More

    ಲಯನ್ಸ್ ಸಂಸ್ಥೆ ತಾಲೂಕಿಗೆ ಆಸ್ತಿ

    ಸಕಲೇಶಪುರ: ತಾಲೂಕಿನ ಲಯನ್ಸ್ ಸಂಸ್ಥೆ ಪಟ್ಟಣಕ್ಕೆ ಒಂದು ಆಸ್ತಿ ಎಂದು ಶಾಸಕ ಸಿಮೆಂಟ್ ಮಂಜು ಬಣ್ಣಿಸಿದರು.

    ಪಟ್ಟಣದ ಶೀನಪ್ಪ ಶೆಟ್ಟಿ ಕಲ್ಯಾಣ ಮಂಟಪದ ಆವರಣದಲ್ಲಿ ಹಾಸನ ಜಿಲ್ಲಾ ಬಂಟರ ಸಂಘ ಹಾಗೂ ಲಯನ್ಸ್ ಸಂಸ್ಥೆ ವತಿಯಿಂದ ನಿರ್ಮಿಸಲಾಗಿರುವ ಡಯಾಲಿಸಿಸ್ ಘಟಕವನ್ನು ಗುರುವರ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಹಲವಾರು ಸೇವಾ ಸಂಸ್ಥೆಗಳಿವೆ. ಆದರೆ, ಲಯನ್ಸ್ ಸೇವಾ ಸಂಸ್ಥೆ ಇತರ ಸೇವಾ ಸಂಸ್ಥೆಗಳಿಗೆ ಮಾದರಿಯಾಗಿದೆ. ಪಟ್ಟಣದ ಸುಬಾಷ್ ಮೈದಾನದಲ್ಲಿ ಲಯನ್‌ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ರುದ್ರಭೂಮಿ ರಾಜ್ಯದಲ್ಲೇ ಮಾದರಿಯಾಗಿದೆ. ಲಯನ್ಸ್ ಸಂಸ್ಥೆಯು ಇದಲ್ಲದೆ ಪಟ್ಟಣದ ಕ್ರಾರ್ಡ್ ಆಸ್ಪತ್ರೆಗೆ ಐಸಿಯು ವಾರ್ಡ್ ನಿರ್ಮಿಸಿದೆ. ಇದೀಗ ಸಂಸ್ಥೆ ಹಾಸನ ಜಿಲ್ಲಾ ಬಂಟರ ಸಂಘದ ಸಹಯೋಗದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ 3 ಡಯಾಲಿಸಿಸ್ ಯಂತ್ರಗಳನ್ನು ಲೋಕಾರ್ಪಣೆಗೊಳಿಸಿದ್ದು ಡಯಾಲಿಸಿಸ್‌ಗಾಗಿ ದೂರದ ಊರುಗಳಿಗೆ ತೆರಳಬೇಕಿದ್ದ ರೋಗಿಗಳಿಗೆ ಇದು ಸಂಜೀವಿನಿಯಾಗಿದೆ ಎಂದರು.

    ಸಂಜೀವಿನಿ ಸೇವಾ ಟ್ರಸ್ಟ್ ಅಧ್ಯಕ್ಷ ಸಂಜೀತ್ ಶೆಟ್ಟಿ ಮಾತನಾಡಿ, ಲಯನ್ಸ್ ಸಂಸ್ಥೆಗೆ ಹೊಸ ಪ್ರಾಂತಪಾಲರು ಬಂದ ನಂತರ ವೈದ್ಯಕೀಯ,ಸಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಆಗಿವೆ. ಜಿಲ್ಲಾಸ್ಪತ್ರೆಗೆ 10 ಐಸಿಯು ಬೆಡ್, ಎರಡು ಡಯಾಲಿಸಿಸ್ ಯಂತ್ರಗಳು ಕೊಡುಗೆಯಾಗಿ ನೀಡಿದ್ದೇವೆ. ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ 10 ಐಸಿಯು ಬೆಡ್‌ಗಳನ್ನು ಒಳಗೊಂಡ ಸುಸಜ್ಜಿತ ಐಸಿಯು ವಾರ್ಡ್ ನಿರ್ಮಿಸಲಾಗಿದೆ. ಪಟ್ಟಣದ ಹಿಂದೂ ಮುಕ್ತಿಧಾಮವನ್ನು ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಆಧುನಿಕವಾಗಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಚಟುವಟಿಕೆ ಮಾಡಲಾಗುವುದು ಎಂದರು.

    ಉಪವಿಭಾಗಾಧಿಕಾರಿ ಡಾ.ಶ್ರುತಿ, ತಹಸೀಲ್ದಾರ್ ಮೇಘನಾ, ಮಂಗಳೂರಿನ ಎ.ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ, ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಅಮರ್‌ನಾಥ್ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಿಲ್, ಲಯನ್ಸ್ ಜಿಲ್ಲಾ ಪ್ರಾಂತಪಾಲ ಡಾ.ಮೆಲ್ವಿನ್ ಡಿಸೋಜಾ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts