಖರೀದಿಸಿ ಕುಡಿಯುವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. 2023ರ ಏ.1ರಿಂದ ಏ.18ರವೆರೆಗೆ 22.07 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದು, ಶೇ.24 ಬಿಯರ್ ಮಾರಾಟದಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 17.74 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ತಾಪಮಾನ ಹೆಚ್ಚಳದಿಂದ ದೇಹವನ್ನು ತಂಪಾಗಿಸಿಕೊಳ್ಳಲು ಕುಡುಕರ ನೆಚ್ಚಿನ ಬ್ರ್ಯಾಂಡ್ ಬಿಯರ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts